Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಅಗಸಗಿ PKPS ನಲ್ಲಿ ಅನ್ನಭಾಗ್ಯ ಅಕ್ಕಿ ಲೂಟಿ ಪ್ರಕರಣ; ಎರಡು ಗ್ರಾಮದಲ್ಲಿ ಲಪಡಾ ಮಾಡಿ ಸಿಕ್ಕಿಬಿದ್ದ ಲೂಟಿಕೋರ ಸದಸ್ಯ..?

ಅಗಸಗಿ PKPS ಅನ್ನಭಾಗ್ಯ ಅಕ್ಕಿ ಲೂಟಿಕೋರನ ಬಣ್ಣ ಬಯಲು ಮಾಡಿದ ಆಹಾರ ಅಧಿಕಾರಿ ಉಸ್ತಾದ & ಟೀಂ..!

ಅಕ್ಕಿ ಸಿಗದ 30ಕ್ಕೂ ಹೆಚ್ಚು ಪಡಿತರ ಕುಟುಂಬದವರಿಂದ ದೂರು ದಾಖಲು..!

ಎರಡು ಊರಿನಲ್ಲಿ ಲಪಡಾ ಮಾಡಿ ಸಿಕ್ಕಿಬಿದ್ದ ಲೂಟಿಕೋರ..?

ಎಲ್ಲರ ಚಿತ್ತ ಆಹಾರ ಇಲಾಖೆಯತ್ತ; ಕ್ರಮ ಕೈಗೊಳ್ತಾರಾ ಹಿರಿಯ ಅಧಿಕಾರಿಗಳು..?

ಬೆಳಗಾವಿ : ಅಗಸಗಿ ಗ್ರಾಮದ PKPS ಸದಸ್ಯನೊಬ್ಬ ಜನರಿಗೆ ಸರಿಯಾಗಿ ಪಡಿತರ ವಿತರಿಸದೇ ಹಗಲು ಲೂಟಿ ಮಾಡುತ್ತಿದ್ದ ಬಗ್ಗೆ ಜನಜೀವಾಳ ದಿನಪತ್ರಿಕೆಯಲ್ಲಿ ನಿನ್ನೆ ವರದಿ ಮಾಡಿದ ಬೇನ್ನಲ್ಲೇ ಬೆಳಗಾವಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕೂಲಂಕಷವಾಗಿ ಪರಿಶೀಲನೆ ನಡೆಸಿದರು. ಆಗ ಬಡವರಿಗಾಗಿ ಸರಕಾರ ಕೊಟ್ಟ ಸಾವಿರಾರು ಕೆಜಿ ಅನ್ನಭಾಗ್ಯ ಅಕ್ಕಿಯನ್ನು ಲೂಟಿಕೋರ ಕೊಳ್ಳೆ ಹೊಡೆದಿರುವುದು ಸಾಬಿತಾಗಿದೆ.

ಬೆಳಗಾವಿ ತಾಲೂಕು ಆಹಾರ ಉಪ ತಹಶಿಲ್ದಾರ ಎಂ ಎನ್ ಉಸ್ತಾದ, ತಾಲೂಕು ಆಹಾರ ನಿರೀಕ್ಷಕರಾದ ಸುರೇಶ ಉಪ್ಪಾರ , ಸತೀಶ ಬೆನಗಿ ಇಂದು ಬೆಳಗ್ಗೆ ದಿಢೀರನೆ ಅಗಸಗಿ PKPS ಗೆ ಬಂದು ಪರಿಶೀಲನೆಗಿಳಿದಾಗ ಸ್ವಯಂ ಪ್ರೇರಿತರಾಗಿ 30 ಕ್ಕೂ ಹೆಚ್ಚು ಪಡಿತ ಕುಟುಂಬದವರು ಸ್ಥಳಕ್ಕೆ ಬಂದು ತಮ್ಮ ಹೆಬ್ಬೆರಳು ಪಡೆದು ತಿಂಗಳ ಸಮೀಪಿಸಿದರೂ ಇನ್ನೂ ಕಳೆದ ತಿಂಗಳಿನ ಪಡಿತರ ನೀಡಿಲ್ಲ ಎಂದು ಲಿಖಿತ ದೂರು ನೀಡಿದರು.

ದೂರಿನನ್ವಯ ತನಿಖೆಗೆ ಮುಂದಾದಾಗ ಉಗ್ರಾಣ ಖಾಲಿಯಾಗಿದ್ದು ಕಂಡು ಬಂದಿತು. ಇದಕ್ಕೆ ತೇಪೆ ಹಚ್ಚಲು ಲೂಟಿಕೋರ ಮಂದಾಗಿ ಇದೇ ಪಡಿತರ ಅಂಗಡಿಗೆ ಕೂಡಿರುವ ಪಕ್ಕದ ಚಲವೇನಟ್ಟಿ ಗ್ರಾಮದಲ್ಲಿ ಉಳಿದ ಪಡಿತರ ಇದೆ ಎಂದು ಸಮಾಜಾಯಿಸಿ ಮಾಡಲಾರಂಭಿಸಿದ, ಇದಕ್ಕೆ ಮನಿಯದ DT ಉಸ್ತಾದ ತಕ್ಷಣ ಆ ಗ್ರಾಮಕ್ಕೆ ಹೋಗಿ ಪರಿಶೀಲನೆ ನಡೆಸಿದರು.

ಚಲವೇನಟ್ಟಿಯಲ್ಲಿ ಸಿಕ್ಕಿದ್ದು 4 ಕ್ವಿಂಟಲ್ ಅಕ್ಕಿ..!

ದೂರು ಕೊಟ್ಟಿರುವ 30 ಹಾಗೂ ದೂರು ನೀಡದ 15 ಕ್ಕೂ ಹೆಚ್ಚು ಪಡಿತರ ಕುಟುಂಬದವರ ಪ್ರಕಾರ ಸರಿಸುಮಾರು ಅಲ್ಲಿ 25 ಕ್ವಿಂಟಲ್ (2500 ಕೆಜಿ)ಗೂ ಹೆಚ್ಚು ಅನ್ನಭಾಗ್ಯ ಅಕ್ಕಿ ಇರಬೇಕಿತ್ತು. ಆದರೆ ಅಲ್ಲಿ ಕೇವಲ 400 ಕೆಜಿ ಅಕ್ಕಿ ಸಿಕ್ಕಿದೆ.

ಇದರಿಂದಾಗಿ ಪಡಿತರ ಸಿಗದೆ ಹತಾಶರಾಗಿದ್ದ ಜನ ಮತ್ತಷ್ಟು ರೊಚ್ಚಿಗೆದ್ದರು. ಈ ಸಂದರ್ಭದಲ್ಲಿ ಹಾಲಿ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಕಲಗೌಡ ಪಾಟೀಲ ಹಾಗೂ ಅಪ್ಪಯ್ಯಗೌಡ ಪಾಟೀಲ ಜನತೆಗೆ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

ಎಲ್ಲಿಗೆ ಹೋಯ್ತು 21ಕ್ವಿಂಟಾಲ್ ಕೆಜಿ ಅನ್ನಭಾಗ್ಯ..?

ಅಹಾರ ಇಲಾಖೆ ಅಂಕಿ ಅಂಶಗಳ ಪ್ರಕಾರ 2500 ಕ್ಕೂ ಹೆಚ್ಚು ಕೆಜಿ ಅನ್ನಭಾಗ್ಯ ಉಗ್ರಾಣದಲ್ಲಿರಬೇಕಿತ್ತು. ಆದರೆ ಉಳಿದ 2100 ಕೆಜಿ ಅಕ್ಕಿ ಎಲ್ಲಿಗೆ ಹೊಯ್ತು ಎಂಬ ಯಕ್ಷಪ್ರಶ್ನೆ ಉದ್ಭವಿಸಿದೆ. ಮೂಲಗಳ ಹಾಗೂ ಖಚಿತ ಮಾಹಿತಿ ಪ್ರಕಾರ ಆ ಲೂಟಿಕೋರ ಅನ್ನಭಾಗ್ಯದ ಸಾವಿರಾರು ಕೆಜಿ ಅಕ್ಕಿಯನ್ನು ಬೆಳಗಾವಿ ಉಗ್ರಾಣದಲ್ಲೇ ಮಾರಿದ್ದಾಗಿ ಹೇಳಲಾಗುತ್ತದೆ.

ಎಲ್ಲರ ಚಿತ್ತ ಆಹಾರ ಇಲಾಖೆಯತ್ತ..!

ಹಾಡುಹಗಲೇ ಬಡವರ ಅನ್ನಭಾಗ್ಯಕ್ಕೆ ಲೂಟಿಕೋರ ಸದಸ್ಯನೊಬ್ಬ ಕಣ್ಣು ಹಾಕಿ ಸಾವಿರಾರು ಕೆಜಿ ಅಕ್ಕಿ ಲೂಟಿಮಾಡಿರುವುದು ಸಾಬೀತಾಗಿದ್ದು, ಇದರ ವಿರುದ್ಧ ಆಹಾರ ಅಧಿಕಾರಿಗಳು ಹಾಗೂ ಬೆಳಗಾವಿ ಡಿಸಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದೂ ನೋಡಬೇಕು.

ಒಟ್ಟಿನಲ್ಲಿ 5 ತಿಂಗಳ ಹಿಂದಷ್ಟೇ ಅಧಿಕಾರಕ್ಕೆ ಬಂದ ಹೊಸ ಕಮೀಟಿಯವರಿಗೆ ಆ ಲೂಟಿಕೋರನಿಂದಾಗಿ ಗ್ರಾಮದ ಜನರಿಂದ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿರುವುದಂತೂ ನಿಜ. ಇನ್ನಾದರೂ ಊರು ಬಿಟ್ಟಿರುವ PKPS ಅಧ್ಯಕ್ಷ ಗ್ರಾಮಕ್ಕೆ ಬಂದು ನೆಲೆಸಿ ಬಡವರಿಗೆ, ರೈತರಿಗೆ ನ್ಯಾಯ ಒದಗಿಸಲಿ ಎಂದು ಜನರ ಬಯಕೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಸಕರ ಮನೆಗಳಿಗೆ ಸೀಮಿತವಾದರೆ BLO ಗಳು ? ಸಾರ್ವಜನಿಕರನ್ನು ಸತಾಯಿಸುತ್ತಿರುವ ಬಿ ಎಲ್ ಒ ಗಳ ವಿರುದ್ಧ ಕ್ರಮಕ್ಕೆ ಅಗ್ರಹಶಾಸಕರ ಮನೆಗಳಿಗೆ ಸೀಮಿತವಾದರೆ BLO ಗಳು ?ದೇಶಾದ್ಯಂತ ಆವರಿಸಿದ ಮೋಡಗಳು ; ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟ ; ಮುಂಗಾರು ಬಲಗೊಳ್ಳುತ್ತಿದೆ ಎಂದ ಹವಾಮಾನ ಇಲಾಖೆನೀಟ್‌ ಹೋರಾಟ : ಯುವ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮವಿಲ್ಲ ಎಂದು ಭರವಸೆ ನೀಡಿದ್ರೆ ಉಪವಾಸ ಅಂತ್ಯ ; ಕೇಂದ್ರಕ್ಕೆ ವಾಂಗ್ಚುಕ್ ಷರತ್ತುಕೋಚಿಂಗ್ ಸೆಂಟರ್‌ನಲ್ಲಿ ಲೈಂಗಿಕ ದೌರ್ಜನ್ಯ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರುಆಷಾಢ ಏಕಾದಶಿ ಪ್ರಯುಕ್ತ ಧಾರವಾಡ-ಪಂಡರಪುರ ನಡುವೆ ವಿಶೇಷ ರೈಲು ಸಂಚಾರಕೆಎಲ್‌ಇ ಜೆಜಿಎಂಎಂ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಆಸ್ಪತ್ರೆ, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಮುಂದೂಡಿಕೆಎನ್‌ಡಿಎಗೆ ಎನ್‌ಸಿಪಿ ಬೆಂಬಲದ ವದಂತಿಗಳ ನಡುವೆ ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್–ಸುಪ್ರಿಯಾ ಸುಳೆಗಣಿಕೊಪ್ಪ : ಶಾಸಕ ಬಾಬಾಸಾಹೇಬ ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಿಹಿ ಭೋಜನ, ಕಲಿಕಾ ಸಾಮಗ್ರಿ ವಿತರಣೆವಿದ್ಯಾರ್ಥಿಗಳು  ಎನ್ ಸಿಸಿ   ಮಹತ್ವ ಮತ್ತು ಅದರ ಉಪಯೋಗ ಹಾಗೂ ಅನುಕೂಲಗಳ  ಮಾಹಿತಿ ಪಡೆಯಬೇಕು: ಪ್ರೊ . ಹನುಮಂತ ಬನ್ನೂರ