ನವದೆಹಲಿ: ನರೇಂದ್ರ ಮೋದಿ ನಂತರ ಪ್ರಧಾನಿ ಹುದ್ದೆಗೆ ಬಿಜೆಪಿಯಲ್ಲಿ ಸೂಕ್ತ ವ್ಯಕ್ತಿ ಯಾರು? ಮೋದಿ ಅವರ ಬಳಿಕ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಜೆಪಿ ಯಾರನ್ನು ಆಯ್ಕೆ ಮಾಡಬಹುದು? ಇಂಡಿಯಾ ಟುಡೆ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯ ಆಗಸ್ಟ್ ಆವೃತ್ತಿಯಲ್ಲಿ ಮೋದಿ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಯಾರು ಎಂಬ ಬಗ್ಗೆ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಮೋದಿ ನಂತರ ಯಾರು?”- ಎಂಬ ಪ್ರಶ್ನೆಯು ಸ್ವಾಭಾವಿಕವಾಗಿ ಬಿಜೆಪಿ ಬೆಂಬಲಿಗರಿಗೆ ಮುಖ್ಯವಾಗುದೆ. 10 ವರ್ಷಗಳಿಗೂ ಹೆಚ್ಚು ಕಾಲ ರಾಷ್ಟ್ರವನ್ನು ಮುನ್ನಡೆಸಿರುವ ಮೋದಿ ಮೂರನೇ ಅವಧಿ ಪೂರ್ಣವಾಗುವ ಮುನ್ನೇ ಅವರು 75 ವರ್ಷ ಪೂರ್ಣಗೊಳಿಸುವುದರಿಂದ ಬಿಜೆಪಿಯ ಅಲಿಖಿತ ನಿಯಮದಂತೆ ಅವರು ಪ್ರಧಾನಿ ಹುದ್ದೆಯಿಂದ ನಿರ್ಗಮಿಸಿದರೆ ಅವರ ನಂತರ ಯಾರು ಎಂಬ ಕುತೂಹಲ ಮೂಡುವುದು ಸಹಜ.ಒಂದು ವೇಳೆ ಅವರು ಮೂರನೇ ಅವಧಿ ಪೂರ್ಣಗೊಳಿಸಿದರೂ ಅವರ ನಂತರ ಯಾರು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಈ ಬಗ್ಗೆ ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ನಡೆಸಿದೆ.
ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ಆಗಸ್ಟ್ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ನಂತರ ಬಿಜೆಪಿಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಲು ಅಮಿತ್ ಶಾ ಸೂಕ್ತ ವ್ಯಕ್ತಿ ಎಂದು 25% ಕ್ಕಿಂತ ಹೆಚ್ಚು ಜನರು ಅವರನ್ನು ಬೆಂಬಲಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಂತರದ ಸ್ಥಾನದಲ್ಲಿದ್ದಾರೆ.
ಸಮೀಕ್ಷೆಯಲ್ಲಿ 19%ಕ್ಕಿಂತ ಹೆಚ್ಚು ಜನರ ಬೆಂಬಲ ಪಡೆದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಎರಡನೇ ಸ್ಥಾನದಲ್ಲಿ ಇದ್ದಾರೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 13% ಜನರ ಬೆಂಬಲದೊಂದಿಗೆ ಮೂರನೇ ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ಆಗಸ್ಟ್ 2024 ರ ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಸೂಚಿಸುತ್ತದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಸುಮಾರು 5% ರಷ್ಟು ಜನರ ಬೆಂಬಲ ಗಳಿಸಿದ್ದಾರೆ.
ಇಂಡಿಯಾ ಟುಡೆ ಗ್ರೂಪ್ನ ಇತ್ತೀಚಿನ ದ್ವೈ-ವಾರ್ಷಿಕ ಸಮೀಕ್ಷೆಯಲ್ಲಿ ಅಮಿತ್ ಶಾ ಮುಂಚೂಣಿಯಲ್ಲಿದ್ದರೂ, ಅವರ 25% ಅನುಮೋದನೆ ರೇಟಿಂಗ್ ಫೆಬ್ರವರಿ 2024 ಮತ್ತು ಆಗಸ್ಟ್ 2023 ರಲ್ಲಿ ಹಿಂದಿನ ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ಸಮೀಕ್ಷೆ(MOTN) ಸಮೀಕ್ಷೆಗಳಿಗಿಂತ ಕುಸಿತ ಕಂಡಿದೆ. ಕಳೆದ ಎರಡು ಸಮೀಕ್ಷೆಗಳಲ್ಲಿ, 28% ಮತ್ತು 29% ಜನರು ಪ್ರಧಾನಿ ಮೋದಿ ಉತ್ತರಾಧಿಕಾರಿಯಾಗಲುಅಮಿತ್ ಶಾ ಅವರನ್ನು ಆಯ್ಕೆ ಮಾಡಿದ್ದರು.
ಸಮೀಕ್ಷೆಯ ಆಗಸ್ಟ್ 2024 ರ ಆವೃತ್ತಿಯಲ್ಲಿ ದಕ್ಷಿಣ ಭಾರತದಿಂದ ಪ್ರತಿಕ್ರಿಯಿಸಿದವರಲ್ಲಿ 31% ಕ್ಕಿಂತ ಹೆಚ್ಚು ಜನರು ಪ್ರಧಾನಿ ಮೋದಿಯವರ ನಂತರ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಅಮಿತ್ ಶಾ ಅತ್ಯುತ್ತಮ ಅಭ್ಯರ್ಥಿ ಎಂದು ಭಾವಿಸಿರುವುದು ಕಂಡುಬಂದಿದೆ.
ರಾಷ್ಟ್ರವ್ಯಾಪಿ 25% ಬೆಂಬಲದೊಂದಿಗೆ ಹೋಲಿಸಿದರೆ, ದಕ್ಷಿಣ ಭಾರತದಲ್ಲಿ ಅಮಿತ್ ಶಾ ಅವರ 31% ಅನುಮೋದನೆ ರೇಟಿಂಗ್ ಪಡೆದಿದ್ದು, ಇದು ಉಳಿದ ಭಾಗಗಳಿಗಿಂತ ಅತ್ಯಧಿಕವಾಗಿದೆ.
ಅಮಿತ್ ಶಾ ಅವರಂತೆಯೇ, ಪ್ರಧಾನಿ ಮೋದಿ ಉತ್ತರಾಧಿಕಾರಿಯಾಗಲು ಯೋಗಿ ಆದಿತ್ಯನಾಥ ಅವರನ್ನು ಬೆಂಬಲಿಸುವ ಶೇಕಡಾವಾರು ಸಹ ಇಳಿಮುಖವಾಗಿದೆ. ಯೋಗಿ ಆದಿತ್ಯನಾಥ ಅವರ ಬೆಂಬಲವು ಆಗಸ್ಟ್ 2023 ರಲ್ಲಿ 25% ರಿಂದ ಫೆಬ್ರವರಿ 2024 ರಲ್ಲಿ 24% ಕ್ಕೆ ಇಳಿದಿತ್ತು. ಈ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಕೇವಲ 19% ರಷ್ಟು ಜನರು ಪ್ರಧಾನಿ ಮೋದಿ ನಂತರ ಪ್ರಧಾನಿ ಅಭ್ಯರ್ಥಿಗೆ ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ. ಸುಮಾರು 13% ಪ್ರತಿಕ್ರಿಯಿಸಿದವರು ನಿತಿನ್ ಗಡ್ಕರಿ ಅವರನ್ನು ಸಂಭಾವ್ಯ ಆಯ್ಕೆಯಾಗಿ ಆಯ್ಕೆ ಮಾಡಿದ್ದಾರೆ.
ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ ಅವರ ರೇಟಿಂಗ್ಗಳ ಕುಸಿತ, ಲಾಭ ಗಳಿಸಿದವರು ಯಾರು?
ಆಗಸ್ಟ್ 2024 ರ ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ರಾಜನಾಥ ಸಿಂಗ್ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಸಂಭಾವ್ಯ ಉತ್ತರಾಧಿಕಾರಿಗಳಾಗಿ ನಂತರದ ಜನಪ್ರಿಯತೆಯನ್ನು ಗಳಿಸಿದ್ದಾರೆ ಎಂದು ಸೂಚಿಸುತ್ತದೆ.
ಆಗಸ್ಟ್ 2024ರ ಸಮೀಕ್ಷೆಯಲ್ಲಿ ರಾಜನಾಥ್ ಸಿಂಗ್ ಸುಮಾರು 1.2 ಶೇಕಡಾವಾರುಹೆಚ್ಚು ಬೆಂಬಲ ಪಡೆದರೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ ಗಮನಾರ್ಹ ಜಿಗಿತವನ್ನು ಕಂಡಿದ್ದಾರೆ, ಚೌಹಾಣ ಅವರು ಆಗಸ್ಟ್ 2023 ರಲ್ಲಿ 2.9% ರಷ್ಟು ಇದ್ದಿದ್ದು ಇತ್ತೀಚಿನ ಸಮೀಕ್ಷೆಯಲ್ಲಿ 5.4% ಕ್ಕೆ ಏರಿದೆ.
ಪ್ರಧಾನಿ ಮೋದಿಯವರ ಆದ್ಯತೆಯ ಉತ್ತರಾಧಿಕಾರಿಯಾಗಿ ಚೌಹಾಣ ಅವರ ಜನಪ್ರಿಯತೆಯ ಏರಿಕೆಯು ನವದೆಹಲಿಯಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾಗಿ ನೇಮಕಗೊಂಡಿರುವುದಕ್ಕೆ ಹೊಂದಿಕೆಯಾಗುತ್ತದೆ. ಜೂನ್ 2024 ರಲ್ಲಿ ಮೋದಿ 3.0 ಕ್ಯಾಬಿನೆಟ್ಗೆ ಅವರು ಸೇರಿದ ನಂತರ, ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಅವರ ಜನಪ್ರಿಯತೆಯೂ ಏರಿಕೆ ಕಂಡಿದೆ.
ಹಿಂದಿನ ಎರಡು ಸಮೀಕ್ಷೆಗಳಲ್ಲಿ, ಫೆಬ್ರವರಿ 2024 ರಲ್ಲಿ 2% ಮತ್ತು ಆಗಸ್ಟ್ 2023 ರಲ್ಲಿ 2.9%ರಷ್ಟು ಜನರ ಬೆಂಬಲ ಮಾತ್ರ ಪಡೆದಿದ್ದರು. ಇತ್ತೀಚಿನ ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ಶಿವರಾಜ್ ಸಿಂಗ್ ಚೌಹಾಣ್ ಅವರು ಒಂದು ವರ್ಷದ ಅವಧಿಯಲ್ಲಿ ಎಷ್ಟು ವೇಗವಾಗಿ ಏರಿದ್ದಾರೆ ಎಂಬುದನ್ನು ತೋರಿಸಿದೆ.