ಬೆಳಗಾವಿ: ಈ ಭಾಗದ ಪ್ರಭಾವಿ ನಾಯಕ ,ಜನಪರ ಕಾಳಜಿ ಇರುವ ಹೆಮ್ಮೆಯ ಶಾಸಕರಾದ ಸತೀಶ ಜಾರಕಿಹೊಳಿ ಅವರಿಗೆ ರಾಜ್ಯದ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಸತೀಶ ಅಭಿಮಾನಿ ಬಳಗ ಹಾಗೂ ವಿವಿಧ ಸಮುದಾಯಗಳಿಂದ ಕಾಂಗ್ರೆಸ್ ಹೈಕಮಾಂಡ ಒತ್ತಾಯಿಸಿದರು.
ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ವಿವಿಧ ಸಮಾಜದ ಮುಖಂಡರು ಪ್ರತಿಭಟನೆ ಮೂಲಕ ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಾಯಿಸಿದರು. ಸಮುದಾಯ ಆಧಾರ ಮೇಲೆ ದಲಿತ ನಾಯಕರಾದ ಸತೀಶ ಜಾರಕಿಹೊಳಿ ಅವರಿಗೆ ಪ್ರತಿಷ್ಠಿತ ಹುದ್ದೆ ನೀಡುವಂತೆ ಮನವಿ ಮಾಡಿಕೊಂಡರು.
ಬೆಳಗಾವಿ, ಬಾಗಲಕೋಟ, ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಸತೀಶ ಜಾರಕಿಹೊಳಿ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿ, ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಸತೀಶ ಜಾರಕಿಹೊಳಿ ಅವರಿಗೆ ರಾಜ್ಯದ ಉಪಮುಖ್ಯಮಂತ್ರಿ ಹುದ್ದೆ ನೀಡಿ, ಪಕ್ಷದ ಗೌರವ ಹೆಚ್ಚಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸುರೇಶ ಗೌವನ್ನವರ ದಲಿತರಿಗೆ ಮುಖ್ಯಮಂತ್ರಿ ಹುದ್ದೆ ಕೈತಪ್ಪಿರುವುದರಿಂದ ಈಗ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿರುವ ಸತೀಶ ಜಾರಕಿಹೊಳಿ ಅವರನ್ನೇ ಈ ಹುದ್ದೆಗೆ ನೇಮಕ ಮಾಡಬೇಕು. ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಈ ಕುರಿತು ನಿರ್ಧಾರ ಪ್ರಕಟಿಸಬೇಕು’ ಎಂದು ಆಗ್ರಹಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಕಾಂಗ್ರೆಸ್ ಗೆಲ್ಲುವು ಕಂಡಿದೆ, ಅದಕ್ಕೆ ಕಾರಣ ಸತೀಶ ಜಾರಕಿಹೊಳಿ ಅವರು, ಪಕ್ಷಕ್ಕೆ ದೊಡ್ಡ ಶಕ್ತಿ ಕೊಟ್ಟಿರುವ ಅವರಿಗೆ ಉನ್ನತ ಹುದ್ದೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮೆಥೋಡಿಸ್ಟ್ ಚರ್ಚ್ ಪಾದ್ರಿ ಶಾಂತಪ್ಪಾ ಅಂಕಲಗಿ, ಸುರೇಶ ಗೌವನ್ನವರ, ಬಸವರಾಜ ಡುಮ್ಮನಾಯಕ, ಮುಸ್ತಾಕ ಜಮಾದಾರ, ಲಗಮಣ್ಣ ಮಾಳಂಜಿ, ಆನಂದ ಸಿರೋರ,ಎಸ್ ಡಿ ಮಲ್ಲನ್ನವರ, ಪ್ರಭಾಕರ ಹುಲಿಕವಿ ಹಾಗೂ ಇತರರು ಇದ್ದರು.