ರಾಜಗೀರ್: ಆಧುನಿಕ ಹಾಗೂ ಸಂಶೋಧನಾಧಾರಿತ ಉನ್ನತ ಶಿಕ್ಷಣ ವ್ಯವಸ್ಥೆ ಜಾರಿ ಮೂಲಕ ಭಾರತವು ಜಗತ್ತಿನ ಅತ್ಯಂತ ಪ್ರಮುಖ ಜ್ಞಾನ ಕೇಂದ್ರವನ್ನಾಗಿ ರೂಪಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಿಹಾರದ ರಾಜಗೀರ್ನಲ್ಲಿ ನಳಂದ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟನಾ ಸಮಾರಂಭದಲ್ಲಿ ಅವರು ಬುಧವಾರ ಮಾತನಾಡಿದರು.
ಉನ್ನತ ಶಿಕ್ಷಣದಲಿ ಇಡೀ ಜಗತಿಗೇ ಈ ವಿಶ್ವವಿದ್ಯಾಲ ಜ್ಞಾನದ ಕೇಂದ್ರವಾಗಿತ್ತು. ಆದರೆ
12ನೇ ಶತಮಾನದಲ್ಲಿ ದಾಳಿಕೋರರಿಂದ ಹಾಳಾಯಿತು. ಆದರೆ ಬೆಂಕಿಯಿಂದ ಜ್ಞಾನವನ್ನು ನಾಶಪಡಿಸಲು ಎಂದಿಗೂ ಸಾಧ್ಯವಾಗದು. ಹೀಗಾಗಿ 21ನೇ ಶತಮಾನದಲ್ಲಿ ಭಾರತ ತನ್ನ ಜ್ಞಾನವನ್ನು ಜಗತ್ತಿಗೆ ಹಂಚಬೇಕಿದೆ. 21ನೇ
ಶತಮಾನ ಏಷ್ಯಾದ್ದಾಗಿದೆ. 2047ರ ಹೊತ್ತಿಗೆ ದೇಶ
ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆರ್ಥಿಕ ಹಾಗೂ ಸಾಂಸ್ಕೃತಿಕ ನಾಯಕರು ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡ ಸಾಧನೆಗಳೇ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಿದೆ ಎಂಬುದಕ್ಕೆ ಸಾಕ್ಷಿ. ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ನಳಂದ ಹಾಗೂ ವಿಕ್ರಮಶಿಲೆಯಂತ ಉನ್ನತ ಶಿಕ್ಷಣ ಸಂಸ್ಥೆಗಳಿದ್ದವು ಎಂಬುದೇ ನಮ್ಮ ಹೆಮ್ಮೆ. ಇನ್ನು ಕೆಲವೇ ದಿನಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಇದ್ದು, ಜಗತ್ತಿಗೆ ಸಂಸ್ಕೃತಿಯ ರಾಯಭಾರಿಯಾಗಿ ತನ್ನ ಕೆಲಸವನ್ನು ಭಾರತ ಮಾಡಲಿದೆ ಎಂದು ಮೋದಿ ಹೇಳಿದ್ದಾರೆ.
‘ದೇಶವನ್ನು ಜಗತ್ತಿನ ಉನ್ನತ ಜ್ಞಾನದ ಕೇಂದ್ರವನ್ನಾಗಿ ಮರುಸ್ಥಾಪಿಸುವುದೇ ನನ್ನ ಕಾರ್ಯಯೋಜನೆ. ಇದಕ್ಕಾಗಿ ಬಾಲ್ಯದಿಂದಲೇ ಮಕ್ಕಳಲ್ಲಿ ನಾವೀನ್ಯತೆಯನ್ನು ಜಾಗೃತಿಗೊಳಿಸಬೇಕು.