Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮೂಡಲಗಿ ಉದ್ಯಮಿ ಅಪಹರಣ, ಬಿಡುಗಡೆಗೆ ₹ 5 ಕೋಟಿ ಬೇಡಿಕೆ : ನಿಪ್ಪಾಣಿ ಸಮೀಪ ಅಪಹರಣಕಾರರ ಬೀಡು ಪತ್ತೆ

ಬೆಳಗಾವಿ: ಸಿನಿಮೀಯ ರೀತಿಯಲ್ಲಿ ವ್ಯಕ್ತಿಯನ್ನು ಅಪಹರಿಸಿರುವ ದುಷ್ಕರ್ಮಿಗಳು 5 ಕೋಟಿ ರೂ. ಬೇಡಿಕೆ ಇಟ್ಟಿದ್ದು, ಅಪಹರಣಕಾರರ ಜಾಡು ಹಿಡಿದು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಅಪಹೃತ ಬಸವರಾಜ್ ರಿಯಲ್ ಎಸ್ಟೇಟ್ ಉದ್ಯಮದಲ್ಲಿದ್ದು ವ್ಯವಹಾರಿಕವಾಗಿ ಯಾಶಸ್ವಿಯಾಗಿದ್ದಾರೆ.

ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಬಸವರಾಜ ನೀಲಪ್ಪ ಅಂಬಿ(48) ಎಂಬ ವ್ಯಕ್ತಿಯನ್ನು ಅಪಹರಿಸಲಾಗಿದೆ. ಬಸವರಾಜ್ ಅವರ ಫೋನ್ ನಿಂದ ಅವರ ಪತ್ನಿ ಶೋಭಾ ಬಸವರಾಜ ಅಂಬಿ ಅವರಿಗೆ ಕರೆ ಮಾಡಿ ₹ 5 ಕೋಟಿ ಕೊಟ್ಟರೆ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗುವದು ಇಲ್ಲದಿದ್ದರೆ ಕೊಂದು ಹಾಕುವದು ಎಂದು ಸೋಮವಾರ ಕರೆ ಮಾಡಿ ಹಣವನ್ನು ನಿಪ್ಪಾಣಿಯಿಂದ ಕೊಲ್ಹಾಪುರ್ ಗೆ ಹೋಗುವ ಬೈ ಪಾಸ್ ರಸ್ತೆಯಲ್ಲಿ ತೆಗೆದುಕೊಂಡು ಬರಲು ತಿಳಿಸಿದ್ದರು.

ಅದರಂತೆ ಶೋಭಾ ಅವರು ಮನೆಯಲ್ಲಿದ್ದ ₹ 10 ಲಕ್ಷ ಮತ್ತು ಇತರರಿಂದ ಸ್ವಲ್ಪ ಜನ ಸಂಗ್ರಹಿಸಿ ತಮ್ಮ ಮಗನಿಂದ ಕಳುಹಿಸಿಕೊಟ್ಟಿದ್ದಾರೆ. ಅವರ ಮಗ ತಮ್ಮೊಂದಿಗೆ ಇತರ 4-5 ಸ್ನೇಹಿತರನ್ನೂ ಕರೆದುಕೊಂಡು ಒಂದು ಕಾರಿನಲ್ಲಿ ಹೋಗಿ ಅಪಹರಣಕಾರರು ಸೂಚಿಸಿದ್ದ ಸ್ಥಳದಲ್ಲಿ ಕಾಯುತ್ತಿದ್ದರು. ಆಗ ಒಂದು ಕಾರಿನಲ್ಲಿ ಬಂದ ಅಪಹರಣಕಾರರು ಬಹಳ ಜನರು ಬಂದಿರುವುದನ್ನೂ ಹಾಗು ಒಂದೇ ಸೂಟ್ ಕೇಸ್ ತಂದಿರುವುದನ್ನೂ ಕಂಡು ಬಹುಷಃ ಒಂದು ಕೋಟಿ ರೂಪಾಯಿ ತಂದಿರದೇ ಕಡಿಮೆ ತಂದಿರಬಹುದೆಂದು ಅಂದಾಜಿಸಿ ಹಾಗೆಯೇ ತೆರಳಿದ್ದಾರೆ.

ಸೋಮವಾರ ಸಂಜೆ ಶೋಭಾ ಅವರಿಗೆ ಪುನಃ ಫೋನ್ ಮಾಡಿ --- ನಾವು 5 ಕೋಟಿ ರೂಪಾಯಿ ಕೇಳಿದ್ದೆವು, ನೀವು ಒಂದೇ ಸೂಟ್ ಕೇಸ್ ನಲ್ಲಿ ಹಣ ಕಳುಹಿಸಿದ್ದೀರಿ. ಒಂದು ಸೂಟ್ ಕೇಸ್ ನಲ್ಲಿ ಅಷ್ಟು ಹಣ ಹಿಡಿಯಲು ಸಾಧ್ಯವಿಲ್ಲ. ಅಲ್ಲದೇ ಒಬ್ಬರನ್ನೇ ಕಳುಹಿಸಲು ಸೂಚಿಸಿದ್ದೆವು, ನೀವು 4-5 ಜನರನ್ನು ಕಳುಹಿಸಿದ್ದೀರಿ--- ಎಂದು ಹೇಳಿ ಫೋನ್ ಕಟ್ ಮಾಡಿದ್ದರು. ನಂತರ ಸ್ವಲ್ಪ ಹೊತ್ತಿನ ನಂತರ ಪುನಃ ಶೋಭಾ ಅವರಿಗೇ ಕರೆ ಮಾಡಿ ಕೊಲ್ಹಾಪುರ್ ಸಮೀಪ ನಿಪ್ಪಾಣಿ ತಾಲ್ಲೂಕಿನ ಬೇರೊಂದು ಸ್ಥಳಕ್ಕೆ ತಿಳಿಸಿದ ಹಣದೊಂದಿಗೆ ಬರಲು ತಿಳಿಸಿದ್ದರು. ಅವರ ವರ್ತನೆಯಿಂದ ಸಂಶಯಗೊಂಡ ಶೋಭಾ ಅವರು ತಮ್ಮ ಪತಿಯಿರುವಿಕೆಯ ಕುರಿತು ವಿಡಿಯೋ ಕರೆ ಮಾಡಲು ತಿಳಿಸಿದ್ದರು. ಅದರಂತೆ ಅಪಹರಣಕಾರರು ಬಸವರಾಜ್ ತಮ್ಮೊಂದಿಗಿರುವ ವಿಡಿಯೋ ಕರೆ ಮಾಡಿ ತೋರಿಸಿ ಬೇಡಿದ ಹಣ ನೀಡದಿದ್ದರೆ ಬಸವರಾಜ್ ಅವರನ್ನು ಹತ್ಯೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಪತಿ ಬಸವರಾಜ್ ಅಪಹರಣ ಮತ್ತು ಹಣದ ಬೇಡಿಕೆ ಕುರಿತು ಶೋಭಾ ಮಂಗಳವಾರ ಸಂಜೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಕುರಿತು ಪತ್ರಕರ್ತರಿಗೆ ಬುಧವಾರ ಮಾಹಿತಿ ನೀಡಿದ ಬೆಳಗಾವಿ ಜಿಲ್ಲೆ ಪೊಲೀವ್ ಮುಖ್ಯಸ್ಥ ಭೀಮಾಶಂಕರ್ ಗುಳೇದ ---- ಅಪಹರಣಕಾರರು ಮಾಡಿರುವ ಫೋನ್ ಕರೆಯ ಜಾಡು ಹಿಡಿದು ಅವರ ಬಂಧನಕ್ಕೆ ಮತ್ತು ಬಸವರಾಜ್ ಅವರ ಸುರಕ್ಷಿತ ಬಿಡುಗಡೆಗೆ ಗೋಕಾಕ್ ಮತ್ತು ಚಿಕ್ಕೋಡಿ ಡಿಎಸ್ ಪಿ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿದೆ. ಅಪಹರಣಕಾರರು ಕರ್ನಾಟಕದ ಗಡಿ ತಾಲ್ಲೂಕು ನಿಪ್ಪಾಣಿಯಲ್ಲಿರುವುದು ಗೊತ್ತಾಗಿದೆ. ಶೀಘ್ರ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

ಅಪಹರಣಕಾರರು ಮಾಡಿರುವ ಮೊಬೈಲ್‌ ಕರೆಯ ಜಾಡು ಹಿಡಿದು ಪೊಲೀಸರು ಬಂಧನಕ್ಕೆ ಜಾಲ ಬೀಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ