Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹುದಲಿಯಲ್ಲಿ 11 ವರ್ಷಗಳ ನಂತರ ಗ್ರಾಮದೇವತೆ ಜಾತ್ರಾ ಮಹೋತ್ಸವ

 

ಬೆಳಗಾವಿ : ಹುದಲಿ ಗ್ರಾಮದಲ್ಲಿ ಪ್ರತಿ 11 ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆ ಮೇ 14 ರಿಂದ 22 ರ ವರೆಗೆ ನಡೆಯಲಿದೆ.

ಜಾತ್ರೆ ನಿಮಿತ್ತ ವಿವಿಧ ಕಾರ್ಯಕ್ರಮಗಳ ಪಟ್ಟಿ:

ಮೇ 14 ರಂದು ಬೆಳಿಗ್ಗೆ 6 ಗಂಟೆಗೆ ಶ್ರೀದೇವಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಪೂಜೆ ನೆರವೇರಲಿದೆ.
ಬೆಳಿಗ್ಗೆ 8.15ಕ್ಕೆ ಉಡಿ ತುಂಬುವ ಕಾರ್ಯಕ್ರಮ, ರಾತ್ರಿ 9. ಗಂಟೆಗೆ ಸಂಗ್ಯಾ ಬಾಳ್ಯಾ ನಾಟಕ ಪ್ರದರ್ಶನಗೊಳ್ಳಲಿದೆ.

ಮೇ.15 ರಂದು ಮಧ್ಯಾಹ್ನ 1.45 ಗಂಟೆಯಿಂದ ಶ್ರೀ ದೇವಿಯ ಹೊನ್ನಾಟ ಬಳಿಕ ಮದ್ಯಾಹ್ನ 4.ಗಂಟೆಗೆ ಅಂಕಲಗಿಯ ಸಂಸ್ಥಾನಮಠದ ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮೀಜಿ, ಶ್ರೀ ಅಡವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಅರಳಿಕಟ್ಟಿ ವಿರಕ್ತಮಠದ ಶ್ರೀ ಶಿವಮೂರ್ತಿ ಸ್ವಾಮೀಜಿಯವರಿಂದ ರಥೋತ್ಸವ ಉದ್ಘಾಟನೆಗೊಳ್ಳಲಿದೆ.

ಬಳಿಕ ಸಕಲ ವಾದ್ಯ ಮೇಳಗಳೊಂದಿಗೆ ರಥೋತ್ಸವ ಪ್ರಾರಂಭವಾಗಿ ಸಂಜೆ 6 ಗಂಟೆಗೆ ಶ್ರೀ ರೇಣುಕಾದೇವಿ(ಯಲ್ಲಮ್ಮನ) ಗುಡಿಯ ಎದುರಿಗೆ ರಥದ ವಾಸ್ತವ್ಯ.

ಗ್ರಾಮದ ಗಾಂಧಿ ಅಗಸಿ ಹತ್ತಿರ ರಾತ್ರಿ 10.ಗಂಟೆಗೆ "ಧರ್ಮದ ನುಡಿ ಬೆಂಕಿಯ ಕಿಡಿ" ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

16 ರಂದು ಪುನ: 12 30ಕ್ಕೆ ರಥೋತ್ಸವ ಪ್ರಾರಂಭವಾಗಿ ಆಲದ ಗಿಡದ ಶ್ರೀ ಕರೆಮ್ಮ ದೇವಿಗೆ ಉಡಿ ತುಂಬಿ ಮತ್ತೆ ರಥೋತ್ಸವ, ಸಂಜೆ 6 ಗಂಟೆಗೆ ಜಿಡ್ಡಿಯಲ್ಲಿ ಮೂಲ ಪಾದ ಗಟ್ಟಿ ವಾಸ್ತವ್ಯ, ರಾತ್ರಿ 10.ಗಂಟೆಗೆ ರಥದ ಹತ್ತಿರ "ಸಂಗ್ಯಾಬಾಳ್ಯಾ" ನಾಟಕ ಪ್ರದರ್ಶನವಾಗಲಿದೆ.

17 ರಂದು ಮದ್ಯಾಹ್ನ 12.15ಕ್ಕೆ ಪಾದಗಟ್ಟೆಯಿಂದ ರಥೋತ್ಸವ ಪ್ರಾರಂಭವಾಗಿ ಶಾಲೆಯ ಆವರಣದಲ್ಲಿನ ಭವ್ಯ ಮಂಟಪದ ಹತ್ತಿರ ರಥೋತ್ಸವ ಮುಕ್ತಾಯವಾಗಿ ಶ್ರೀ ದೇವಿಯ ಹೊನ್ನಾಟದ ನಂತರ ಶೃಂಗರಿದ ಭವ್ಯ ಮಂಟಪದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ಗೊಳಿಸುವುದು.ಚಚಡಿ ಕಲಾತಂಡದವರಿಂದ ರಾತ್ರಿ 10 ಗಂಟೆಗೆ "ರೈತ ಚಲ್ಲಿದ ರಕ್ತ" ನಾಟಕ ಪ್ರದರ್ಶನಗೊಳ್ಳಲಿದೆ.

18 ರಂದು ಬೆಳಿಗ್ಗೆ 9 ಗಂಟೆಗೆ ಕುದುರೆ ಶರ್ಯತ್ತುಗಳು
(ರೌಂಡ ರೇಸ್ 5 ಕ್ಕಿಂತ ಹೆಚ್ಚು ಜೋಡಿಗಳು ಕೂಡಿದರೆ ಮಾತ್ರ) ಸಂಜೆ 5.ಗಂಟೆಗೆ ಶಿರಗುಪ್ಪಿಯ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ಸ್ವಾಮಿ ವಿವೇಕಾನಂದ ಯೋಗ ಮತ್ತು ಮಲ್ಲಕಂಭ ತರಬೇತಿ ಕೇಂದ್ರ ವತಿಯಿಂದ ಮಲ್ಲಕಂಭ,ರಾತ್ರಿ 9.ಗಂಟೆಗೆ ಕೊಲ್ಲಾಪುರ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

19 ರಂದು ಬೆಳಿಗ್ಗೆ 9 ಗಂಟೆಗೆ ಜೋಡತ್ತಿನ ಖಾಲಿ ಬಂಡಿ ಶರ್ಯತ್ತುಗಳು,ಮದ್ಯಾಹ್ನ 3 ಗಂಟೆಗೆ ಕುಸ್ತಿಗಳು ನಡೆಯಲಿವೆ. ರಾತ್ರಿ 9 ಗಂಟೆಗೆ ದಾವೂದ ತಾಳಿಕೋಟಿ ತಂಡದವರಿಂದ "ಕಟಕ ರೊಟ್ಟಿ ಕಲ್ಲವ್ವ" ನಾಟಕ ಪ್ರದರ್ಶನವಾಗಲಿದೆ. 20 ರಂದು ಬೆಳಗ್ಗೆ 9 ಗಂಟೆಗೆ ಸ್ಲೋ ಬೈಕ್ ಸ್ಪರ್ಧೆ, ಮಧ್ಯಾಹ್ನ 3 ಗಂಟೆಯಿಂದ ಪ್ರಸಿದ್ದ ಕುಸ್ತಿಪಟುಗಳಿಂದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ.

ರಾತ್ರಿ10 ಗಂಟೆಗೆ ದಾವೂದ ತಾಳಿಕೊಟಿ ತಂಡದವರಿಂದ ಹಳ್ಳಿ ಹುಡುಗಿ ಮೊಸರು ಗಡಗಿ ನಾಟಕ ಮತ್ತು ಹೊನಲು ಬೆಳಕಿನಲ್ಲಿ ಕಬಡ್ಡಿಗಳು ನಡೆಯಲಿವೆ.

21 ರಂದು ಬೆಳಗ್ಗೆ 9 ಗಂಟೆಗೆ ಟೇಲರ್ ಸಹಿತ ಟ್ರ್ಯಾಕ್ಟರ್ ರಿವರ್ಸ್ ಓಡಿಸುವ ಸ್ಪರ್ಧೆ, ರಾತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಸವದತ್ತಿಯ ಶ್ರೀ ನಾಗಲಿಂಗ ಸಾಹಿತ್ಯ ಜಾನಪದ ಕಲಾ ಪೋಷಕರ ಯುವ ಬಳಗ ಹಿರೇಬೂದನೂರ ಇವರ ಆಶ್ರಯದಲ್ಲಿ ಜಾಣಪದ ಉತ್ಸವ ಹಾಗೂ ಬಯಲಾಟ ಸಂಭ್ರಮ, ಗೀ ಗೀ ಪದ, ಜಾಣಪದ ಸಂಗೀತ, ಡೊಳ್ಳಿನ ಪದ, ಭಜನಾ ಪದ, ಖಣಿವಾದನ, ದೀಪ ನೃತ್ಯ, ಬಯಲಾಟ ಪದ, ಜೋಗತಿ ನೃತ್ಯ, ಸನ್ನಾಟದ ಪದ, ಶ್ರೀ ನಿಜಗುಣ ಶಿವಯೋಗಿ ಪೌರಾನಿಕ ನಾಟಕ ಸೇರಿದಂತೆ ಸೋಬಾನ ಪದಗಳು ನಡೆಯಲಿವೆ.

ಜಾತ್ರೆಯ ಕೊನೆಯ ದಿನ 22 ರಂದು ಬೆಳಗ್ಗೆ 9 ಗಂಟೆಗೆ ವಿವಿಧ ಮಹನೀಯರಿಗೆ ಸತ್ಕಾರ ಸಮಾರಂಭ ನಡೆಯಲಿದೆ.

ಸಂಜೆ 4 ಗಂಟೆಯಿಂದ ದೇವಿಯ ಹೊನ್ನಾಟವು ಪ್ರಾರಂಭವಾಗಿ ಸಂಜೆಗೆ ಸೀಮೋಲಂಘನ ಮಾಡಿ ಜಾತ್ರೆಗೆ ಕೊನೆಗೊಳ್ಳಲಿದೆ ಎಂದು ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಕಮಿಟಿ ಹುದಲಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ