ಬೆಂಗಳೂರು :
ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಹತ್ತಿರದ ಸಂಬಂಧಿಗಳು ಸ್ಥಾನ ಪಡೆದುಕೊಂಡಿದ್ದಾರೆ.
ಚಿಂತಾಮಣಿ ಕ್ಷೇತ್ರದಲ್ಲಿ ಮೂರನೇ ಸಲ ಗೆದ್ದಿರುವ ಎಂ.ಪಿ.ಸುಧಾಕರ ಹಾಗೂ ಬ್ಯಾಟರಾಯನಪುರ ಕ್ಷೇತ್ರ ಪ್ರತಿನಿಧಿಸಿರುವ ಕೃಷ್ಣ ಬೈರೇಗೌಡ ಸಂಬಂಧಿಗಳು. ಕೃಷ್ಣ ಬೈರೇಗೌಡ ಅವರ ತಂದೆ ಮಾಜಿ ಸಚಿವ ಸಿ.ಬೈರೇಗೌಡ ಅವರ ಅಕ್ಕ ಶಾಂತಮ್ಮ ಅವರು ಸುಧಾಕರ್ ಅವರ ತಾಯಿ. ಹೀಗಾಗಿ ಇಬ್ಬರು ಹತ್ತಿರದ ಸಂಬಂಧಿಗಳಾಗಿದ್ದಾರೆ.