ಮಂಗಳೂರು :
ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ತಾಯಿ-ಮಗಳು ಪಿಯುಸಿ ಪರೀಕ್ಷೆ ಜತೆಜತೆಗೇ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ.
ಸುಳ್ಯ ಗೃಹ ರಕ್ಷಕದಳದ ಸಿಬ್ಬಂದಿ ಗೀತಾ ಹಾಗೂ ಅವರ ಪುತ್ರಿ ತ್ರಿಷಾ ಪಾಸ್ ಆದವರು. ಖಾಸಗಿಯಾಗಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದು ಬಿಡುವಿನ ವೇಳೆಯಲ್ಲಿ ಓದಿದ್ದ ಗೀತಾ ಇದೇ ರೀತಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಪಾಸ್ ಆಗಿದ್ದರು.