ಬೆಳಗಾವಿ :
ಕ್ರಿಯಾ ಯೋಜನೆಯಲ್ಲಿರುವ ಕೆಲಸಗಳು ತರಾತುರಿಯಲ್ಲಿ ನಡೆಯಬೇಕು ಎಂದು ಪಿಡಿಓಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ತಾಕೀತು ಮಾಡಿದರು.
ಬೆಳಗಾವಿ ತಾಪಂನಲ್ಲಿ ಮಂಗಳವಾರ ಆಯೋಜಿಸಲಾದ ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯ 14 ಗ್ರಾಮಗಳ ಅಭಿವೃದ್ಧಿ, ಪ್ರವಾಹದಿಂದ ಹಾನಿ ಹಾಗೂ ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳು ಮತ್ತು ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಸಣ್ಣ- ಪುಟ್ಟ ಕೆಲಸಗಳಿಗೆ ಐದಾರೂ ತಿಂಗಳು ವಿಳಂಬವಾಗುವ ಆರೋಪ ಕೇಳಿಬರುತ್ತಿದೆ. ಕ್ರಿಯಾ ಯೋಜನೆಯಲ್ಲಿರುವ ವಿವಿಧ ಕೆಲಸಗಳು ವಿಳಂಬ ಯಾಕೆ.? ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸದೇ ಶೀಘ್ರವೇ ಸ್ಪಂಧಿಸಬೇಕು ಎಂದು ಹೇಳಿದ ಅವರು, ಈ ವೇಳೆಯಲ್ಲಿ ಕೆಲವೊಂದು ಸಮಸ್ಯೆಹೊತ್ತ ಬಂದ ಗ್ರಾಮ ಸದಸ್ಯರಿಗೆ ತಕ್ಷಣವೇ ಸ್ಪಂಧಿಸುವ ಮೂಲಕ, ವಿಳಂಬವಾದ ಪರಿಹಾರಕ್ಕೆ ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಎರಡು ವರ್ಷದಿಂದ ಕ್ರಿಯಾ ಯೋಜನೆ ಆಗಿಲ್ಲ: ಕಳೆದೆರಡು ವರ್ಷಗಳಿಂದ ಜಿಪಿಆರ್ ಎಸ್ ಕ್ರಿಯಾ ಯೋಜನೆ ಆಗಿಲ್ಲ ಉದ್ದೇಶ ಪೂರ್ವಕವಾಗಿ ಕಾಮಗಾರಿಯನ್ನು ವಿಳಂಬ ಮಾಡಲಾಗುತ್ತಿದೆ. ಮತ್ತು ಕಾಂಗ್ರೆಸ್ ಬೆಂಬಲಿತರ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಗ್ರಾಪಂ ಸದಸ್ಯರು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬೆಳಗಾವಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ದಾನವಾಡಕರ್ ಅವರು, ಯಾವುದೇ ಸಮಸ್ಯೆಯಾದರೂ ಶೀಘ್ರವೇ ಪಿಡಿಓ ಅಧಧಿಕಾರಿಗಳು ಸ್ಪಂಧಿಸಬೇಕು. ವಿಳಂಬ ಮಾಡಬೇಡಿ ಎಂದು ಇಓ ಅವರು ಸೂಚನೆ ನೀಡಿದರು.
ಮನೆ-ಮಂಜೂರಾತಿಗೆ ಕಮಿಷನ್ : ದುಡ್ಡ ಕೊಟ್ಟರೆ ಮಾತ್ರ ಪಿಡಿಓ ಗಳಿಂದ ಕೆಲಸ, ಅಂದಾಜು 20 ಸಾವಿರ ರೂ. ಕಮಿಷನ್ ಕೇಳುತ್ತಾರೆ. ಮನೆ-ಮಂಜೂರಾತಿಗಾಗಿ ನಾಲ್ಕು ಬಾರೀ ಅರ್ಜಿ ಹಾಕಿದರೂ ಆಗದ ಕೆಲಸಗಳು.. 20-30 ಸಾವಿರ ರೂ. ಕಮಿಷನ್ ನೀಡಿದರೆ ತಕ್ಷಣವೇ ಮನೆ-ಮಂಜೂರು ಆಗುತ್ತಿವೆ ಎಂದು ಅಸಮಾದಾನ ಹೊರಹಾಕಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಓ ಅಧಿಕಾರಿಗಳು, ಗ್ರಾಮ ಮಟ್ಟದಲ್ಲಿ ಇಂತಹ ಆರೋಪಿಗಳು ಮತ್ತೆ ಕೇಳಿ ಬಂದರೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ವಿಚಾರಿಸಲಾಗುವುದು ಎಂದರು.
ಮಳೆಅಂವಾತರದಿಂದ ಸಾರ್ವಜನಿಕರ ಕೋಟ್ಯಂತರ ರೂ. ಮೌಲ್ಯದ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿದೆ. ಅದರಲ್ಲೂ ನೆರೆ ಸಂತ್ರಸ್ತರ ಹಾನಿಯಾದ ಮನೆಗಳ ಸಮೀಕ್ಷೆ ಸಮರ್ಪಕವಾಗಿಲ್ಲ. ಈ ಸಮೀಕ್ಷೆಯಲ್ಲಿ ಕೆಲ ಅನರ್ಹರೂ ಸೇರ್ಪಡೆಯಾಗಿದ್ದು ಬಹುತೇಕ ಅರ್ಹರು ಈ ಪಟ್ಟಿಯಿಂದ ಹೊರ ಉಳಿದಿದ್ದಾರೆ. ಹೀಗಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಮರು ಸಮೀಕ್ಷೆ ನಡೆಸಬೇಕು. ಈ ಮೂಲಕ ನೆರೆ ಸಂತ್ರಸ್ತರ ಪರಿಹಾರ ಕಾರ್ಯ ಚುರುಕುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಗಾಮ ಸದಸ್ಯರು ಮನವಿ ಮಾಡಿಕೊಂಡರು.