ಬೆಳಗಾವಿ : ವಿಶೇಷ ಚೇತನರ ದುಡಿಮೆಗೆ ಅರ್ಧದಷ್ಟು ವಿನಾಯಿತಿ ನೀಡಿ ಪೂರ್ಣ ವೇತನ ಪಾವತಿಸುವ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಅವರಿಗೆ ಆರ್ಥಿಕ ಸ್ವಾವಲಂಬನೆಯ ಬದುಕು ನಡೆಸಲು ಊರುಗೋಲಾಗಿದೆ ಎಂದು ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕು ಪಂಚಾಯಿತಿ ಇಒ ಸುಭಾಷ ಸಂಪಗಾಂವಿ ಹೇಳಿದರು.
ಬೈಲಹೊಂಗಲ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಮನರೇಗಾ ಯೋಜನೆಯ ಐಇಸಿ ಚಟುವಟಿಕೆಯಡಿ ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕಿನ ವಿಶೇಷಚೇತನರಿಗೆ ಹಾಗೂ ಪುನರ್ ವಸತಿ ಕಾರ್ಯಕರ್ತರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶೇಷಚೇತನರು ಯಾವಾಗಲೂ ಅನುಕಂಪಕ್ಕೆ ಕಟಿಬೀಳದೇ ಸ್ವಾಭಿಮಾನದಿಂದ ದುಡಿದು ಸ್ವಾಭಿಮಾನದ ಬದುಕು ಬದುಕಲು ಮನರೇಗಾ ಯೋಜನೆ ಅತ್ಯಂತ ಮಹತ್ವದ ಪಾತ್ರವಹಿಸುತ್ತಿದ್ದೆ. ವಿಶೇಷ ಚೇತನರಿಗೂ ಉದ್ಯೋಗ ನೀಡಿ ಆರ್ಥಿಕವಾಗಿ ಬೆಳೆಸುವದರ ಜೊತೆ ಅವರಲ್ಲಿ ಆತ್ಮಸ್ಥೆರ್ಯ ತುಂಬುತ್ತದೆ ಎಂದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿಶೇಷಚೇತನರಿಗೆ ಕೆಲಸದಲ್ಲಿ 50% ರಿಯಾಯಿತಿ ಜೊತೆ ದಿನಕ್ಕೆ 316 ರೂ. ಕೂಲಿ ಮೊತ್ತ ಇದೆ. ಪೂರ್ಣ ಕೂಲಿ ಅವರ ಖಾತೆಗೆ ನೇರವಾಗಿ ಜಮೆ ಆಗುತ್ತದೆ. ವರ್ಷದಲ್ಲಿ 100 ದಿನ ಕೆಲಸ ನೀಡಲಾಗುತ್ತದೆ. ಯೋಜನೆಯಲ್ಲಿ ಕೂಲಿಕೆಲಸದ ಜೊತೆ ವೈಯಕ್ತಿಕ ಕಾಮಗಾರಿಗಳು ಸಹ ಮಾಡಿಕೊಳ್ಳಲು ಅವಕಾಶ ಇದ್ದು ಯೋಜನೆಯ ಉಪಯೋಗ ಪಡೆದು ಸ್ವಯಂ ಉದ್ಯೋಗ ಮಾಡಿಕೊಳ್ಳಬಹುದು. ಪ್ರತಿಯೊಬ್ಬ ವಿಶೇಷ ಚೇತನರು ಈ ಯೋಜನೆಯಡಿ ದುಡಿದು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕರಾದ ವಿಜಯ ಪಾಟೀಲ, ವ್ಯವಸ್ಥಾಪಕರಾದ ಎಂ.ಎ. ಇಂಚಲಮಠ, ಐಇಸಿ ಸಂಯೋಜಕರಾದ ಎಸ್.ಬಿ.ಜವಳಿ, ಶಿವಮೂರ್ತಿ ಹೀರೆಮಠ, ತಾಂತ್ರಿಕ ಸಂಯೋಜಕರಾದ ಸುನಿಲ ಅವರನಾಳ, ಎಂಐಎಸ್ ಸಂಯೋಜಕರಾದ ಎಂ.ಬಿ.ಶಿವಪೂರ, ಭಾರತಿ ದೊಡ್ಡಗೌಡರ, ಕೆನರ ಬ್ಯಾಂಕ್ ಸಂಯೋಜಕರಾದ ಗೀತಾ ಖಾನಪೇಠ, ತಾಲೂಕು ಪುನರ ವಸತಿ ಕಾರ್ಯಕರ್ತ ಪಕ್ಕಿರಗೌಡ ಪಾಟೀಲ ಹಾಗೂ ತಾಪಂ ಸಿಬ್ಬಂದಿ ಪಾಲ್ಗೊಂಡಿದ್ದರು.
*ಫೋಟೋ-ಶೀರ್ಷಿಕೆ-01
ಬೈಲಹೊಂಗಲ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ವಿಶೇಷಚೇತನರಿಗೆ ಹಾಗೂ ಪುನರ್ ವಸತಿ ಕಾರ್ಯಕರ್ತರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ತಾಪಂ ಇಒ ಇಒ ಸುಭಾಷ ಸಂಪಗಾಂವಿ ಮಾತನಾಡಿದರು. ತಾಪಂ ಸಹಾಯಕ ನಿರ್ದೇಶಕರಾದ ವಿಜಯ ಪಾಟೀಲ, ವ್ಯವಸ್ಥಾಪಕರಾದ ಎಂ.ಎ. ಇಂಚಲಮಠ, ತಾಲೂಕು ಪುನರ್ ವಸತಿ ಕಾರ್ಯಕರ್ತ ಪಕ್ಕಿರಗೌಡ ಪಾಟೀಲ ಇತರರಿದ್ದರು.
*ಫೋಟೋ-ಶೀರ್ಷಿಕೆ-02
ಬೈಲಹೊಂಗಲ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಕಾರ್ಯಾಗಾರವನ್ನು ಕಿತ್ತೂರು, ಬೈಲಹೊಂಗಲ ತಾಪಂ ಇಒ ಇಒ ಸುಭಾಷ ಸಂಪಗಾಂವಿ ಉದ್ಘಾಟಿಸಿದರು. ತಾಪಂ ಸಹಾಯಕ ನಿರ್ದೇಶಕರಾದ ವಿಜಯ ಪಾಟೀಲ, ವ್ಯವಸ್ಥಾಪಕರಾದ ಎಂ.ಎ. ಇಂಚಲಮಠ, ಐಇಸಿ ಸಂಯೋಜಕರಾದ ಎಸ್.ಬಿ.ಜವಳಿ, ಶಿವಮೂರ್ತಿ ಹೀರೆಮಠ, ತಾಂತ್ರಿಕ ಸಂಯೋಜಕರಾದ ಸುನಿಲ ಅವರನಾಳ, ಎಂಐಎಸ್ ಸಂಯೋಜಕರಾದ ಎಂ.ಬಿ.ಶಿವಪೂರ, ಭಾರತಿ ದೊಡ್ಡಗೌಡರ, ಕೆನರ ಬ್ಯಾಂಕ್ ಸಂಯೋಜಕರಾದ ಗೀತಾ ಖಾನಪೇಠ ಇದ್ದರು.