MES ಪುಂಡರಿಗೆ ಮುಖಭಂಗ..!
ನಾಡದ್ರೋಹಿಗಳನ್ನು ಭೇಟಿ ಆಗದ DC.
ಪುಂಡರ ಪುಂಗಿ ಬಂದ ಮಾಡಿ ಹೊರಹಾಕಿದ ಬೆಳಗಾವಿ ಪೊಲೀಸರು ..!
ಬೆಳಗಾವಿ : ಮಹಾರಾಷ್ಟ್ರದ ಪರವಾಗಿ ಡಿಸಿಗೆ ಮನವಿ ಸಲ್ಲಿಸಲು ಬಂದಾಗ ಜಿಲ್ಲಾಧಿಕಾರಿ ನಿತೇಶ ಪಾಟೀಲ ಎಮ್ ಇ ಎಸ್ ಪುಂಡರ ಮನವಿಯನ್ನು ಸ್ವೀಕರಿಸದ ಸಂದರ್ಭದಲ್ಲಿ ನಾಡದ್ರೋಹಿ ಘೋಷಣೆ ಕೂಗಿ ಪುಂಡಾಟಿಕೆಗೆ ಮುಂದಾಗಾಗ ಬೆಳಗಾವಿ ಪೊಲೀಸರು ತಕ್ಷಣ ಅವರನ್ನು ಡಿಸಿ ಆವರಣದಿಂದ ಹೊರತಂದು ಪೊಲೀಸ ವಾಹಣದಲ್ಲಿ ಹಾಕಿ ಹೊರ ದಬ್ಬಿ ಭಾಷಾ ವಿಷಯ ಮುಂದಿಟ್ಟುಕೊಂಡು ಕೂಗಾಟ ಮಾಡುತ್ತಿದ್ದವರ ಪುಂಗಿ ಬಂದ ಮಾಡಿದ್ದಾರೆ.
ಬೆಳಗಾವಿ ಎಮ್ಇಎಸ್ ನ ಕೆಲ ಮುಖಂಡರು ಇಂತಹ ಅವಮಾನಕ್ಕಿಡಾದ ಸಂದರ್ಭ ಇಂದು ಸಾಯಂಕಾಲ ಡಿಸಿ ಕಛೇರಿಯಲ್ಲಿ ನಡೆದಿದೆ.
ಡಿಸಿ ಅವರು MES ನವರ ಮನವಿ ಸಲ್ಲಿಸಲು ಕೆಳಗೆ ಬಾರದೆ ಪರೋಕ್ಷವಾಗಿ ಟಾಂಗ ಕೊಟ್ಟರು. ಇದರಿಂದ ಅವಮಾನಕ್ಕಿಡಾಗಿ ಪೇಚಿಗೆ ಸಿಲುಕಿದ ಪುಂಡರು ಪುಂಡಾಟಿಕೆ ಮಾಡಲು ಮುಂದಾದರು. ಆಗ ಮಧ್ಯೆ ಪ್ರವೇಶಿದ ಎಸಿಪಿ ನಾರಾಯಣ ಭರಮಣಿ ಹಾಗೂ ಸಿಬ್ಬಂದಿಗಳು ಪುಂಡರನ್ನು ಕಛೇರಿಯಿಂದ ಹೊರ ತಂದರು. ಆಗ ಆವರಣದಲ್ಲಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡುತ್ತಿದ್ದಂತೆ ಎಸಿಪಿ ಭರಮನಿ,ಚಂದ್ರಪ್ಪ ಹಾಗೂ ಪಿಐ, ಪಿಎಸ್ಐ ಗಳು ಅವರನ್ನು ತಕ್ಷಣ ಡಿಆರ್ ವಾಹನದಲ್ಲಿ ತಳ್ಳಿ ಹೊರಹಾಕಿದರು.