Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಒಗ್ಗೂಡುವಿಕೆಯ ಕಡೆ ನಮ್ಮೆಲ್ಲರ ಚಲನೆ ಇರಬೇಕು : ಡಾ. ಆರ್. ಸುನಂದಮ್ಮ

ಬೆಳಗಾವಿ : ಅನೇಕ ಭಿನ್ನತೆ ಮತ್ತು ವೈವಿಧ್ಯಗಳ ನಡುವೆಯೂ ಒಂದಾಗಿ ಜೀವ ವಿರೋಧಿ ನಿಲುವುಗಳ ವಿರುದ್ಧ ಧ್ವನಿ ಎತ್ತುವುದು ಕೇಂದ್ರವಾಗಬೇಕು. ಇಂತಹ ಸಂಘಗಳು ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವ ವೇದಿಕೆಗಳಾಗಬೇಕು ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಆರ್ ಸುನಂದಮ್ಮ ಹೇಳಿದರು.

ನಗರದ ಕನ್ನಡ ಸಾಹಿತ್ಯಭವನ ವಿಶ್ವಸ್ಥ ಮಂಡಳಿಯ ಸಹಯೋಗದಲ್ಲಿ
ಕರ್ನಾಟಕ ಲೇಖಕಿಯರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಎರಡನೇ ವಾರ್ಷಿಕೋತ್ಸವದ ಪ್ರಯುಕ್ತ ಪುಸ್ತಕ ಬಿಡುಗಡೆ ಹಾಗೂ ಕವಿಗೋಷ್ಠಿಯಲ್ಲಿ ಮಾತನಾಡಿದರು.
ಪಿತೃ ಪ್ರಧಾನ ಮೌಲ್ಯಗಳ ಅಹಂಕಾರಗಳಿಂದ ನಮ್ಮನ್ನು ನಾವೇ ಬಿಡುಗಡೆ ಪಡೆಸಿಕೂಳ್ಳಬೇಕು.
ಭಿನ್ನತೆಗಳೇ ನಮ್ಮ ಶಕ್ತಿ ಎಂಬುದು ಅರಿವಾದಾಗ ಅಧಿಕಾರ ,ಜಾತಿ ,ಪ್ರದೇಶ ಧರ್ಮ ಭಾಷೆಗಳಾಚೆ ಮನುಷ್ಯತ್ವದ ಬೆಸುಗೆ ಹೆಣ್ಣು ಮಕ್ಕಳಿಂದ ಮಾತ್ರ ಸಾಧ್ಯವಾಗುತ್ತದೆ .ಇಂದು ಜಗತ್ತಿಗೆ ಬೇಕಾಗಿರುವುದು ಸೋದರಿತ್ವದ ಭಾಷೆ .ಆಗ ನಾವು ಸಮಾಜವನ್ನು ಕಟ್ಟುತ್ತೇವೆ .ಜಗತ್ತನ್ನು ಕಟ್ಟುತ್ತೇವೆ .ಶಾಂತಿ ಸ್ನೇಹ ಭಾತೃತ್ವ ದ ಬದುಕನ್ನು ಬಯಸಿ ಯುದ್ಧಗಳು ಬೇಡವೆಂಬ ಧ್ವನಿ ನಮ್ಮದಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ.ಕೆ.ಆರ್. ಸಿದ್ದಗಂಗಮ್ಮ ಅವರು ಸಂಘದ ಕಾರ್ಯಕ್ರಮಗಳ ವೈಶಿಷ್ಟ್ಯಗಳನ್ನು ವಿವರಿಸಿ, ವಿಮರ್ಶಾ ಕಮ್ಮಟ ಕಾವ್ಯ ಕಮ್ಮಟ ನಾಟಕ ರಚನಾ ಕಮ್ಮಟಗಳು ಲೇಖಕಿಯರ ಬೆಳವಣಿಗೆಗೆ ಕಾರಣವಾಗಿರುವುದನ್ನು ಉದಾಹರಿಸಿದರು.

ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಿದರು. ಅನ್ನಪೂರ್ಣ ಅಗಡಿ, ಪುಷ್ಪಾ ಮುರಗೋಡ, ಆಶಾ ಯಮಕನಮರಡಿ ಮತ್ತು ಪದ್ಮ ಹೊಸಕೋಟೆ ಇವರಿಗೆ ನೀಡಲಾಯಿತು.

ಕಾರ್ಯದರ್ಶಿ ಡಾ.ನಿರ್ಮಲಾ ಬಟ್ಟಲ ವಾರ್ಷಿಕ ವರದಿ ವಾಚನ ಮಾಡಿದರು. ಖಜಾಂಚಿ ಡಾ ನೀತಾ ರಾವ್ ವಾರ್ಷಿಕ ಲೆಕ್ಕ ಪತ್ರ ನೀಡಿದರು. ಸುಧಾ ಪಾಟೀಲ ಅವರ ವಚನಸುಧೆ ಸ್ವರಚಿತ ಸಂಕಲನ ಮತ್ತು ತೊಟ್ಟಿಲು ತೂಗುವ ಕೈ ಲೇಖನ ಸಂಕಲನ , ಡಾ .ನೀತಾರಾವ್ ಅವರ ಶಾಪಗ್ರ ದೇವಕನ್ನಿಕೆಯರು ಕಥಾಸಂಕಲನ,ಡಾ.
ಬಸಮ್ಮ ಗಂಗನಳ್ಳಿ ಮತ್ತು ಡಾ. ಗೀತಾಂಜಲಿ ಸುಖಸಾರೆ ಅವರ ಹಿಂದಿ ಅನುವಾದಿತ ಕಾದಂಬರಿ ಭೂಗರ್ಭ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿ ಗೌರವ ಕಾರ್ಯದರ್ಶಿ ಆರ್.ಬಿ.ಕಟ್ಟಿ ಉಪಸ್ದಿತರಿದ್ದರು ಡಾ. ನಿರ್ಮಲಾ ಬಟ್ಟಲ ಹಾಗೂ ಉಪ ಅಧ್ಯಕ್ಷೆ ಜ್ಯೋತಿ ಬಾದಾಮಿ ಕೃತಿಗಳನ್ನು ಪರಿಚಯಿಸಿದರು. ಡಾ ಕಮಲಾಬಾಯಿ ದೇಶಿಕ,ಇಂದಿರಾ ಮೊಟೇಬೆನ್ನೂರು ಹಮೀದಾ ಬೇಗಂ ದೇಸಾಯಿ, ಸುನಂದಾ ಮುಳೆ, ಡಾ.ಹೇಮಾವತಿ ಸೊನೊಳ್ಳಿ, ಸುನಂದಾ ಹಾಲಬಾವಿ ಮತ್ತು ನೂತನ ಕುಲಕರ್ಣಿ ಕವಿತೆ ವಾಚಿಸಿದರು .ಪುಷ್ಪಾ ಮುರಗೋಡ ಸ್ವಾಗತಿಸಿದರು. ಸಹ ಕಾರ್ಯದರ್ಶಿ ರಾಜನಂದ ಗಾರ್ಗಿ ನಿರೂಪಿಸಿ ವಂದಿಸಿದರು. ಋತಿಕಾ ಜಾಲಿಹಾಳ ಪ್ರಾರ್ಥಿಸಿದರು .ಪ್ರೇಮ ತಾಶೀಲದಾರ, ಸುಧಾ ಪಾಟೀಲ, ನೀಲಗಂಗಾ ಚರಂತಿಮಠ, ಮಮತಾ ಶಂಕರ, ಶ್ವೇತಾ ನರಗುಂದ, ಲಲಿತಾ ಕ್ಯಾಸಸನ್ನವರ, ಕಲೇಸಂ ಸದಸ್ಯರು ಮತ್ತು ಪ್ರೊ.ಸಿಂಥ್ರಿ ಆರ್ ಗಣೇಶ್ ಪ್ರೊ.ಮೆಣಸಿನಕಾಯಿ ಮುಂತಾದವರು ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ