ಮಂತ್ರಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಕಾರ್ ಚಾಲಕನಿಗೆ ಚಾಕು ಇರಿತ..!
ಕುಚುಕುಗಳ ಮಧ್ಯೆ ಬಿರುಕು ಬಿಟ್ಟ ಮೈನಿಂಗ್ ಮಾಫಿಯಾ ದಂಧೆ..?
ಹಲ್ಲೆ ಮಾಡಿದವರು ಹೆಬ್ಬಾಳ್ಕರ್ ಕ್ಷೇತ್ರದವರೇ..?
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ
ಹೆಬ್ಬಾಳಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳಕರನ ಕಾರು ಚಾಲಕನ ಮೇಲೆ ಇಬ್ಬರು ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾದ ಘಟನೆ ಇಂದು ಮಂಗಳವಾರ ಮಧ್ಯಾಹ್ನ ನಗರದ ಕ್ಲಬ್ ರಸ್ತೆಯ ಮಹಾವೀರ ಕ್ಯಾಂಟೀನ್ ಬಳಿ ನಡೆದಿದೆ.
ಮೃಣಾಲ್ ಕಾರು ಚಾಲಕ ಬೆಳಗುಂದಿ ಗ್ರಾಮದ ಬಸವಂತ ಗಣಪತ ಕಡೋಲಕರ ಹಲ್ಲೆಗೊಳಗಾದ ವ್ಯಕ್ತಿ. ದುಷ್ಕರ್ಮಿಗಳು ಚಾಕು ಇರಿದ ಕೂಡಲೇ ಗಾಯಾಳು ಬಸವಂತನನ್ನು VOTC ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕನಿಗೆ ಚಾಕುವಿನಿಂದ ಎದೆ, ಭುಜ, ತೊಡೆ ಸೇರಿ ನಾಲ್ಕು ಕಡೆ ಹಲ್ಲೆ ಮಾಡಿ ಕೊಲೆ ಪ್ರಯತ್ನ ನಡೆಸಲಾಗಿದೆ.
ಬಲ್ಲ ಮೂಲಗಳ ಪ್ರಕಾರ ಹಲ್ಲೆ ಮಾಡಿದವರು ಹೆಬ್ಬಾಳ್ಕರ್ ಕ್ಷೇತ್ರದ ಬೆಳಗಾವಿ ತಾಲೂಕಿನ ಗೋಜಗಾ ಗ್ರಾಮದವರು ಎಂದು ತಿಳಿದು ಬಂದಿದೆ.
ಹಲ್ಲೆಗೆ ಮೈನಿಂಗ್ ಮಾಫಿಯಾ ಕಾರಣ ಎಂದು ತಿಳಿದು ಬಂದಿದ್ದು, ಹಲ್ಲೆ ಮಾಡಿದವರು ಹಾಗೂ ಹಲ್ಲೆಗೊಳಗಾದ ಚಾಲಕ ಆತ್ಮೀಯರು ಹಾಗೂ ಸೇರಿಕೊಂಡು ವ್ಯವಹಾರ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
ಹಲ್ಲೆಗೆ ಪ್ರಮುಖ ಕಾರಣ ತನಿಖೆ ನಂತರ ತಿಳಿಯಲಿದೆ.
ಕ್ಲಬ್ ರಸ್ತೆಯ ಬಿ. ಶಂಕರಾನಂದ ಅವರ ಮನೆ ಎದುರಿನ ಸ್ಥಳದಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


