SHOCKING NEWS ಹೆರಿಗೆಗೆ ಬೆಳಗಾವಿ ಬಿಮ್ಸ್ ಗೆ ಬರಲೇಬೇಡಿ…! ಶೋಕ ತಂದ ಅಶೋಕ..!
ಬೆಳಗಾವಿ ಬಿಮ್ಸ್ ನಲ್ಲಿ ಶಿಶುಗಳ ಸಾವಿನ ಬಗ್ಗೆ ‘ಜನ ಜೀವಾಳ’ ಪ್ರಕಟಿಸಿ ಮಂತ್ರಿಗಳು ಇಲ್ಲಿನ ಅವ್ಯವಸ್ಥೆ ಪರಿಶೀಲಿಸಬೇಕು ಎಂದು ಆಗ್ರಹಿಸಿದ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಂದಿಸಿ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಸಮಗ್ರ ವರದಿಯನ್ನು ಗಮನಿಸಿದ್ದು, ಬಿಮ್ಸ್ ನಿರ್ದೇಶಕರಿಂದ ಸ್ಪಷ್ಟನೆ ಕೇಳಿದ್ದೇನೆ. ಸಧ್ಯ ನಾನು ದೆಹಲಿ ಪ್ರವಾಸದಲ್ಲಿದ್ದೇನೆ. ಪ್ರಕರಣ ಕುರಿತಂತೆ ಆರೋಗ್ಯ ಸಚಿವರೊಂದಿಗೂ ಮಾತನಾಡುತ್ತೇನೆ. ನಾನು ವರದಿಯನ್ನು ಗಮನಿಸಿ ಮತ್ತೆ ಈ ಬಗ್ಗೆ ತಿಳಿಸುವೆಯೆಂದು ಜನ ಜೀವಾಳಕ್ಕೆ ತಿಳಿಸಿದರು.