ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಗೆ ಬರುವ 114 ಹಳ್ಳಿಗಳನ್ನೂ ಅಭಿವೃದ್ಧಿಪಡಿಸುವುದೇ ನನ್ನ ಗುರಿಯಾಗಿದೆ. ಸತತ ಎರಡು ಬಾರಿ ಆಶೀರ್ವಾದ ಮಾಡಿರುವ ಕ್ಷೇತ್ರದ ಜನರ ಸೇವೆಗೆ ನಿರಂತರ ಕೆಲಸ ಮಾಡುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬಡಸ್ ಕೆ.ಚ್ ಗ್ರಾಮದ ಶ್ರೀ ಮಡಿವಾಳೇಶ್ವರ ಮಠದ ನೂತನ ಕಟ್ಟಡದ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ಗ್ರಾಮದ ಬಹುದಿನಗಳ ಬೇಡಿಕೆಯಾಗಿದ್ದ ಮಡಿವಾಳೇಶ್ವರ ಮಠದ ನಿರ್ಮಾಣಕ್ಕೆ ಇಂದು ಗುದ್ದಲಿ ಪೂಜೆ ಮಾಡಲಾಗಿದೆ. ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಮಠದ ಕಟ್ಟಡ ನಿರ್ಮಾಣ ಭರವಸೆ ಈಡೇರಿಸುತ್ತಿದ್ದು, ಮುಂದಿನ ಶ್ರಾವಣದ ವೇಳೆ ಸುಸಜ್ಜಿತ ಮಠ ನಿರ್ಮಾಣವಾಗಲಿದೆ ಎಂದರು.
ಮಠದ ಕಟ್ಟಡ ನಿರ್ಮಾಣಕ್ಕೆ 1.25 ಕೋಟಿ ರೂಪಾಯಿ ಈಗಾಗಲೇ ಬಿಡುಗಡೆಯಾಗಿದ್ದು, ಇನ್ನೂ 25 ಲಕ್ಷ ರೂಪಾಯಿ ಕೊಡುತ್ತೇನೆ. ನನಗೆ ತೃಪ್ತಿಯಾಗುವಂತೆ ಮಠವನ್ನು ಕಟ್ಟಬೇಕು. ಆದಷ್ಟು ಬೇಗ ಮಠ ನಿರ್ಮಾಣವಾಗಿ, ನಮ್ಮ ಸಮಾಜಕ್ಕೆ ಸೇವೆ ಸಲ್ಲಿಸುವಂತಾಗಲಿ, ಇದೊಂದು ಜ್ಞಾನಾರ್ಜನೆಯ ಕೇಂದ್ರವಾಗಿ, ಮುಂದಿನ ಪೀಳಿಗೆಗೆ ಮಾರ್ಗದರ್ಶನ ಕೇಂದ್ರವಾಗಿ ಬೆಳೆಯಲಿ ಎಂದು ಹೇಳಿದರು.
ನಮ್ಮ ಮುಂದಿನ ಕಾರ್ಯಗಳೆಲ್ಲವೂ ಸುಸೂತ್ರವಾಗಿ ನಡೆಯಲಿ. ಯಾವುದೇ ಸಮಸ್ಯೆ ಬಾರದಿರಲಿ. ನಿರಂತರ ಅಭಿವೃದ್ಧಿಯಾಗಲಿ ಎನ್ನುವ ಕಾರಣಕ್ಕೆ ಎಲ್ಲ ಒಳ್ಳೆಯ ಕಾರ್ಯಗಳಿಗೆ ಭೂಮಿ ಪೂಜೆಯನ್ನು ನೆರವೇರಿಸುತ್ತೇವೆ. ಹಾಗೆಯೇ ಇಂದು ಭೂಮಿ ಪೂಜೆಯ ಮೂಲಕ ಮಠ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಗ್ರಾಮಸ್ಥರು ನನಗೆ ಸದಾ ಬೆಂಬಲ ನೀಡುತ್ತಾ ಬಂದಿದ್ದಾರೆ, ಅದರಂತೆಯೇ ಅವರ ಬೇಡಿಕೆಗೆ ಸ್ಪಂದಿಸಿ ಶ್ರೀ ಮಡಿವಾಳೇಶ್ವರ ಮಠದ ನಿರ್ಮಾಣಕ್ಕೆ ಕೈಜೋಡಿಸಿದ್ದೇನೆ. ಈ ಗ್ರಾಮಸ್ಥರು ಮಾಡಿದ ಸಹಾಯವನ್ನು ಎಂದಿಗೂ ನಾನು ಮರೆಯುವುದಿಲ್ಲ. ಜನರ ಆಶೀರ್ವಾದದಿಂದಲೇ 7 ಕೋಟಿ ಜನಸಂಖ್ಯೆಯ ಕರ್ನಾಟಕ ರಾಜ್ಯದ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಮಂತ್ರಿಯಾಗಿರುವೆ ಎಂದು ಸಚಿವರು ಹೇಳಿದರು.
ಕ್ಷೇತ್ರದ ಜನತೆಯ ಆಶೀರ್ವಾದಿಂದ ದೊಡ್ಡ ಅಪಘಾತ ಆಗಿದ್ದರೂ ಬದುಕಿ ಬಂದಿರುವೆ. ಜನರ ಪ್ರೀತಿ ವಿಶ್ವಾಸ, ಪ್ರಾರ್ಥನೆಯೇ ಇದಕ್ಕೆ ಕಾರಣ. ನನ್ನ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ನನಗಿದೆ. ನಮ್ಮ ಗ್ರಾಮೀಣ ಕ್ಷೇತ್ರದಲ್ಲಿ ಮಠಗಳು ಹಾಗೂ ದೇವಸ್ಥಾನಗಳ ನಿರ್ಮಾಣ, ಅವುಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ನೀಡುತ್ತ ಬಂದಿದ್ದೇನೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಡಸ್ ಮಡಿವಾಳೇಶ್ವರ ಮಠದ ಗ್ರಾಮದ ಶ್ರೀ ಪ್ರಶಾಂತ ದೇವರು, ಬಿಜಾಪುರದ ಶ್ರೀ ಪ್ರಭುದೇವರು, ಸಿ.ಸಿ.ಪಾಟೀಲ್, ಗ್ರಾಮ ಪಂಚಾಯತ್ ಅಧ್ಯಕ್ಷ ಶೋಭಾ ಕುರಬರ್, ಮನ್ಸೂರ್ ಅಲಿ ಅತ್ತಾರ್, ಸುರೇಶ್ ಇಟಗಿ, ರವಿ ಮೇಳೆದ್, ಬಸವಂತ್ ನಾಯಿಕ್, ಭರಮಣ್ಣ ಶೀಗಿಹಳ್ಳಿ, ಫಕೀರ್ ಶೀಗಿಹಳ್ಳಿ, ಸಿದ್ದು ಸಂಪಗಾವ, ಇನಾಯತ್ ಅತ್ತಾರ್, ಪರ್ವತಗೌಡ ಪಾಟೀಲ, ಗೌಸ್ ಸಿಂಪಿ, ಬಸವರಾಜ ಕಲಾರಕೊಪ್ಪ, ಭೀಮಶಿ ಹಾದಿಮನಿ, ರಾಮನಗೌಡ ಮದಲಭಾವಿ, ಸಂತೋಷ ಬಂದವ್ವಗೋಳ, ಸುನೀಲ್, ನಾಗಪ್ಪ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ
ಬೆಳಗಾವಿ : ಹಲಗಾ ಗ್ರಾಮದ ಅಂಬೇಡ್ಕರ್ ಗಲ್ಲಿಯಲ್ಲಿ ಸುಮಾರು 33.53 ಲಕ್ಷ ರೂ,ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಭಾನುವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಭೂಮಿ ಪೂಜೆ ವೇಳೆ ಸಿದ್ದು ಕುರಂಗಿ, ಚೇತನ ಕುರಂಗಿ, ರಾಜೇಶ ವಡಗಾಂವಿ, ಸರೋಜಿನಿ ವಡಗಾಂವಿ, ಲಕ್ಷ್ಮೀ ಮೇದಾರ್, ರೇಖಾ ದೇಸಾಯಿ, ರೂಪಾ ಸುತಾರ್, ಗಣಪತ್ ಎಂ, ಲಕ್ಷ್ಮೀ ಸಂತಾಜಿ, ಕೃಷ್ಣ ಸಂತಾಜಿ, ಚಂದ್ರಕಾಂತ ಕಾಮೋಜಿ, ಮಹಾವೀರ್ ಪಾಟೀಲ, ಸಾಗರ ಕಾಮನಾಚೆ, ವಿಲಾಸ ಪರಿಟ್, ಭುಜಂಗ ಸಾಲ್ಗುಡೆ, ನಜೀರ್ ಮುಲ್ಲಾ, ಆಪ್ತ ಸಹಾಯಕ ಮಹಾಂತೇಶ ಹಿರೇಮಠ್ ಮುಂತಾದವರು ಉಪಸ್ಥಿತರಿದ್ದರು.
ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಕುರಿತು ಗ್ರಾಮಸ್ಥರೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸುದೀರ್ಘ ಚರ್ಚೆ
ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತಂತೆ ಕ್ಷೇತ್ರದ ಶಾಸಕರೂ ಆಗಿರುವ ಲಕ್ಷ್ಮೀ ಹೆಬ್ಬಾಳಕರ್ ಅವರು ಭಾನುವಾರ ಸುದೀರ್ಘ ಚರ್ಚೆ ನಡೆಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಬಿ.ಕೆ, ನಿಲಜಿ, ದೇಸೂರ್, ಸಾಂಬ್ರಾ ಸೇರಿದಂತೆ ಅನೇಕ ಗ್ರಾಮಗಳ ಮುಖಂಡರು, ವಿವಿಧ ದೇವಸ್ಥಾನಗಳ ಸಮಿತಿಯ ಸದಸ್ಯರು ಹಾಗೂ ವಾರ್ಕರಿ ಮಂಡಳಿಯವರ ಜೊತೆ ಗೃಹ ಕಚೇರಿಯಲ್ಲಿ ಸಭೆ ನಡೆಸಿದರು.
ಆಯಾ ಗ್ರಾಮಗಳಲ್ಲಿ ಆಗಬೇಕಿರುವ ಕೆಲಸಗಳು, ಮುಂದಿನ ದಿನಗಳಲ್ಲಿ ಜರುಗಲಿರುವ ಜಾತ್ರಾ ಮಹೋತ್ಸವಗಳ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸಗಳ ಕುರಿತಾಗಿ ಸುಧೀರ್ಘ ಕಾಲ ಚರ್ಚೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಎಲ್ಲ ಮುಖಂಡರ, ದೇವಸ್ಥಾನಗಳ ಸಮಿತಿಯ ಸದಸ್ಯರ, ವಾರ್ಕರಿ ಮಂಡಳಿಯವರ ಹಾಗೂ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾರ್ವಜನಿಕರ ಮನವಿಗಳಿಗೆ ಸ್ಪಂದಿಸಿದ ಸಚಿವರು, ಯಾವುದೇ ರಾತಿಯ ರಾಜಕಾರಣ, ಭೇದ ಭಾವವಿಲ್ಲದೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿರುವೆ. ಸಣ್ಣ ಸಮಸ್ಯೆ ಇದ್ದರೂ ತಕ್ಷಣ ಸ್ಪಂದಿಸುತ್ತಿದ್ದೇನೆ. ಕ್ಷೇತ್ರದ ಜನರ ಆಶೀರ್ವಾದ ಮೇಲಿರುವುದರಿಂದ ರಾಜ್ಯದ ಮಂತ್ರಿಯಾಗಿ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಮುಂದೆ ಕೂಡ ನಿಮ್ಮ ಜೊತೆಗೆ, ನಿಮ್ಮ ಮನೆ ಮಗಳಾಗಿ ಸೇವೆ ಮುಂದುವರಿಸುತ್ತೇನೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವರಾಜ ಕದಂ ಹಾಗೂ ಕ್ಷೇತ್ರದ ಹಲವಾರು ಮುಖಂಡರು ಈ ಸಂರ್ಭದಲ್ಲಿ ಉಪಸ್ಥಿತರಿದ್ದರು.