ಬೆಳಗಾವಿ:
ಚಲಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಹಾರಾಷ್ಟ್ರದ ಮುಚ್ಚಂಡಿ ಸಮೀಪ ನಡೆದಿದೆ.
ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಅಭಿಷೇಕ ಆರವೇಕರ್ (22) ಸಲ್ಮಾನ್ ಮುಕ್ಕೇರಿ (18) ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟ್ರ್ಯಾಕ್ಟರ್ ಜಗ್ಗಾಟ ಸ್ಪರ್ಧೆಗೆ ಹೋಗುವ ವೇಳೆ ಅವಘಡ ಸಂಭವಿಸಿದೆ.