ಬೆಳಗಾವಿ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ
ತವರು ಮನೆಯ ಆರಾಧ್ಯದೈವ ಚಿಕ್ಕಹಟ್ಟಿಹೊಳಿಯ ಶ್ರೀ ವೀರಭದ್ರ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು.
ಕುಟುಂಬದ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ, ವೀರಭದ್ರ ದೇವರಿಗೆ ವಿಶೇಷ ಪೂಜೆ ಕೈಗೊಂಡು, ಪ್ರಾರ್ಥನೆ ಸಲ್ಲಿಸಿದರು.
ಜೊತೆಗೆ, ಕುಟುಂಬದ ಪರಂಪರೆಯಂತೆ ಚಿಕ್ಕಹಟ್ಟಿಹೊಳಿ ಹಾಗೂ ಜಿಕನೂರ್ ಗ್ರಾಮದ ಜನತೆಗೆ ಹೋಳಿಗೆ ಊಟದ ಸೇವೆಯನ್ನು ನೀಡಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೃಣಾಲ್ ಹೆಬ್ಬಾಳಕರ್ ಸೇರಿದಂತೆ ಕುಟುಂಬ ಸದಸ್ಯರು ಸಹ ಭಾಗವಹಿಸಿದ್ದರು.