ಬೆಳಗಾವಿ: ಲೋಕಸಭಾ ಸದಸ್ಯ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಗುರುವಾರ ಬೆಳಗಾವಿಯ ಚೇಂಬರ್ಸ್ ಅಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ( ಬಿಸಿಸಿಐ ) ಅಧ್ಯಕ್ಷರು ಮತ್ತು ಆಡಳಿತ ಕಮೀಟಿ ಸದಸ್ಯರನ್ನು ಭೇಟಿ ಮಾಡಿ, ಬೆಳಗಾವಿ ನಗರದಲ್ಲಿ ಕೈಕೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಿದರು.
ಬೆಳಗಾವಿ – ಬೆಂಗಳೂರು ನಡುವೆ ವಂದೇ ಭಾರತ ಎಕ್ಸ್ ಪ್ರೆಸ್ ಸಂಚಾರ ಪ್ರಾರಂಭಕ್ಕೆ ಶ್ರಮಿಸಿರುವುದಕ್ಕಾಗಿ ಬೆಳಗಾವಿ ಲೋಕಸಭಾ ಸದಸ್ಯರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಬೆಳಗಾವಿ ನಗರದಲ್ಲಿ ಉದ್ಯಮ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ, ಈಗಾಗಲೇ ಬೆಳಗಾವಿ-ಕಿತ್ತೂರು-ಧಾರವಾಡ ನಡುವೆ ನೂತನ ರೈಲು ಮಾರ್ಗ ನಿರ್ಮಾಣ ಪ್ರಕ್ರಿಯೆ ಅಂತಿಮ ಹಂತ ತಲುಪಿರುವ ಬಗ್ಗೆ ತಿಳಿಸುತ್ತಾ, ಅದರಂತೆ ನಗರ ಸುತ್ತಲು ರಿಂಗ್ /ಬೈಪಾಸ್ ರಸ್ತೆ ನಿರ್ಮಾಣ ಹಾಗೂ ವಿಮಾನಯಾನ ಅಭಿವೃದ್ಧಿ ಕುರಿತು ನಡೆಸಲಾಗುತ್ತಿರುವ ಕಾಮಗಾರಿಗಳ ಸ್ಥಿತಿಗತಿಯ ಬಗ್ಗೆ ಬೆಳಗಾವಿ ಲೋಕಸಭಾ ಸದಸ್ಯರು ಹಾಜರಿದ್ದ ಬಿಸಿಸಿಐ ಆಡಳಿತ ಮಂಡಳಿ ಸದಸ್ಯರಿಗೆ ಇದೆ ಸಂದರ್ಭದಲ್ಲಿ ತಿಳಿಸಿದರು. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಶ್ರಮ ವಹಿಸಿ ಬೆಳಗಾವಿ ಉದ್ಯಮಿಕರಣಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.
ಅಧ್ಯಕ್ಷ ಪ್ರಭಾಕರ ನಾಗರಮುನ್ನೋಳಿ, ಹಿರಿಯ ಉಪಾಧ್ಯಕ್ಷ ಸ್ವಪ್ಟಿಲ್ ಶಹಾ, ಕಾರ್ಯದರ್ಶಿ ಸತೀಶ ಕುಲಕರ್ಣಿ, ಜಂಟಿ ಕಾರ್ಯದರ್ಶಿ ಮನೋಜ ಮತ್ತಿಕೊಪ್ಪ , ಟ್ರೇಜರರ್ ಸಂಜಯ ಪೋತದಾರ, ಆನಂದ ದೇಸಾಯಿ, ಧರಗಶೆಟ್ಟಿ, ಕಪಾಡಿಯಾ, ವಿಕ್ರಮ ಜೈನ, ಗುರವ್ ಮತ್ತು ಎಂ. ಕೆ ಹೆಗಡೆ ಹಾಜರಿದ್ದರು.