ಬೆಳಗಾವಿ :
ಸಿಇಐಆರ್ ಸೌಲಭ್ಯವನ್ನು ಉಪಯೋಗಿಸಿಕೊಂಡು ಬೆಳಗಾವಿ ನಗರದಲ್ಲಿ ಕಳುವು / ಕಾಣೆಯಾದ / Mobile Snatching ಮೊಬೈಲ್‌ಗಳನ್ನು ಸಿಇಐಆರ್ ಸೌಲಭ್ಯದ ಮುಖಾಂತರ ಪತ್ತೆ ಹಚ್ಚಲಾಗುತ್ತಿದ್ದು , ಇಲ್ಲಿಯವರೆಗೆ 18 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದು ಸಾರ್ವಜನಿಕರಿಗೆ ಹಸ್ತಾಂತರಿಸಲಾಗಿರುತ್ತದೆ . ಸಾರ್ವಜನಿಕರಲ್ಲಿ ಕೋರುವುದೇನೆಂದರೆ ಇನ್ನು ಮುಂದೆ ಮೊಬೈಲ್ ಕಳುವು / ಕಾಣೆಯಾದ / Mobile Snatching ಆದ ಕೂಡಲೇ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗಳಿಗೆ ಅಥವಾ ಕೆಎಸ್‌ಪಿ ( e – lost ) ಅಪ್ಲಿಕೇಷನ್ ಮುಖಾಂತರ ಪೋರ್ಟಲ್‌ನಲ್ಲಿ ಪ್ರಕರಣ ದಾಖಲಿಸುವುದು . ಸಿಇಐಆರ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ಸಾರ್ವಜನಿಕರಲ್ಲಿ ಕೋರಲಾಗಿದೆ . ಸದರಿ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಪಿಐ ಸಿಇಎನ್ ಪೊಲೀಸ್ ಠಾಣೆ ಜಾನ್ಸನ್ ಡಿಸೋಜಾ ಮತ್ತು ಅವರ ಸಿಬ್ಬಂಧಿಗಳ ಕಾರ್ಯವನ್ನು ಪೊಲೀಸ್ ಆಯುಕ್ತರು ಮತ್ತು ಉಪ ಪೊಲೀಸ್ ಆಯುಕ್ತರು ಶ್ಲಾಘಿಸಿರುತ್ತಾರೆ .