ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಗಣೇಶಪುರ ಗ್ರಾಮದ ಜ್ಯೋತಿ ನಗರದಲ್ಲಿರುವ ಶ್ರೀ ಸಾಯಿಬಿನ್ ದೇವಿ ಮಂದಿರದ ನೂತನ ಸಮುದಾಯ ಭವನವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಉದ್ಘಾಟಿಸಿದರು.
ಶ್ರೀ ವರದಪ್ಪನ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು, ಸಾಗರ್ ಲಾಖೆ, ಮೋಹನ್ ಸಾಂಬ್ರೇಕರ್, ನಿಖಿತಾ ದಂಡಗಲ್ಕರ್, ಮಂಜುಶಾ ನಾಯ್ಕ್, ಪಾಂಡುರಂಗ ಲಾಖೆ, ಪಾಪು ಲಾಖೆ, ಸುನಿಲ್ ಲಾಖೆ ಮುಂತಾದವರು ಉಪಸ್ಥಿತರಿದ್ದರು.