ಇಸ್ಲಾಮಾಬಾದ್:
ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಹಾಗೂ ವಿರೋಧ ಪಕ್ಷದ ನಾಯಕ ರಾಜಾ ರಿಯಾಝ್ ಅವರು ಶನಿವಾರದಂದು ಸೆನೆಟರ್ ಅನ್ವರ್- ಉಲ್- ಹಕ್ ಕಾಕರ್ ಅವರನ್ನು ಚುನಾವಣಾ ಉಸ್ತುವಾರಿ ನೋಡಿಕೊಳ್ಳಲು ಹಂಗಾಮಿ ಪ್ರಧಾನಿಯಾಗಿ ಹೆಸರಿಸಲು ಒಪ್ಪಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯದ ಸೆನೆಟರ್ ಕಾಕರ್ ಅವರು ಹೊಸ ಸರಕಾರವನ್ನು ಚುನಾಯಿಸುವವರೆಗೆ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ರಾಷ್ಟ್ರವನ್ನು ಮುನ್ನಡೆಸಲು ಕ್ಯಾಬಿನೆಟ್ ಅನ್ನು ಹೆಸರಿಸುತ್ತಾರೆ ಹಾಗು ಸರಕಾರದ ಮುಖ್ಯಸ್ಥರಾಗಿರುತ್ತಾರೆ.
ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅವರು ಕಾಕರ್ ಅವರ ನೇಮಕವನ್ನು ಅನುಮೋದಿಸಿದ್ದಾರೆ ಎಂದು ಪಾಕಿಸ್ತಾನದ ಜಿಯೋ ನ್ಯೂಸ್ ಹೇಳಿದೆ.