ದೆಹಲಿ : ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೇರುವ ಬಗ್ಗೆ ಇದೀಗ ಹೊರಬಿದ್ದಿರುವ ಎಲ್ಲಾ ಸಮೀಕ್ಷೆಗಳು ಭವಿಷ್ಯ ನುಡಿದಿದ್ದು ಬಿಜೆಪಿ ಪಾಳಯದಲ್ಲಿ ಹೊಸ ಉತ್ಸಾಹ ಕಂಡುಬಂದಿದೆ. ಇಂಡಿಯಾ ಒಕ್ಕೂಟ ಈ ಬಾರಿಯೂ ಸೋಲು ಕಾಣಲಿದೆ. ದೇಶದಲ್ಲಿ ಇದೀಗ ಅಂತಿಮ ಸುತ್ತಿನ ಮತದಾನ ಮುಗಿಯುತ್ತಿದ್ದಂತೆ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದೆ.
ಲೋಕಸಭೆಗೆ ನಡೆದ ಏಳನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಮತಗಟ್ಟೆ ಸಮೀಕ್ಷೆ ಹೊರಬೀಳಲಿದೆ. ಅಧಿಕಾರ ಯಾರಿಗೆ ಸಿಗಲಿದೆ ಎಂಬುದು ಕುತೂಹಲವೆನಿಸಿದೆ. ಇದು ಎಷ್ಟು ನಿಜವಾಗಲಿದೆ ಎಂಬುದನ್ನು ತಿಳಿಯಬೇಕಾದರೆ ಜೂನ್ 4ರವರೆಗೆ ಕಾಯಬೇಕಿದೆ.
ನ್ಯೂಸ್ ಡಿ ಡೈನಾಮಿಕ್ಸ್ ಮತಗಟ್ಟೆ ಸಮೀಕ್ಷೆ ಪ್ರಕಾರ ಬಿಜೆಪಿ 371 ಸ್ಥಾನಗಳಲ್ಲಿ ಗೆಲುವು ಗಳಿಸಿದ್ದು, ಮತ್ತೆ ಅಧಿಕಾರಕ್ಕೆ ಬರಲಿದೆ. ಇಂಡಿಯಾ ಮೈತ್ರಿಕೂಟ ಕೇವಲ 125 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ವರದಿ ಹೇಳಿದೆ.
ಇಂಡಿಯಾಟುಡೇ-ಆ್ಯಕ್ಸಿಸ್ ಪ್ರಕಾರ ಇಂಡಿಯಾ ಮೈತ್ರಿಕೂಟ ತಮಿಳುನಾಡಿನಲ್ಲಿ 33ರಿಂದ 37 ಮತ್ತು ಎನ್ಡಿಎ 2ರಿಂದ 4 ಸ್ಥಾನಗಳಲ್ಲಿ ಗೆಲ್ಲಲಿದೆ.
ರಿಪಬ್ಲಿಕ್ ಭಾರತ್-ಪಿ ಮಾರ್ಕ್
ಎನ್ ಡಿಎ: 359
ಇಂಡಿಯಾ : 154
ಇಂಡಿಯಾ ನ್ಯೂಸ್
ಬಿಜೆಪಿ-ಎನ್ ಡಿಎ: 371
ಇಂಡಿಯಾ: 125
ಜನ್ ಕೀ ಬಾತ್ ಮತಗಟ್ಟೆ ಸಮೀಕ್ಷೆ ಪ್ರಕಾರ ಬಿಜೆಪಿ 362ರಿಂದ 392 ಮತ್ತು ‘ಇಂಡಿಯಾ’ ಮೈತ್ರಿಕೂಟ 141ರಿಂದ 161 ಸ್ಥಾನಗಳನ್ನು ಗಳಿಸಲಿದೆ.
ಲೋಕ್ ಪೋಲ್
ಬಿಜೆಪಿ, ಎನ್ ಡಿಎ -325-335
ಇಂಡಿಯಾ: 155-165
ಮಾಝ್
ಎನ್ ಡಿಎ: 352-368
ಇಂಡಿಯಾ: 118-133
ಲೋಕಪೋಲ್ (ಕರ್ನಾಟಕ)
ಬಿಜೆಪಿ : 21-24
ಜೆಡಿಎಸ್: 1-2
ಕಾಂಗ್ರೆಸ್: 3-7
ಸಿಎನ್ಎನ್
ಬಿಜೆಪಿ: 23-26
ಜೆಡಿಎಸ್: 00
ಕಾಂಗ್ರೆಸ್: 3-7
ಲೋಕ ಸಭಾ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ಫಲಿತಾಂಶ ಬಿಜೆಪಿಗೆ 2019ರ ಚುನಾವಣೆಯಷ್ಟು ಪೂರಕವಾಗಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿವೆ. ಈ ಬಾರಿ ಕರ್ನಾಟಕದಲ್ಲಿ 18 ಸೀಟುಗಳು ಬಿಜೆಪಿಗೆ ದೊರೆಯಲಿದ್ದು, 8 ಸ್ಥಾನಗಳು ಕಾಂಗ್ರೆಸ್ಗೆ ದೊರೆಯಲಿವೆ ಎಂದು ಪೋಲ್ ಸ್ಟಾಟ್ ಹೇಳಿದೆ. ಜೆಡಿಎಸ್ ರೀತಿ ಸ್ಪರ್ಧಿಸಿರುವ ಒಟ್ಟು 3ರಲ್ಲಿ ಎರಡು ಸ್ಥಾನಗಳನ್ನು ಜೆಡಿಎಸ್ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ. ದೇಶಾದ್ಯಂತ ಬಿಜಪಿಗೆ ಹಿಂದಿಗಿಂತ ಹೆಚ್ಚು ಸೀಟುಗಳು ಸಿಗಲಿವೆ ಎಂಬ ಟ್ರೆಂಡ್ ಇರುವ ಹೊರತಾಗಿಯೂ ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿಗೆ ಬಿಜೆಪಿಗೆ ಹಿನ್ನಡೆಯಾಗಿದೆ. 2019ರಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿದ್ದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದು ಸ್ಥಾನವನ್ನು ಹಂಚಿಕೊಂಡಿತ್ತು. ಪಕ್ಷೇತರರಾದ ಸುಮಲತಾ ಅವರು ಮಂಡ್ಯ ಕ್ಷೇತ್ರದಲ್ಲಿ ಗೆದ್ದಿದ್ದರು.
ವಿಸ್ತಾರ ನ್ಯೂಸ್- COPS ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿಗೆ 18ರಿಂದ-22 ಸ್ಥಾನಗಳು ದೊರಕಿದೆ, ಕಾಂಗ್ರೆಸ್ಗೆ 08ರಿಂದ 10 ಸ್ಥಾನಗಳು ಲಭಿಸಲಿವೆ. ಜೆಡಿಎಸ್ಗೆ 2ರಿಂದ 3 ಸ್ಥಾನ ಸಿಗುವುದು ಎಂದು ಹೇಳಲಾಗಿದೆ. ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 20ರಿಂದ 22, ಕಾಂಗ್ರೆಸ್ 3ರಿಂದ 5 ಮತ್ತು ಜೆಡಿಎಸ್ 3 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ . ಇಂಡಿಯಾ ಟುಡೆ ಪ್ರಕಾರ ಕರ್ನಾಟದಲ್ಲಿ ಬಿಜೆಪಿಗೆ 23ರಿಂದ 25 ಹಾಗೂ ಕಾಂಗ್ರೆಸ್ಗೆ 04ರಿಂದ 05 ಹಾಗೂ ಜೆಡಿಎಸ್ಗೆ 1ರಿಂದ 3ಸ್ಥಾನ ಸಿಗಲಿದೆ ಎಂದು ಅಂದಾಜಿಸಿದೆ.
ಜನ್ಕಿ ಬಾತ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 17ರಿಂದ 23 ಹಾಗೂ ಕಾಂಗ್ರೆಸ್ಗೆ 4ರಿಂದ 8 ಹಾಗೂ ಜೆಡಿಎಸ್ಗೆ 1ರಿಂದ 2 ಸ್ಥಾನ ಸಿಗಬಹುದು ಅಂದಾಜಿಸಿದೆ. ಜಿ ನ್ಯೂಸ್ ಪ್ರಕಾರ ಬಿಜೆಪಿಗೆ 18ರಿಂದ22, ಕಾಂಗ್ರೆಸ್ಗೆ 4ರಿಂದ 5 ಹಾಗೂ ಜೆಡಿಎಸ್ 01ರಿಂದ 3 ಸೀಟುಗಳು ಸಿಗಲಿವೆ.