ಬೆಳಗಾವಿ: ಗಣೇಶ ಚತುರ್ಥಿ ಅಂಗವಾಗಿ ಪ್ರಯಾಣಿಕರ ದಟ್ಟಣೆ ತಪ್ಪಿಸಲು ವಿಶೇಷ ರೈಲು ಪ್ರಾರಂಭಿಸುವುದರ ಬಗ್ಗೆ ನೈರುತ್ಯ ರೈಲ್ವೆ ಮಹಾಪ್ರಬಂಧಕರಿಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಯಶವಂತಪುರನಿಂದ ಬೆಳಗಾವಿಗೆ ಮತ್ತು ಬೆಳಗಾವಿಯಿಂದ ಯಶವಂತಪುರಗೆ ಎರಡು ದಿನಗಳವರೆಗೆ ವಿಶೇಷ ರೈಲು ಬಿಡಲು ಆದೇಶಿಸಿರುತ್ತಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು
ಶನಿವಾರ ಸೆ-09ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಯಶವಂತಪುರ-ಬೆಳಗಾವಿ ರೈಲು (07389) ಸೆ.15 ರ ಸಂಜೆ 6.15 ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು 16ರ ಬೆಳಗ್ಗೆ 6.00 ಕ್ಕೆ ಬೆಳಗಾವಿ ತಲುಪಲಿದೆ.
ಬೆಳಗಾವಿ-ಯಶವಂತಪುರ ರೈಲು (07390) ಸೆ.16ರ ಸಂಜೆ 5.30 ಕ್ಕೆ ಬೆಳಗಾವಿಯಿಂದ ಹೊರಟು 17 ರ ಬೆಳಗ್ಗೆ 04.30 ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.
ಯಶವಂತಪುರ-ಬೆಳಗಾವಿ ರೈಲು (07391) ಸೆ.17 ರ ಸಂಜೆ 6.15 ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು 18ರ ಬೆಳಗ್ಗೆ 6.00 ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿ-ಯಶವಂತಪುರ ರೈಲು (07392) ಸೆ.18ರ ಸಂಜೆ 5.30 ಕ್ಕೆ ಬೆಳಗಾವಿಯಿಂದ ಹೊರಟು 19 ರ ಬೆಳಗ್ಗೆ 04.30 ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ನನ್ನ ಮನವಿಗೆ ಸ್ಪಂದಿಸಿ ಶೀಘ್ರ ರೈಲಿನ ವ್ಯವಸ್ಥೆ ಮಾಡಿದ ನೈರುತ್ಯ ರೈಲ್ವೆ ಮಹಾಪ್ರಬಂಧಕರಿಗೆ ಈ ಮೂಲಕ ಧನ್ಯವಾದಗಳನ್ನು ತಿಳಿಸಿದರು.