ಬೆಳಗಾವಿ ಡೈನಾಮಿಕ್, ಜನಸ್ನೇಹಿ DCP ಸ್ನೇಹಾ ವರ್ಗಾವಣೆ ..!
ಬೆಳಗಾವಿಯಲ್ಲಿ ದಾಖಲೆಯ ಸುಧೀರ್ಘ ಕಾಲ ಸೇವೆ ಸಲ್ಲಿಸಿದ ಲೇಡಿ ಸಿಂಘಂ.!
ಕಳ್ಳ-ಖದೀಮರಿಗೆ ಸಿಂಹಸ್ವಪ್ನರಾಗಿದ್ದ ಪಿ ವಿ ಸ್ನೇಹಾ..!
ಬೆಳಗಾವಿ : ನಗರ ಪೊಲೀಸ ಆಯುಕ್ತ ವಲಯದ ಡೈನಾಮಿಕ್ ಹಾಗೂ ಜನಸ್ನೇಹಿ ಪೊಲೀಸ್ ಅಧಿಕಾರಿ DCP ಸ್ನೆಹಾ ಎಂದೇ ಖ್ಯಾತಿ ಪಡೆದಿದ್ದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸ್ನೇಹಾ ಪಿ ವಿ ಇಂದು (ಆಗಸ್ಟ್ 8) ವರ್ಗಾವಣೆಗೊಂಡಿದ್ದಾರೆ.
ಗೃಹ ಇಲಾಖೆಯವರು ಹಲವು ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದಾರೆ. ಡಿಸಿಪಿ ಸ್ನೇಹಾ ಅವರನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಇವರಿಂದ ತೆರವಾದ ಸ್ಥಾನಕ್ಕೆ ಸ್ಥಳ ನಿರೀಕ್ಷೆಯಲ್ಲಿದ್ದ ನಿರಂಜನ್ ರಾಜೆ ಅರಸ್ ಅವರನ್ನು ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.
ಅತಿಹೆಚ್ಚು ಕಾಲ ಡಿಸಿಪಿಯಾಗಿ ಸೇವೆ ಸಲ್ಲಿಸಿ ದಾಖಲೆಗೈದ ಸ್ನೆಹಾ..!
ಜುಲೈ 30 2021 ರಂದು ಬೆಳಗಾವಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ ಸ್ನೇಹಾ ಅವರು 3 ವರ್ಷಕ್ಕೂ ಹೆಚ್ಚು ಸಮಯದವರೆಗೆ ಸೇವೆ ಸಲ್ಲಿಸಿ ದಾಖಲೆ ಮಾಡಿದ್ದಾರೆ. 2014 ರಲ್ಲಿ ಪೊಲೀಸ್ ಆಯುಕ್ತ ಕಚೇರಿ ಆದ ನಂತರ ಸ್ನೇಹಾ ಅವರೇ ಅತಿ ಹೆಚ್ಚು ಕಾಲ ಡಿಸಿಪಿಯಾಗಿ ಮುಂದುವರಿದವರಾಗಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತ ವ್ಯಾಪ್ತಿಯಲ್ಲಿ ಡಿಸಿಪಿ ಸ್ನೇಹಾ ಅವರು ಟ್ರಾಫಿಕ್ ಹಾಗೂ ಅಪರಾಧ ವಿಭಾಗದ ಸೂಕ್ಷ್ಮತೆಯನ್ನು ಅರಿತು ವ್ಯವಸ್ಥೆಯಲ್ಲಿ ತ್ವರಿತವಾಗಿ ಬದಲಾವಣೆ ತಂದಿದ್ದರು.ಅದಲ್ಲದೇ ರಾಜ್ಯ ಹಾಗೂ ಅಂತರಾಜ್ಯ ಕುಖ್ಯಾತ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ನಿಸ್ಸಿಂಹರಾಗಿದ್ದರು. ಹೀಗಾಗಿ ಅನ್ಯಾಯಕ್ಕೂಳಗಾಗಿದ್ದವರಿಗೆ, ಸಹೋದ್ಯೋಗಿಗಳಿಗೆ, ಅಧಿಕಾರಿಗಳಿಗೆ ಹಾಗೂ ಜನತೆಗೆ ಜನಸ್ನೇಹಿ ಅಧಿಕಾರಿಯಾಗಿದ್ದರು.
ಇವರ ವರ್ಗಾವಣೆಯನ್ನು ಬೆಳಗಾವಿ ಜನತೆ, ಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.