ಕೆನ್ ಬೆರ್ರಾ : ಆಸ್ಟ್ರೇಲಿಯಾದ ಲೆಜೆಂಡರಿ ವೇಗಿ ಮಿಚೆಲ್ ಸ್ಟಾರ್ಕ್ ಮಂಗಳವಾರ (ಸೆಪ್ಟೆಂಬರ್ 2) ಟಿ20 ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ.
ಎಡಗೈ ವೇಗಿ 2012 ರಿಂದ 2024 ರವರೆಗೆ ಆಸ್ಟ್ರೇಲಿಯಾ ತಂಡದ ಪರವಾಗಿ 20 ಓವರ್ಗಳ ಸ್ವರೂಪದ ಟಿ20ಯ 65 ಪಂದ್ಯಗಳನ್ನು ಆಡಿದ್ದಾರೆ ಮತ್ತು 79 ವಿಕೆಟ್ಗಳನ್ನು ಪಡೆದಿದ್ದಾರೆ.
ಸ್ಟಾರ್ಕ್ ಜೂನ್ 24, 2024 ರಂದು ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್ನಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಪರ ಕೊನೆಯ ಟಿ20ಐ ಪಂದ್ಯವನ್ನು ಆಡಿದ್ದರು.
ಅವರು ಆಸ್ಟ್ರೇಲಿಯಾದ ವೇಗಿಗಳಲ್ಲಿ ಟಿ20ಐಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು.ಮತ್ತು ಸ್ಪಿನ್ನರ್ ಆಡಮ್ ಜಂಪಾ ಮಾತ್ರ ಇವರಿಗಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಹಂಚಿಕೊಂಡ ಪ್ರಕಟಣೆಯ ಪ್ರಕಾರ, ಸ್ಟಾರ್ಕ್ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ಹೆಚ್ಚು ಸಮಯ ನೀಡಲು ಮತ್ತು ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆಯಲ್ಲಿ ನಡೆಯಲಿರುವ 2027 ರ ಏಕದಿನ ವಿಶ್ವಕಪ್ನತ್ತ ದೃಷ್ಟಿ ಹರಿಸಲು ಟಿ20 ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ.
ವಿದೇಶದಲ್ಲಿ ಭಾರತದ ಟೆಸ್ಟ್ ಪ್ರವಾಸ, ಆಶಸ್ ಮತ್ತು 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗಾಗಿ ಎದುರು ನೋಡುತ್ತಿರುವ ನಾನು, ತಾಜಾ, ಫಿಟ್ ಮತ್ತು ಆ ಅಭಿಯಾನಗಳಿಗೆ ನನ್ನ ಅತ್ಯುತ್ತಮ ಸ್ಥಿತಿಯಲ್ಲಿರಲು ಇದು ನನ್ನ ಅತ್ಯುತ್ತಮ ಮಾರ್ಗ ಎಂದು ಭಾವಿಸುತ್ತೇನೆ ಎಂದು ಟಿ20 ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದರ ಬಗ್ಗೆ ಹೇಳಿದ್ದಾರೆ.
ಟಿ20 ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಮಿಚೆಲ್ ಸ್ಟಾರ್ಕ್
