ಬೆಳಗಾವಿ:
ಭೂಮಿ ಯೋಜನೆಯಡಿ ಅಕ್ಟೋಬರ್-2022 ನಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿರುವುದಕ್ಕೆ ಮೂಡಲಗಿ ತಹಶೀಲ್ದಾರ ದಿಲ್ಷಾದ್ ಅಲಿ ಗುಡುಸಾಬ್ ಮಹತ್ ಇವರಿಗೆ ಭೂಮಾಪನ ಇಲಾಖೆ ಪದನಿಮಿತ್ತ ನಿರ್ದೇಶಕರು ಹಾಗೂ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ 3.34 ಸಿಗ್ಮಾ ಮೌಲ್ಯವನ್ನು ಪಡೆದಿರುವುದರಿಂದ ವಿಲೇವಾರಿ ಸೂಚ್ಯಂಕವು (disposal index) 4.652 ಇರುತ್ತದೆ ಆದ್ದರಿಂದ ಮೂಡಲಗಿ ತಾಲೂಕು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಪ್ರಥಮ ಸ್ಥಾನ ಪಡೆದಿದೆ.
ತಾಲೂಕಿನ ಕಾರ್ಯ ಸಾಧನೆಗೆ ತಾಲೂಕು ಕಚೇರಿಯ ಅಧಿಕಾರಿ, ಸಿಬ್ಬಂದಿಗಳ ಸಹಕಾರ ಕಾರ್ಯತತ್ಪರತೆ ಕಾರಣವಾಗಿರುತ್ತದೆ. ಆದ್ದರಿಂದ ಭೂಮಿ ಉಸ್ತುವಾರಿ ಕೋಶದ ಪರವಾಗಿ ಅಭಿನಂದನೆ ಸಲ್ಲಿಸಿ, ನಿಮ್ಮ ಕಾರ್ಯ ವೈಖರಿ ಇದೇ ರೀತಿಯಲ್ಲಿ ನಿರಂತರವಾಗಿರಲಿ ಎಂದು ಭೂಮಾಪನ ಇಲಾಖೆಯ ಆಯುಕ್ತರಾದ ಮುನೀಶ್ ಮೌದ್ಗಿಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.