Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

43 ವರ್ಷಗಳ ನಂತರ ಸೇರಿದ ಹಳೇ ವಿದ್ಯಾರ್ಥಿಗಳು ಬಾಲ್ಯದ ನೆನಪುಗಳ ಮೆಲುಕು

ಬೈಲಹೊಂಗಲ: ತಾಲ್ಲೂಕಿನ ಸಂಪಗಾವಿಯ ಆರ್‌ಇಎಸ್‌ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ 1980–81ನೇ ಬ್ಯಾಚ್‌ನ ವಿದ್ಯಾರ್ಥಿಗಳ ಸ್ನೇಹ ಬಳಗವು ಸಂಪಗಾವಿಯ ಬೈಲಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಗುರುವಂದನೆ ಮತ್ತು ಸ್ನೇಹ ಸಂಗಮ ಕಾರ್ಯಕ್ರಮ ಹಮ್ಮಿಕೊಂಡಿತ್ತು.

43 ವರ್ಷಗಳ ನಂತರ ಸೇರಿದ ಹಳೇ ವಿದ್ಯಾರ್ಥಿಗಳು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ತಾವು ಕಲಿತ ಶಾಲೆ ಕಂಡು ಪುಳಕಗೊಂಡರು.

ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಪ್ರೊ.ವಿಜಯಲಕ್ಷ್ಮಿ ಪುಟ್ಟಿ, ‘ಗುರು ಹಾಗೂ ಶಿಷ್ಯ ಪರಂಪರೆ ನಮ್ಮಲ್ಲಿ ಮಹತ್ವ ಪಡೆದಿದೆ. ಪ್ರತಿಯೊಬ್ಬರೂ ತಮ್ಮ ಶಿಕ್ಷಕರು, ಶಾಲೆ, ಊರು, ಹೆತ್ತವರು ಮತ್ತು ಸಮಾಜದ ಋಣ ತೀರಿಸಬೇಕು’ ಎಂದು ಕರೆಕೊಟ್ಟರು.

ಸಾನ್ನಿಧ್ಯ ವಹಿಸಿದ್ದ ಚನ್ನವೀರಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಎಸ್‌.ಸಿ.ಹಳ್ಳೂರ, ಕೆ.ಕೆ.ಹಾರೂಗೊಪ್ಪ, ಎಂ.ವೈ.ರಾವುಳ, ಸುಮಿತ್ರಾ ಶರಣಪ್ಪನವರ, ಎ.ಎಂ.ಲೋದಿ, ಎಸ್‌.ಎಸ್‌.ಕುಂಬಾರ, ಬಿ.ಎಸ್‌.ಸಿದ್ನಾಳ, ಪಿ.ಬಿ.ಗುರುಪುತ್ರನವರ, ಪತ್ರೆಪ್ಪ ಹುಣಶಿಕಟ್ಟಿ ಅವರನ್ನು ಸತ್ಕರಿಸಲಾಯಿತು.

ನಿವೃತ್ತ ಶಿಕ್ಷಕ ಬಿ.ಬಿ.ಚರಂತಿಮಠ, ಗ್ರಾ.ಪಂ ಅಧ್ಯಕ್ಷ ಶ್ರೀಕಾಂತ ಹಲ್ಕಿ ಆರ್‌ಇಎಸ್‌ ಪ್ರೌಢಶಾಲೆ ಅಧ್ಯಕ್ಷ ಶಂಕ್ರೆಪ್ಪ ಸಿದ್ನಾಳ, ಹುಬ್ಬಳ್ಳಿಯ ಚೇತನ ಕಾಲೇಜು ಅಧ್ಯಕ್ಷ ಗುರುಶಾಂತ ವಳಸಂಗ, ಮುಖ್ಯಶಿಕ್ಷಕ ಶ್ರೀಕಾಂತ ಉಳ್ಳೇಗಡ್ಡಿ ಶ್ರೀಕಾಂತ ನೇಗಿನಹಾಳ, ಎಸ್.ಡಿ.ಗಂಗನ್ನವರ,
ಅಡಿವೆಪ್ಪ ರಾಯನ್ನವರ, ಮಹಾದೇವ ವಕ್ಕುಂದ, ಮಹಾಂತೇಶ ಪುಟ್ಟಿ, ಶೇಖಯ್ಯ ಯರಗಂಬಳಿಮಠ, ಮೋಹನ ಬಡಿಗೇರ, ರುದ್ರಪ್ಪ ಅಂಗಡಿ, ಮುಗುಟಸಾಬ್‌ ಗೂಡುನವರ, ರಾಜೇಂದ್ರ ಪಾಟೀಲ, ಬಸನಗೌಡ ಪಾಟೀಲ,
ಸುಜಾತಾ ಅಕ್ಕಿ, ಕಸ್ತೂರಿ ಅಕ್ಕಿ ಇತರರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ