ಬೆಳಗಾವಿ:
ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ವತಿಯಿಂದ
ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಜೂ.21 ರಂದು ನಡೆಯಲಿದೆ.
ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದ ಎಸ್.ಜಿ. ಬಾಳೆಕುಂದ್ರಿ ಸಭಾಭವನದಲ್ಲಿ
ಬುಧವಾರ ಸಂಜೆ 4:30 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬೆಳಗಾವಿಯ ಮಹಿಳಾ
ಸಾಹಿತಿ ನೀಲಗಂಗಾ ಚರಂತಿಮಠ ಮತ್ತು ಬೀಳಗಿಯ ಅಕ್ಕನ ಬಳಗದ ಅಧ್ಯಕ್ಷೆ
ಕಮಲಕ್ಕ ಸೊಂಟ ಇವರಿಗೆ ಶ್ರೀಮತಿ ಪದ್ಮಾವತಿ ಷಣ್ಮುಖಪ್ಪ ಅಂಗಡಿ ಅವರ ಸ್ಮರಣೆಯಲ್ಲಿ
ಸ್ಥಾಪಿಸಲಾಗಿರುವ ಮಹಿಳಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಶ್ರೀಮಠದ
ಪ್ರಕಟಣೆ ತಿಳಿಸಿದೆ.
ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿಯವರ
ಸಾನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದ ನೇತೃತ್ವವನ್ನು ಬೆಳಗಾವಿ ನಾಗನೂರು ರುದ್ರಾಕ್ಷಿ
ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ವಹಿಸಲಿದ್ದಾರೆ. ರಾಜ್ಯದ ಮಹಿಳಾ ಮತ್ತು ಮಕ್ಕಳ
ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಸ್ತಿ ಪ್ರದಾನ
ಮಾಡಲಿದ್ದಾರೆ.
ಐಎಎಸ್ ಪರೀಕ್ಷೆ ಪಾಸ್ ಮಾಡಿರುವ ಅರಭಾವಿಯ ಶ್ರುತಿ ಯರಗಟ್ಟಿ ಅವರನ್ನು ಸನ್ಮಾನಿಸಲಾಗುತ್ತಿದೆ. ಮೈತ್ರೆಯಿಣಿ ಗದಿಗೆಪ್ಪಗೌಡರ ವಿಶೇಷ
ಉಪನ್ಯಾಸ ನೀಡಲಿದ್ದಾರೆ, ಕಲ್ಬುರ್ಗಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕಿ
ಉಜ್ವಲಾ ಹಿರೇಮಠ ಉಪಸ್ಥಿತರಿರಲಿದ್ದಾರೆ.