ಅಹ್ಮದಾಬಾದ್ :
ಗುಜರಾತ್ ನ ಮೊರ್ಬಿಯ ಮಚ್ಚು ನದಿಯ ತೂಗು ಸೇತುವೆ ದುರಂತದಲ್ಲಿ ಇದುವರೆಗೆ ಸಾವಿನ ಸಂಖ್ಯೆ 132 ಕ್ಕೆ ಏರಿದೆ.
ಮತ್ತಷ್ಟು ಜನ ನಾಪತ್ತೆಯಾಗಿದ್ದು ಕಾರ್ಯಾಚರಣೆ ನಡೆದಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪಶ್ಚಿಮ ಗುಜರಾತಿನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನಗಳಷ್ಟು ಹಳೆಯ ತೂಗು ಸೇತುವೆ ಭಾನುವಾರ ಸಂಜೆ ಮುರಿದು ಬಿದ್ದಿತ್ತು. ಇದರಿಂದ ನೂರಕ್ಕೂ ಹೆಚ್ಚು ಜನ ನೀರುಪಾಲಾಗಿದ್ದರು. 185 ಜನರನ್ನು ಇದುವರೆಗೆ ರಕ್ಷಿಸಲಾಗಿದೆ. ದುರಂತ ಸ್ಥಳದಲ್ಲಿ ನೀರಿನ ಪ್ರಮಾಣ ಕಡಿಮೆ ಮಾಡಲು ಇದೀಗ ಚೆಕ್ ಡ್ಯಾಮ್ ತೆರೆಯಲಾಗಿದೆ. ನೀರಿನ ಮಟ್ಟ ಕಡಿಮೆಯಾದರೆ ಕಾರ್ಯಾಚರಣೆಗೆ ಅನನುಕೂಲವಾಗುತ್ತದೆ. ಮುಂದಿನ 24ಗಂಟೆವರೆಗೆ ಶೋಧ ಕಾರ್ಯಾಚರಣೆ ನಡೆಯಲಿದೆ. ಹತ್ತೊಂಬತ್ತನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಸುಮಾರು 230 ಮೀಟರ್ ಉದ್ದದ ಈ ಸೇತುವೆಯ ನವೀಕರಣಕ್ಕೆ 6ತಿಂಗಳಿನಿಂದ ನಾಗರಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. 4ದಿನಗಳ ಹಿಂದೆ ಇದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿತ್ತು.