ಬೆಳಗಾವಿ :
ಬೆಳಗಾವಿ ಜಿ.ಎ.ಹೈಸ್ಕೂಲಿನ 9 ನೇ ತರಗತಿಯ ವಿದ್ಯಾರ್ಥಿ ಎನ್ಸಿಸಿ ಕೆಡೆಟ್ ವಿಶಾಲ ಸಂದೀಪ ಶಿರೋಳ್ಕರ ಈ ತಿಂಗಳು ಬೆಂಗಳೂರಿನಲ್ಲಿ ಜರುಗಿದ ಅಂತಿಮ ಸುತ್ತಿನಲ್ಲಿ ಕರ್ನಾಟಕ- ಗೋವಾ ಡೈರೋಕ್ಟರೇಟ್ದಿಂದ ಆಯ್ಕೆಯಾಗಿ ದೆಹಲಿಯ ರಾಷ್ಟ್ರ ಮಟ್ಟದ ಸೈನಿಕ ಶಿಬಿರದಲ್ಲಿ ಪಾಲ್ಗೊಂಡಿದ್ದ. (ಡಿಜಿ)ಎನ್ಸಿಸಿ ಡೈರೆಕ್ಟರ್ ಜನರಲ್ ಜರುಗಿಸಿದ ಅಂತಿಮ ಸೈನಿಕ ಶಿಬಿರದ ಶೂಟಿಂಗ್ದಲ್ಲಿ ವಿಶಾಲ ಸಂದೀಪ ಶಿರೋಳ್ಕರ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡು ಇತಿಹಾಸ ನಿರ್ಮಿಸಿದ್ದಾನೆ.
26 ಕರ್ನಾಟಕ ಎನ್ಸಿಸಿ ಬಟಾಲಿಯನ್ ಕೆಡೆಟ್ ವಿಶಾಲ ಸಂದೀಪ ಈ ಸಾಧನೆ ಮಾಡಿದ ಜಿ.ಎ.ಹೈಸ್ಕೂಲಿನ ಪ್ರಥಮ ಎನ್ಸಿಸಿ ಕೆಡೆಟ್.
ವಿದ್ಯಾರ್ಥಿಯ ಈ ಸಾಧನೆಗೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಬೆಳಗಾವಿ ಗ್ರುಫ್ ಕಮಾಂಡರ್ ಕರ್ನಲ್ ಮೋಹನ್ ನಾಯ್ಕ, 26 ಕರ್ನಾಟಕ ಎನ್ಸಿಸಿ ಬಟಾಲಿಯನ್ ಕಮಾಡಿಂಗ್ ಆಫೀಸರ್ ಕರ್ನಲ್ ಎಸ್. ದರ್ಶನ್, ಎಡಮ್ ಆಫೀಸರ್ ಶಂಕರ ಯಾದವ್, ಸುಬೇದಾರ್ ಮೇಜರ್ ನಿಲೇಶ್ ದೇಸಾಯಿ, ಆಜೀವ ಸದಸ್ಯ ಮಹಾದೇವ ಬಳಿಗಾರ, ಪ್ರಾಚಾರ್ಯ ಎಸ್.ಆರ್.ಗದಗ, ಎನ್ಸಿಸಿ ಅಧಿಕಾರಿ ಚೀಫ್ ಆಫೀಸರ್ ಸಿ. ಪಿ. ದೇವಋಷಿ ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.