ಬೆಳಗಾವಿ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸಂತಿ ಬಸ್ತವಾಡದ ಸೈಂಟ್ ಸೆಬಾಸ್ಟಿಯನ್ ಚರ್ಚ್ ಕಟ್ಟಡ ಪುನರ್ ನಿರ್ಮಾಣದ ಕಾಮಗಾರಿಗೆ 50 ಲಕ್ಷ ರೂ. ಮಂಜೂರು ಮಾಡಿಸಿದ್ದಾರೆ.
ಚರ್ಚ್ ನ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದ ಹಿನ್ನೆಯಲ್ಲಿ ಅವರ ಮನವಿಗೆ ಸ್ಪಂದಿಸಿ, ರಾಜ್ಯ ಸರ್ಕಾರದಿಂದ 50 ಲಕ್ಷ ರೂ. ಗಳನ್ನು ಸಚಿವರು ಮಂಜೂರು ಮಾಡಿಸಿದ್ದಾರೆ.
ಮೊದಲನೇ ಕಂತಿನಲ್ಲಿ 25 ಲಕ್ಷ ರೂ. ಬಿಡುಗಡೆಗೊಂಡಿದ್ದು, ಮಂಗಳವಾರ ಚರ್ಚ್ ನ ರೆವರೆಂಡ್ ಫಾದರ್ ಯುಸೆಬಿಯೊ ಫರ್ನಾಂಡೀಸ್ ಮತ್ತಿತರರು ಬೆಳಗಾವಿ ಕಚೇರಿಗೆ ಆಗಮಿಸಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.