Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬ್ಯಾಕ್ ಟು ಬ್ಯಾಕ್ ಗೆಲುವಿನ ಬೆನ್ನಲ್ಲೇ ಮತ್ತೆ ತವರಿನ ಪುಣ್ಯಕ್ಷೇತ್ರ ದರ್ಶನ ಮಾಡಿಸಿದ ಧರ್ಮಪತ್ನಿ !

ಸುಬ್ರಮಣ್ಯ : ಭಾರತ ಟಿ-20 ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕ ಎಂಬ ಹಿರಿಮೆಗೆ ಪಾತ್ರವಾಗಿರುವ ಸೂರ್ಯಕುಮಾರ ಯಾದವ್ ಅವರು ತಮ್ಮ ಧರ್ಮಪತ್ನಿ ದೇವಿಶಾ ಶೆಟ್ಟಿ ಜೊತೆ ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸೂರ್ಯಕುಮಾರ-ದೇವಿಶಾ ದಂಪತಿ, ಸುಬ್ರಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಮಣ್ಯ ಮಠದಲ್ಲಿ ಆಶ್ಲೇಷಾ ಬಲಿ ಸೇವೆ ಮತ್ತು ನಾಗ ಪ್ರತಿಷ್ಠಾಪನೆ ಪೂಜೆಯನ್ನು ನೆರವೇರಿಸಿದರು. ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ದಂಪತಿಯನ್ನು ಸುಬ್ರಮಣ್ಯ ದೇವಸ್ಥಾನದ ಮುಖ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಶಾಲು ಹೊದಿಸಿ ಗೌರವಿಸಿದರು.

ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ ಮತ್ತು ದೇವಸ್ಥಾನದ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೆಲ ತಿಂಗಳ ಹಿಂದೆ ದೇವಿಶಾ ಶೆಟ್ಟಿ ಅವರು ಸೂರ್ಯಕುಮಾರ ಯಾದವ್ ಅವರ ಜೊತೆ ತಮ್ಮ ತಾಯಿಯ ತವರು ಕಾಪುವಿನ ಮಾರಿಗುಡಿಗೆ ಕರೆದುಕೊಂಡು ಹೋಗಿ ಶ್ರೀ ಮಾರಿ ದೇವಿಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸುವ ಜೊತೆಗೆ ಹರಕೆಯನ್ನು ನೆರವೇರಿಸಿದ್ದರು.

ಸೂರ್ಯಕುಮಾರ ಯಾದವ್ ಪತ್ನಿ ದೇವಿಶಾ ಮಂಗಳೂರು ಮೂಲದವರು, ಟಿ20 ವಿಶ್ವಕಪ್ ಗೆದ್ದ ಬಳಿಕ ಸೂರ್ಯಕುಮಾರ ಯಾದವ್ ಪತ್ನಿ ದೇವಿಶಾ ಜೊತೆ ಕಾಪು ಮಾರಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದರು.

ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ದೇವಸ್ಥಾನದಲ್ಲಿದ್ದ ನೂರಾರು ಮಂದಿ ಭಕ್ತರು ಸೂರ್ಯಕುಮಾರ ಯಾದವ್‌ ಅವರ ಫೋಟೊ ತೆಗೆದುಕೊಳ್ಳಲು ಮುಗಿಬಿದ್ದರು. ಧಾರ್ಮಿಕ ಕೆಲಸಗಳು ಮುಗಿದ ಬಳಿಕ ಸೂರ್ಯಕುಮಾರ ಯಾದವ್ ದಂಪತಿಯನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.

ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅರ್ಚಕರು ನೀವು ಮುಂದಿನ ಬಾರಿ ಬರುವ ವೇಳೆಗೆ ಭಾರತ ತಂಡದ ನಾಯಕರಾಗಿರುತ್ತೀರಾ ಎಂದು ಭವಿಷ್ಯ ನುಡಿದಿದ್ದರು. ಅದಾದ ಕೆಲವೇ ದಿನಗಳಲ್ಲಿ ಸೂರ್ಯಕುಮಾರ ಯಾದವ್ ಭಾರತ ಟಿ20 ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.
ಸೂರ್ಯ ನಾಯಕತ್ವದಲ್ಲಿ ಭಾರತ ತಂಡ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಕೆಲವೇ ದಿನಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಗೆದ್ದುಕೊಂಡಿದೆ. ಈ ಸರಣಿ ಗೆಲುವಿನ ಬಳಿಕ ಸೂರ್ಯಕುಮಾರ್ ಯಾದವ್ ಪತ್ನಿ ಜೊತೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ 3-1 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯ ಮೊದಲ ಮ್ಯಾಚ್‌ನಲ್ಲಿ ಭಾರತ ತಂಡ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಸೌತ್‌ ಆಫ್ರಿಕಾ ಗೆಲುವು ದಾಖಲಿಸಿತ್ತು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಟೀಮ್ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿದೆ.

ಈ ಸರಣಿ ಗೆಲುವಿನ ಬಳಿಕ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್‌, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಸಂಪ್ರದಾಯವನ್ನು ಮುಂದುವರೆಸಿದ್ದು ವಿಶೇಷವಾಗಿತ್ತು. ಅಂದರೆ ಟ್ರೋಫಿ ಗೆದ್ದ ಬಳಿಕ ಚೊಚ್ಚಲ ಸರಣಿ ಆಡಿದ ಆಟಗಾರರಿಗೆ ಕಪ್ ನೀಡುವ ವಿಶಿಷ್ಟ ಸಂಪ್ರದಾಯಕ್ಕೆ ಧೋನಿ ನಾಂದಿ ಹಾಡಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಸಕರ ಮನೆಗಳಿಗೆ ಸೀಮಿತವಾದರೆ BLO ಗಳು ? ಸಾರ್ವಜನಿಕರನ್ನು ಸತಾಯಿಸುತ್ತಿರುವ ಬಿ ಎಲ್ ಒ ಗಳ ವಿರುದ್ಧ ಕ್ರಮಕ್ಕೆ ಅಗ್ರಹಶಾಸಕರ ಮನೆಗಳಿಗೆ ಸೀಮಿತವಾದರೆ BLO ಗಳು ?ದೇಶಾದ್ಯಂತ ಆವರಿಸಿದ ಮೋಡಗಳು ; ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟ ; ಮುಂಗಾರು ಬಲಗೊಳ್ಳುತ್ತಿದೆ ಎಂದ ಹವಾಮಾನ ಇಲಾಖೆನೀಟ್‌ ಹೋರಾಟ : ಯುವ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮವಿಲ್ಲ ಎಂದು ಭರವಸೆ ನೀಡಿದ್ರೆ ಉಪವಾಸ ಅಂತ್ಯ ; ಕೇಂದ್ರಕ್ಕೆ ವಾಂಗ್ಚುಕ್ ಷರತ್ತುಕೋಚಿಂಗ್ ಸೆಂಟರ್‌ನಲ್ಲಿ ಲೈಂಗಿಕ ದೌರ್ಜನ್ಯ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರುಆಷಾಢ ಏಕಾದಶಿ ಪ್ರಯುಕ್ತ ಧಾರವಾಡ-ಪಂಡರಪುರ ನಡುವೆ ವಿಶೇಷ ರೈಲು ಸಂಚಾರಕೆಎಲ್‌ಇ ಜೆಜಿಎಂಎಂ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಆಸ್ಪತ್ರೆ, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಮುಂದೂಡಿಕೆಎನ್‌ಡಿಎಗೆ ಎನ್‌ಸಿಪಿ ಬೆಂಬಲದ ವದಂತಿಗಳ ನಡುವೆ ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್–ಸುಪ್ರಿಯಾ ಸುಳೆಗಣಿಕೊಪ್ಪ : ಶಾಸಕ ಬಾಬಾಸಾಹೇಬ ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಿಹಿ ಭೋಜನ, ಕಲಿಕಾ ಸಾಮಗ್ರಿ ವಿತರಣೆವಿದ್ಯಾರ್ಥಿಗಳು  ಎನ್ ಸಿಸಿ   ಮಹತ್ವ ಮತ್ತು ಅದರ ಉಪಯೋಗ ಹಾಗೂ ಅನುಕೂಲಗಳ  ಮಾಹಿತಿ ಪಡೆಯಬೇಕು: ಪ್ರೊ . ಹನುಮಂತ ಬನ್ನೂರ