ಬೆಳಗಾವಿ ಜಿಲ್ಲೆಯ ಶಾಸಕರಲ್ಲಿ ಲಕ್ಷ್ಮೀ ಹೆಬ್ಬಾಳಕರ ಅತ್ಯಂತ ಕ್ರಿಯಾಶೀಲ ಹಾಗೂ ಕೆಲಸಗಾರ್ತಿ ಜನಪ್ರತಿನಿಧಿ ಎಂದೇ ಜನಜನಿತರಾಗಿದ್ದಾರೆ. ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಅವರು ಪತ್ರಕರ್ತರ ಕಾಲೋನಿಯ ಮೂಲಭೂತ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಂಡು ಅವುಗಳಿಗೆ ಮುಕ್ತಿ ಹಾಡಬೇಕು ಎನ್ನುವುದು ಹಿರಿಯ ಪ್ರಜ್ಞಾವಂತ ನಾಗರಿಕರ ಹಕ್ಕೊತ್ತಾಯವಾಗಿದೆ.
ಬೆಳಗಾವಿ :
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಮಹಾಬಳೇಶ್ವರ ಕಾಲನಿಗೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸಿದರು. ಶಾಸಕಿಯ ಈ ಕಾರ್ಯಕ್ಕೆ ನಾಗರಿಕರು ವಿಶೇಷವಾಗಿ ಮಹಿಳೆಯರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದರು. ಆದರೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಕರ್ತರೇ ಹೆಚ್ಚಾಗಿ ವಾಸಿಸುವ ಪತ್ರಕರ್ತರ ಕಾಲನಿಯ ಸಮಸ್ಯೆಯನ್ನು ಯಾವಾಗ ಬಗೆಹರಿಸುತ್ತಾರೋ ಎನ್ನುವುದು ಕಾದು ನೋಡಬೇಕಿದೆ.
ಪತ್ರಕರ್ತರ ಕಾಲೋನಿಯ ಸಮಸ್ಯೆ ಬಗ್ಗೆ
ಮನವಿ ಅರ್ಪಿಸಿ 3 ಆಯಕ್ತರು ಬಂದು ಹೋದರೂ ಇಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಸ್ವಚ್ಛತೆ ನಿರ್ವಹಣೆ ಅಂತೂ ಕನಸಿನ ಮಾತು. ಒದಗಿ ಬಾರದ ಗಟಾರು ರಿಪೇರಿ ಭಾಗ್ಯ…ಹೀಗೆ ಸಮಸ್ಯೆಗಳ ಅನಾವರಣ ಇಲ್ಲಿದೆ .
ಉದ್ಯಾನವನಕ್ಕೆ ಕಂಪೌಂಡಿಲ್ಲ. ಗಟಾರುಗಳಿಗೆ ಹಬ್ಬಿಕೊಂಡಿರುವ ಮರದ ಬೇರುಗಳಿಂದ ಇದೀಗ ಸಂಪೂರ್ಣ ಜರ್ಜರಿತಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಶಾಸಕರು ಉದ್ಯಾನವನಕ್ಕೆ ಕಂಪೌಂಡ್ ಗೋಡೆ ನಿರ್ಮಿಸಿ ಸಮಸ್ಯೆಗೆ ಮುಕ್ತಿ ಹಾಡಬೇಕು. ಆ ಮೂಲಕ ಸದಾ ಜರಿದು ಹೋಗುತ್ತಿರುವ ಕಂಪೌಂಡ್ ಗೋಡೆಗೆ ಶಾಶ್ವತ ಪರಿಹಾರ ಒದಗಿಸಿಕೊಡಬೇಕು. ಉದ್ಯಾನವನ ಪರಿಕರ ತುಕ್ಕು ಹಿಡಿದಿದ್ದು ಮಕ್ಕಳು ಆಡದ ಸ್ಥಿತಿ ತಲುಪಿವೆ. ಉದ್ಯಾನವನಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. ಎನ್ನುವುದು ಇಲ್ಲಿಯ ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.
ಮಹಾಬಳೇಶ್ವರ ಕಾಲನಿ ಜನರ ಸಂತಸ :
ಮಹಾಬಳೇಶ್ವರ ಕಾಲನಿ ಜನ
ಹಲವು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದರು. ಈ ನಿಟ್ಟಿನಲ್ಲಿ ರಾಜೇಶ್ವರಿ ವೀರಗಂಟಿ ನೇತ್ರತ್ವದಲ್ಲಿ ಮಹಿಳಾ ನಿವಾಸಿಗಳು ಭೇಟಿಯಾಗಿದ್ದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸ್ವತಃ ಅಲ್ಲಿಗೆ ದೌಡಾಯಿಸಿ ನಾಗರಿಕರು ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಭೇಟಿ ಆಗಿ ಸಮಸ್ಯೆ ಬಗೆಹರಿಸುವ ಬಗ್ಗೆ ಸ್ಪಂದಿಸಿದರು. ಶಾಸಕಿಯ ಜನಪರ ಕಳಕಳಿಗೆ ಮಹಿಳೆಯರು ಸಂತಸಗೊಂಡರು.