ದೆಹಲಿ :
ಸತತ 9 ವರ್ಷಗಳ ಆಡಳಿತದ ಬಳಿಕವೂ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಹೆಚ್ಚುತ್ತಲೇ ಇದೆ. ಇದೀಗ ವಿಶ್ವದಲ್ಲೇ ಮೋದಿ ನಂ.1 ನಾಯಕ ಎನ್ನುವ ಸಮೀಕ್ಷೆ ಹೊರ ಬಿದ್ದಿದೆ
ಅಮೆರಿಕ, ಫ್ರಾನ್ಸ್ ಸೇರಿದಂತೆ 22 ಜಾಗತಿಕ ರಾಷ್ಟ್ರಗಳ ನಾಯಕರನ್ನು ಹಿಂದಿಕ್ಕಿ ಪ್ರಧಾನಿ ಮೋದಿ ನಂ.1 ಪಟ್ಟ ಪಡೆದುಕೊಂಡಿದ್ದಾರೆ.
ಗ್ಲೋಬಲ್ ಬಿಸಿನೆಸ್ ಇಂಟೆಲಿಜೆನ್ಸ್ ಕಂಪನಿ ಮಾರ್ನಿಂಗ್ ಕನ್ಸಲ್ಟ್, ಜಾಗತಿಕ ಪ್ರಭಾವಿ ನಾಯಕರ ಕುರಿತು ಸರ್ವೆ ನಡೆಸಿದೆ. ಜ.26ರಿಂದ ಜ.31ರ ವರೆಗೆ 20 ಸಾವಿರ ಜಾಗತಿಕ ಸಂದರ್ಶನ ಸಂಸ್ಥೆ ನಡೆಸಿದ್ದು, ಜನಾಭಿಪ್ರಾಯ ಸಂಗ್ರಹಿಸಿ, ಅದರ ಆಧಾರದ ಮೇಲೆ ಸರ್ವೆ ವರದಿ ಬಿಡುಗಡೆಗೊಳಿಸಿದೆ. ಶೇ.78 ರೇಟಿಂಗ್‌ನೊಂದಿಗೆ ಮೋದಿ ಅವರು ನಂ.1 ನಾಯಕ ಎಂಬ ಖ್ಯಾತಿ ಗಳಿಸಿದರೆ, ಮೆಕ್ಸಿಕೋ ಅಧ್ಯಕ್ಷ ಲೋಪೆಜ್ 2ನೇ ಸ್ಥಾನ ಪಡೆದಿದ್ದಾರೆ.
ಅಗ್ರ 10ರಲ್ಲಿ ಬೈಡನ್, ರಿಷಿ
ಜಾಗತಿಕ ನಾಯಕರ ಪಟ್ಟಿಯಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಈ ಬಾರಿ ಅಗ್ರ 5ರ ಸ್ಥಾನದಿಂದ ಕೆಳಗಿಳಿದು, ಶೇ.40 ಮಂದಿಯ ಸಮ್ಮತಿಯೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ಭಾರತೀಯ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೂ 10ನೇ ಸ್ಥಾನ ದೊರೆತಿದ್ದು, ಶೇ.30 ಮಂದಿ ಸುನಕ್ ಅವರನ್ನು ಆಯ್ಕೆ ಮಾಡಿದ್ದಾರೆ.