ಬೆಳಗಾವಿ : ಸೋಮವಾರದಂದು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಐ ಕ್ಯೂ ಎ ಸಿ ಘಟಕ ಬೆಳಗಾವಿ ಹಾಗೂ ಭಾರತ ಸರ್ಕಾರ ಮೇರಾ ಭಾರತ ಕೇಂದ್ರ ಬೆಳಗಾವಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ , ಫ್ಯಾಮಿಲಿ ಅಸೋಸಿಯೇಷನ್ ಆ್ಯಂಡ್ ಪ್ಲ್ಯಾನಿಂಗ್ ಆಫ್ ಇಂಡಿಯಾದ ಸಂಯುಕ್ತಾಶ್ರಯದಲ್ಲಿ ದಿವ್ಯ ಚೇತನ ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಯುವ ದಿನ 2026 ನ್ನು ಸಸಿಗೆ ನೀರೆರೆಯುವ ಮೂಲಕ ಹಾಗೂ ಸ್ವಾಮಿ ವಿವೇಕಾನಂದರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು.
ಡಾ. ಭಾವನಾ ದೇಶಪಾಂಡೆ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಭಾವಿ ಶಿಕ್ಷಕರು ಹಾಗೂ ಯುವಕರಿಗೆ ಆದರ್ಶವಾಗಬೇಕು. ಇಂದು ಸೃಜನಶೀಲತೆ, ಕ್ರಿಯಾಶೀಲತೆ ಕಡಿಮೆಯಾಗುತ್ತಿದೆ. ಭಾರತದ ಸಮಗ್ರ ವಿಕಾಸಕ್ಕೆ ವಿವೇಕಾನಂದರ ಚಿಂತನೆಗಳು ಅವಶ್ಯವಾಗಿವೆ. ಸ್ವಜನಶೀಲತೆಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯೆ ಡಾ. ನಿರ್ಮಲಾ ಜಿ ಬಟ್ಟಲ ಸ್ವಾಮಿ ವಿವೇಕಾನಂದರು ಕುಶಾಗ್ರಮತಿ, ಬುದ್ಧಿವಂತರಾಗಿದ್ದರು. ಆಗಿನ ಕಾಲಘಟ್ಟದ ಸಾಮಾಜಿಕ ಸಮಸ್ಯೆಗಳಿಗೆ ಆಧ್ಯಾತ್ಮಿಕತೆ ಮೂಲಕ ಪರಿಹಾರ ನೀಡಿದರು, ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಬಂದಿದ್ದ ಸನ್ನಿವೇಶವನ್ನು ಸ್ಮರಿಸಿದರು. ವಿವೇಕಾನಂದರ ಜೀವನ , ಸಾಧನೆ, ಶಿಕ್ಷಣಕ್ಕೆ ನೀಡಿರುವ ಕೊಡುಗೆಗಳನ್ನು ಸವಿಸ್ತಾರವಾಗಿ ಹೇಳಿ ಇಂದಿನ ಯುವಕರಿಗೆ ಸ್ವಾಮಿ ವಿವೇಕಾನಂದರರೇ ಆದರ್ಶ .ಅವರ ಜೀವನ, ಶಿಸ್ತು,ಚಿಂತನೆ , ತತ್ವಗಳನ್ನು, ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಭಾವಿ ಶಿಕ್ಷಕರಿಗೆ ಕರೆ ನೀಡಿದರು.
ಶನಿವಾರ “ಸ್ಥಿರ ಯುವ ನಾಯಕತ್ವಕ್ಕಾಗಿ ಸ್ವಾಮಿ ವಿವೇಕಾನಂದರ ದೃಷ್ಟಿಕೋನ “ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಡಾ. ಗೀತಾ ದಯಣ್ಣವರ ನಡೆಸಿ ಕೊಟ್ಟರು. ಪ್ರಶಿಕ್ಷಣಾರ್ಥಿಗಳಾದ ವೃತಿಕಾ ಜಾಲಿಹಾಳ ಪ್ರಥಮ , ಪ್ರಜ್ವಲ ವಣ್ಣೂರ ದ್ವಿತೀಯ , ಆಶಾ ಮುನೆನ್ನಿ ತೃತೀಯ ಹಾಗೂ ಪ್ರೇಮ ಕುಮಾರ , ವೀಣಾ ಹಿರೇಮಠ, ಕವಿತಾ ಕಡಬಿ ಸಮಾಧಾನಕರ ಬಹುಮಾನ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಪ್ರೇಮಕುಮಾರಿ ಎಚ್.ವಿ. ಪ್ರೊಗ್ರಾಂ ಆಫೀಸರ್ ಹಾಗೂ ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ಪ್ರಥಮ, ತೃತೀಯ ಸೆಮಿಸ್ಟರ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಅನ್ನಪೂರ್ಣ ಹಣಬರ ಪ್ರಾರ್ಥಿಸಿದರು, ಪ್ರೊ.ಮಂಜುನಾಥ ಕಲಾಲ ಸ್ವಾಗತಿಸಿದರು, ಪ್ರಶಿಕ್ಷಣಾರ್ಥಿ ಅಂಜನಾ ಬುಡಕಿ ವಂದಿಸಿದರು, ನಿಖಿತಾ ಲಂಗೋಟಿ ನಿರೂಪಿಸಿದರು.


