ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸೋಮವಾರ ವಿವಿಧೆಡೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಬೆಳಗ್ಗೆ 10.30ಕ್ಕೆ ಖಾನಾಪುರದಲ್ಲಿ ಮಲಪ್ರಭಾ ಸೇತುವೆ ಮತ್ತು ರುಮೇವಾಡಿ ಬ್ಯಾರೇಜ್ ವೀಕ್ಷಣೆ ಮಾಡಲಿದ್ದಾರೆ. 11.30ಕ್ಕೆ ಚಿಕ್ಕಹಟ್ಟಿಹೊಳಿ ಹತ್ತಿರ ಮಲಪ್ರಭಾ ನದಿಯ ಪ್ರವಾಹ ವೀಕ್ಷಣೆ ಮಾಡಲಿದ್ದಾರೆ. 12 ಗಂಟೆಗೆ ಕುಕಡೊಳ್ಳಿ ಗ್ರಾಮಕ್ಕೆ, 12.30ಕ್ಕೆ ಭೆಂಡಿಗೇರಿ ಗ್ರಾಮಕ್ಕೆ ಹಾಗೂ 1 ಗಂಟೆಗೆ ಹಿರೇಬಾಗೇವಾಡಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.
ಭೇಟಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಭಾನುವಾರ ಬೆಳಗಾವಿಯ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.