ಬೆಳಗಾವಿ:
ಗ್ರಾಮಾಂತರ ಪ್ರದೇಶದಲ್ಲಿ ಕುಶಲಕರ್ಮಿಗಳಾದ ಮಾಲೆ ಮಾಡುವ ಹೂಗಾರರು, ರೆಂಟೆ ಕುಂಟೆ ನೇಗಿಲು ಮಾಡುವ ಕುಂಬಾರರು, ಕುಡಗೋಲು, ಕುರುಪಿ, ಕಸಬರಿಗೆ, ಚಾಪೆ ತಯಾರಿಸುವ ಜನರಿಗೆ ಪ್ರತಿಯೊಬ್ಬರಿಗೂ ರೂ-1 ಲಕ್ಷ ಸಾಲ ನೀಡುವ ಮೂಲಕ ಸಮಾಜದ ಕಟ್ಟ ಕಡೆ ವ್ಯಕ್ತಿಯೂ ಆರ್ಥಿಕವಾಗಿ ಉನ್ನತಿ ಹೊಂದಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿರುವುದು ಸಂತಸದ ಸಂಗತಿ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರ ಜ-13 ರಂದು ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತುಲುಪಿಸುವುದು ಈ ಯಾತ್ರೆಯ ಉದ್ದೇಶವಾಗಿದೆ ಎಂದರು.
ಮಹಿಳೆಯರಿಗೆ ಮಾತೃವಂದನಾ ಸೇರಿದಂತೆ ಅನೇಕ ಯೊಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ತಾವುಗಳು ಉಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದ ಸಂಸದರು,ರೈತರಿಗೆ,ಜನಸಾಮಾನ್ಯರಿಗೆ,ರೈತ ಮಹಿಳೆಯರಿಗೆ,ಕುಶಲ ಕರ್ಮಿಗಳು ಸೇರಿದಂತೆ ನೂರಾರ ಜನರಿಗೆ ನೂರಾರು ಯೋಜನೆಗಳು ಜಾರಿಗೆ ತಂದಿದ್ದಾರೆ. ಅವುಗಳ ಉಪಯೋಗ ಪಡೆದು ಆರ್ಥಿಕವಾಗಿ ಸದೃಢವಾಗಬೇಕು ಎಂಬುವುದೇ ಪ್ರಧಾನಿ ಮೋದಿ ಅವರ ಗುರಿ ಎಂದರಲ್ಲದೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಯ ಸವಲತ್ತು ತಲುಪಬೇಕು ಎಂಬ ದೃಷ್ಟಿಕೋನದ ಪಕ್ಷದ ಧ್ಯೇಯವನ್ನು ಪ್ರಧಾನಿಯವರು ಈಡೇರಿಸಿದ್ದಾರೆ. ಈ ಯೋಜನೆಗಳ ಬಗ್ಗೆ ನಿಮ್ಮ ಮೊಬೈಲ್ ನಲ್ಲಿ ಮಾಹಿತಿ ತಿಳಿದುಕೊಳ್ಳಬಹುದು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ,ರಾಜೇಂದ್ರ ಗೌಡಪ್ಪಗೋಳ,ವೀರನಗೌಡ ಈಶ್ವರಪ್ಪಗೋಳ,ಚನಗೌಡ ಪಾಟೀಲ,ಬಸನಗೌಡ ನಿರ್ವಾಣಿ,ಪ್ರಕಾಶ ಕರಲಿಂಗನ್ನವರ,ಎಂ.ಎನ್.ಮಾವಿನಕಟ್ಟಿ,ಶಿವಾನಂದ ಕರಲಿಂಗನ್ನವರ,ಪಿಡಿಒ ಬಸವರಾಜ ಮನಗೂಳಿ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು,ಬಿಜೆಪಿ ಪ್ರಮುಖ ಕಾರ್ಯಕರ್ತರು,ಅಂಗನವಾಡಿ,ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.