Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪಿಯು ಫಲಿತಾಂಶ ಉತ್ತಮಪಡಿಸಲು ಶಾಸಕದ್ವಯರ ಹೊಸ ಪ್ರಯೋಗ

ಸ್ಟಡಿ ಮಟಿರೀಯಲ್ ಪುಸ್ತಕಗಳ ರಚನೆ


*9600 ಪಿಯು ವಿದ್ಯಾರ್ಧಿಗಳಿಗೆ 'ದಿಶಾ' ಬದಲು*


 ಜನಜೀವಾಳಜಾಲ: ಬೆಳಗಾವಿ:ಪಿಯುಸಿ ಫಲಿತಾಂಶದಲ್ಲಿ ನಗರದಲ್ಲಿ ನಿರೀಕ್ಷಿತ ಅಂಕ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ, ಇದನ್ನು ಗಮನಿಸಿ ಸುಧಾರಣಾ ಕ್ರಮವಾಗಿ ಅಭ್ಯಾಸ ಸಾಮಗ್ರಿ ವಿತರಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .
ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ದಕ್ಷಿಣ ಶಾಸಕ ಅಭಯ ಪಾಟೀಲ
ಬೇರೆ ಬೇರೆ ಜಿಲ್ಲೆಗಳ ಸುಮಾರು 45 ಟೀಚರ್ಸ್/ ಶಿಕ್ಷಣ ಪರಿಣಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭ್ಯಾಸ ಸಾಮಗ್ರಿಯ ಪುಸ್ತಕಗಳನ್ನು ರಚಿಸಿದ್ದಾರೆ.


ಜಿಲ್ಲೆಯ ಎಸ್ಸೆಸ್ಸೆಲ್ಸಿ  ಫಲಿತಾಂಶ ಮಟ್ಟ 5ನೇ ಸ್ಥಾನ ಇದ್ದರೆ, ಪಿಯುಸಿ ಫಲಿತಾಂಶ ರೇಟಿಂಗ್ 22ಕ್ಕೆ ಇಳಿದಿದೆ. ಇದನ್ನು ಅವಲೋಕನ‌ ಮಾಡಿದಾಗ ವಿದ್ಯಾರ್ಥಿಗಳಿಗೆ ಉತ್ತಮ ನೋಟ್ಸ್ ಅಭ್ಯಾಸ ಸಾಮಗ್ರಿ ರಚಿಸಿ ಒದಗಿಸಬೇಕು.
ಕಲಾ/ ವಾಣಿಜ್ಯ ವಿಭಾಗಕ್ಕೂ ಉತ್ತಮ ಅಭ್ಯಾಸ ಸಾಮಗ್ರಿ ಸಿಗಬೇಕು ಎಂಬುವುದು ನಮ್ಮ ಆಶಯ ಆದ್ದರಿಂದ ಪ್ರಪ್ರಥಮ ಪ್ರಯತ್ನವಾಗಿ  ಈ ಪುಸ್ತಕಗಳನ್ನು ಹೊರತರಲಾಗಿದೆ.
ವಿಜ್ಞಾನ ವಿಭಾಗಕ್ಕೆ ಬೇಕಾದಷ್ಟು ಗುಣಮಟ್ಟದ ಪುಸ್ತಕಗಳು ಪ್ರಸ್ತುತ ಸಿಗುತ್ತವೆ. ಆದರೆ ಕಲಾ ಮತ್ತು ಕಾಮರ್ಸ್ ಗೂ ಕೂಡ ಈಗ ಸ್ಪರ್ಧಾತ್ಮಕ ಪರೀಕ್ಷೆಗಳು ಬರುತ್ತಿವೆ, ಈ ಎರಡು ವಿಭಾಗಗಳಲ್ಲೂ ಉತ್ತಮ ಫಲಿತಾಂಶ ಸಿಗಬೇಕು . ಪಿಯು ಬೋರ್ಡ್ ಗೈಡ್ ಲೈನ್ಸ್ ಮತ್ತು ಪಠ್ಯಕ್ರಮ ಹಾಗೂ ಪರೀಕ್ಷೆ ನಡೆಸುವ ಅದರ ಪದ್ಧತಿ ಅಡಿಯೇ ಈ ಸಾಮಗ್ರಿ ರಚಿಸಲಾಗಿದೆ.
ಬೆಳಗಾವಿ ದಕ್ಷಿಣ-ಉತ್ತರ- ಗ್ರಾಮೀಣ ಭಾಗದ ಒಟ್ಟು 9600 ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುವುದu. ಈ ಸಾಮಗ್ರಿಗಳನ್ನು ಉಚಿತವಾಗಿ ಪಿಯು ವಿದ್ಯಾರ್ಥಿಗಳಿಗೆ ಬೆಳಗಾವಿ ನಗರದ ಉತ್ತರ & ದಕ್ಷಿಣ ಕ್ಷೇತ್ರದ ಶಾಶಕದ್ವಯರ ನೇತೃತ್ವದಲ್ಲಿ 'ದಿಶಾ' ಕಾರ್ಯಕ್ರಮದ ಅಡಿ ವಿತರಿಸಲಾಗುತ್ತಿದೆ ಎಂದರು.
ಸದ್ಯಕ್ಕೆ ಇಂಗ್ಲೀಷ್ ಮಾಧ್ಯಮದಲ್ಲಿ ಮಾತ್ರ ಅಭ್ಯಾಸ ಪಠ್ಯಕ್ರಮ ಸಾಮಗ್ರಿ ರಚಿಸಲಾಗಿದೆ.
1666 ಕಲಾ,
3784 ವಾಣಿಜ್ಯ,
3913 ವಿಜ್ಞಾನ ವಿದ್ಯಾರ್ಥಿಗಳು ಇದ್ದಾರೆ ಎಂದರು.


ಟ್ಯೂಶನ್ ಮಾಫಿಯಾ ನಿಲ್ಲಬೇಕು:
ಪಿಯುಸಿ ಉಪನ್ಯಾಸಕರ ಕಲಿಸುವ ಗುಣಮಟ್ಟ ಸುಧಾರಿಸಬೇಕು, ಟ್ಯೂಶನ್ ಮಾಫಿಯಾ ತತಕ್ಷಣ ಬಂದಾಗಬೇಕು ಎಂಬ ಬಗ್ಗೆಯೂ ಗಂಭೀರವಾಗಿ ವಿಚಾರಿಸಲಾಗುತ್ತಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.


ಉತ್ತರ ಶಾಸಕ ಅನಿಲ ಬೆನಕೆ, ಮಹಾಂತೇಷ ಪಾಟೀಲ, ಶ್ರೀರಂಗ ದೇಶಪಾಂಡೆ, ಅಶುತೋಷ ಇತರರು ಉಪಸ್ಥಿತರಿದ್ದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ