ಬೆಳಗಾವಿ: ಬಿಜೆಪಿ ಆಡಳಿತ ಅವಧಿಯಲ್ಲಿ ಬೆಲೆ ಏರಿಕೆಗಳು ಆಗಿವೆ. ಅನಾವಶ್ಯಕವಾಗಿ ಪ್ರತಿಭಟನೆ ಅಗತ್ಯವಿಲ್ಲ ವೈಜ್ಞಾನಿಕ ಮಾರ್ಗ ಕಂಡುಕೊಳ್ಳುವ ಅಗತ್ಯವಿದೆ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಬಿಜೆಪಿಗೆ ಕುಟುಕಿದರು.
ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಮಾಧ್ಯಮಗಾರರೊಂದಿಗೆ ಮಂಗಳವಾರ ಮಾತನಾಡಿದ ಸಚಿವರು, ಬೆಲೆ ಏರಿಕೆ ವಿಷಯ ಆಯಾ ಇಲಾಖೆಗಳು ಸ್ಪಷ್ಪನೆ ನೀಡಬೇಕಿದೆ. ಬೆಲೆ ಏರಿಕೆ ಬಗ್ಗೆ ಚರ್ಚಿಸಿ ವೈಜ್ಞಾನಿಕ ಮಾರ್ಗ ಕಂಡುಕೊಳ್ಳುವ ಬದಲೂ ಪ್ರತಿಭಟನೆ ನಡೆಸುವುದು ಅನಾವಶ್ಯಕವಾಗಿ ಎಂದು ಬಿಜೆಪಿಯವರು ಅಹೋರಾತ್ರಿ ಧರಣಿಗೆ ತಿರುಗೇಟು ನೀಡಿದರು. ಯಾವುದೇ ಸಮಸ್ಯೆಯಾದರೂ ಮಾರ್ಗ ಕಂಡುಕೊಳ್ಳಬೇಕು ಅದನ್ನು ಬಿಟ್ಟು ಪ್ರತಿಭಟನೆ ಇಳಿಯುವುದು ಸರಿಯಲ್ಲ ವೈಜ್ಞಾನಿಕ ಚರ್ಚೆಯ ಮಾಡಲು ಸಮಯವಿದೆ ಎಂದು ಹೇಳಿದರು.
ದೇವೆಗೌಡರ ಭೇಟಿ ಆಕಸ್ಮಿಕ: ಜಿಲ್ಲೆಯಲ್ಲಿ ಯುವಕರಿಗೆ ಉದ್ಯೋಗ ಕಲ್ಪಿಸಬೇಕೆಂಬ ಬಹುದಿನಗಳ ಗುರಿ ಇದೆ. ಹೀಗಾಗಿ ಉತ್ತಮ ಕಾರ್ಖಾನೆ ನಿರ್ಮಾಣವಾದರೆ ಯುವಕರಿಗೂ ಅನುಕೂಲ. ಹೀಗಾಗಿ, ಕೇಂದ್ರ ಸಚಿವರನ್ನು ಭೇಟಿಯಾಗಿರಿವೆ. ಬೆಳಗಾವಿಯ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗಿದೆ ಅಷ್ಟೆ. ಹೈಕಮಾಂಡ ಮಟ್ಟದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ. ಇನ್ನು ಮಾಜಿ ಪ್ರಧಾನಿ ದೇವೆಗೌಡರ ಭೇಟಿ ಆಕಸ್ಮಿಕ ಎಂದು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ನೀರಿನ ಸಮಸ್ಯೆ ನೀಗಿಸಲು ಕ್ರಮ: ನೀರಿನ ಸಮಸ್ಯೆಯನ್ನು ನೀಗಿಸಲು ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಮೊತ್ತೊಂದು ಸಭೆ ನಡೆಸಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಇನ್ನು ಗೋಕಾಕ್ ತಹಶೀಲ್ದಾರರ ವಿರುದ್ಧ ಎಫ್.ಐ.ಆರ್ ದಾಖಲಾದ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ ಎಂದರು. ಇನ್ನು ಬೆಳಗಾವಿಯಲ್ಲಿ ಮಳೆಗಾಲದ ಮುಂಚೆ ಚರಂಡಿ ಸ್ವಚ್ಛತೆಯನ್ನು ಮಾಡಲು ಮಹಾನಗರ ಪಾಲಿಕೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಅಲ್ಲದೇ ನಗರದಲ್ಲಿ ತ್ಯಾಜ್ಯ ವಿಲೇವಾರಿ ಕುರಿತು ಕೂಡ ಗಮನಹರಿಸುವಂತೆ ಸೂಚಿಸಲಾಗುವುದು ಎಂದರು.
ಕಾಂಗ್ರೆಸ್ ನಾಯಕರನ್ನು ಯತ್ನಾಳ ಭೇಟಿಯಾಗಿರುವ ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಯತ್ನಾಳ ಅವರು ಹೊಸ ಪಕ್ಷ ಕಟ್ಟುವುದು ಸುದ್ದ ಸುಳ್ಳು… ಒಂದೇ ವರ್ಷದಲ್ಲಿ ಮರುಳಿ ಗುಡಿಗೆ ಬರುತ್ತಾರೆ. ನಮ್ಮ ಸಿದ್ದಾಂತ, ಬಿಜೆಪಿ ಸಿದ್ದಾಂತಗಳು ಬೇರೆ ಬೇರೆಯಾಗಿದೆ. ಅವರ ಸಿದ್ಧಾಂತ , ಹೋರಾಟ ಬಿಜೆಪಿಯಲ್ಲಿಯೇ ಸೂಟ್ ಆಗುತ್ತದೆ. ನಮ್ಮ ಸಿದ್ಧಾಂತಗಳು ಅವರಿಗೆ ಸೂಟ್ ಆಗಲ್ಲ. ಯತ್ನಾಳಗೆ ಬಿಜೆಪಿ ಮತ್ತು ಬಿಜೆಪಿಗೆ ಯತ್ನಾಳ ಅನಿವಾರ್ಯ ಬಹಳಷ್ಟಿದೆ ಎಂದು ಹೇಳಿದರು.