ಬೆಳಗಾವಿ: ಪ್ರಸಿದ್ಧ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಟ್ವಿಟರ್ (ಪ್ರಸ್ತುತ ‘x’) ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳಕರ್ ಅವರು ಗಣನೀಯ ಪ್ರಮಾಣದ ಫಾಲೋವರ್ ಗಳನ್ನು ಹೊಂದುವ ಮೂಲಕ ಗಮನ ಸೆಳೆದಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಸದಾ ತಮ್ಮ ಟ್ವಿಟರ್ ಖಾತೆಯಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಜನರನ್ನು ತಲುಪುತ್ತಿದ್ದಾರೆ.
ರಾಜ್ಯ ಸರಕಾರದ ಸಂಪುಟದಲ್ಲಿ ಸಚಿವೆಯಾದ ನಂತರ ಅವರ ಟ್ವಿಟರ್ ಅಕೌಂಟ್ ಗಣನೀಯ ಪ್ರಮಾಣದಲ್ಲಿ ಹಿಂಬಾಲಕರನ್ನು ಹೊಂದಿದೆ. ಈ ಮೊದಲು 33,782 ಹಿಂಬಾಲಕರಿದ್ದ ಅವರ ಟ್ವಿಟರ್ ಖಾತೆ ಈಗ ಹಿಂಬಾಲಕರ ಸಂಖ್ಯೆ 50,000 ದಾಟಿದೆ.
ಈ ಬಗ್ಗೆ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಲಕ್ಷ್ಮಿ ಹೆಬ್ಬಾಳಕರ ಅವರು, ‘ನನ್ನ ಟ್ವಿಟರ್ ಖಾತೆ 50,000 ಹಿಂಬಾಲಕರನ್ನು ತಲುಪಿರುವುದು ಖುಷಿ ತಂದಿದೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ವಿಶ್ವಾಸ ನನ್ನ ಶಕ್ತಿಯನ್ನು ಇಮ್ಮಡಿಗೊಳಿಸಿದೆ’ ಎಂದಿದ್ದಾರೆ. ಅವರ ಅಧಿಕೃತ ಟ್ವಿಟರ್ ಲಿಂಕ್ ಈ ಕೆಳಗಿನಂತಿದೆ.
www.twitter.com/laxmi_hebbalkar