ಮುನವಳ್ಳಿ: ಬೈಲಹೊಂಗಲ ತಾಲ್ಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ಶ್ರೀಕೃಷ್ಣ ರುಕ್ಷ್ಮಣಿ ಲಗ್ನದ ಶುಭ ದಿವಸದ ನಿಮಿತಾರ್ಥ ದಿಂಡಿ ಉತ್ಸವ ಫೆ.2 ರಂದು ಜರುಗಲಿದೆ
ಬೆಳಿಗ್ಗೆ ಪೋಥಿ ಸ್ಥಾಪನೆ ಹಾಗೂ ಮಧ್ಯಾಹ್ನ ಶ್ರೀಕೃಷ್ಣ ರುಕ್ಷೀಣಿಯರ ವಿವಾಹ, ಅಕ್ಷತಾರೋಪಣ ಮತ್ತು ಪ್ರವಚನ ಹಾಗೂ ಕಿರ್ತನ, ಫೆ. 3 ರಂದು ಬೆಳಿಗ್ಗೆ 5 ರಿಂದ ಕಾಕಡಾರ್ತಿ 9 ಗಂಟೆಯಿಂದ ಪ್ರವಚನ ಮಧ್ಯಾಹ್ನ 1ಕ್ಕೆ ಕೀರ್ತನ, ಸಂಜೆ 5 ರಿಂದ ಪ್ರವಚನ, ರಾತ್ರಿ ನಾಮ ಸಂಕೀರ್ತನ.
ಫೆ.4 ರಂದು ಬೆಳಗ್ಗೆ ಪಾಲಕಿ ದಿಂಡಿ ಉತ್ಸವ ಹಾಗೂ ಮಧ್ಯಾಹ್ನ ಮಹಾಪ್ರಸಾದ ದೊಂದಿಗೆ ಕಾರ್ಯಕ್ರಮ ಮಂಗಲಗೊಳ್ಳುವುದು.
ಭಕ್ತಾದಿಗಳು ಬಾಳ, ಗೋಪಾಳ, ತಾಳ, ಮೃದಂಗ ಸಹಿತ ಬಂದು ಶ್ರೀಹರಿ ಕೃಪೆಗೆ ಪಾತ್ರರಾಗಬೇಕೆಂದು ಮಾವಲಿ ರಣಸಿಂಗ ಪ್ರಕಟಣೆಯಲ್ಲಿ ಕೋರಿದ್ದಾರೆ.