ಬೆಳಗಾವಿ : ಗರ್ದಿ ಗಮ್ಮತ್ ಸುದ್ದಿ ವಾಹಿನಿಯ ಸಂಪಾದಕ, ಉದ್ಯಮಿ ಬಾಪುಗೌಡ ಪಾಟೀಲ ಅವರ ಧರ್ಮಪತ್ನಿ ಶ್ರೀಮತಿ ನಂದಾ ಪಾಟೀಲ ನಿಧನರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮೃತರ ಮನೆಗೆ ತೆರಳಿ, ಬಾಪುಗೌಡ ಪಾಟೀಲ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಗಣ್ಯರು ತೆರಳಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.
ಶೋಕ : ನಂದಾ ಪಾಟೀಲ ಅವರ ನಿಧನಕ್ಕೆ ಜನಜೀವಾಳ ಶೋಕ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದೆ.


