
ಬೆಳಗಾವಿ : ತಾಲೂಕಿನ ಕಡೋಲಿ ಗ್ರಾಮದಲ್ಲಿ 20 ವರ್ಷಗಳ ಹಿಂದೆ ಆ ಕುಟುಂಬದಿಂದ ನಡೆದಿದ್ದ ಕೊಲೆಯಿಂದಾಗಿ ಅಂದು ನರಕಮಯವಾಗಿದ್ದ ಕಡೋಲಿ ಗ್ರಾಮದಲ್ಲಿ ಇಂದು ಮತ್ತದೇ ಕುಟುಂಬದ ಒರ್ವ ನೀಚ ವ್ಯಕ್ತಿಯಿಂದಾಗಿ ಗ್ರಾಮದಲ್ಲಿ ಎರಡು ಕೊಮಿನ ಮಧ್ಯೆ ಉದ್ವೀಗ್ನ ಪರಿಸ್ಥಿತಿ ಉಂಟಾಗಿದೆ.
ಆಗಿದ್ದೇನು ಗೋತ್ತಾ..?
ಇಂದು ಮುಸ್ಲಿಂ ಬಾಂಧವರ ಮೊಹರಮ್ ಹಬ್ಬವನ್ನು ಅವರಿಗಿಂತ ಹಿಂದೂ ಸಮುದಾಯದ ಜನರೇ ಹೆಚ್ಚಾಗಿ ಆಚರಿಸುತ್ತಾರೆ. ಅಂತಹದಲ್ಲಿ ಕಡೋಲಿ ಗ್ರಾಮದ ಆಜಾದ ಗಲ್ಲಿಯ ಮುಸ್ಲಿಂ ಸಮುದಾಯದ ಕಾಮುಕ ಯುವಕ ಸಮೀರ ಅಬ್ಬಾಸ್ ಧಾಮಣೆಕರ ಎಂಬಾತ ಇಂದು (ಬುಧವಾರ ದಿ 17) ತಾಲೂಕಿನ ಬುದ್ಧಿಮಾಂದ್ಯತೆ ಇರುವ ಯುವತಿಯನ್ನು ಕರೆದೊಯ್ದು ಅತ್ಯಾಚಾರ ಮಾಡಲು ಪ್ರಯತ್ನಿಸುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾನೆ. ತಕ್ಷಣ ಆತನನ್ನು ಗ್ರಾಮಸ್ಥರು ಹಿಡಿದು ಕಾಕತಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಕುರಿತು ಯುವಕನ ವಿರುಧ್ಧ ಕಾಕತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನ್ಯಕೊಮಿನ ಯುವಕ ಮತ್ತೊಂದು ಕೊಮಿನ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರಿಂದ ಕಡೋಲಿಯ ನೂರಾರು ಗ್ರಾಮಸ್ಥರು ಠಾಣೆಗೆ ಮುಂದೆ ಜಮಾಯಿಸಿದ್ದರಿಂದ ಸ್ವತಃ ಡಿಸಿಪಿ ಸ್ನೇಹಾ ಪಿ ವಿ ಠಾಣೆಗೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಗ್ರಾಮದಲ್ಲಿ ಸಭೆ ಸೇರಿಸಿ ಪರಿಸ್ಥಿತಿ ಶಾಂತಿಯುತವಾಗುವಂತೆ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
20 ವರ್ಷದ ಹಿಂದೆ ಈ ಕುಟುಂಬದಿಂದಾಗಿ ಕಡೋಲಿಯಾಗಿತ್ತು ನರಕ..?
20 ವರ್ಷದ ಹಿಂದೆ ಈ ಕುಟುಂಬದ ವ್ಯಕ್ತಿಯೊಬ್ಬ ಅದೆ ಗ್ರಾಮದ ಹಿಂದೂ ವ್ಯಕ್ತಿಯೊರ್ವನನ್ನು ಕೊಲೆ ಮಾಡಿದ್ದ. ಇದರಿಂದ ಗ್ರಾಮದಲ್ಲಿ ಅಹಿತಕರ ಘಟನೆಗಳು ನಡೆದಿದ್ದವು. ಸುಮಾರು 200 ಜನರ ಮೇಲೆ ಪ್ರಕರಣಗಳು ದಾಖಲಾಗಿ ನಿಷೇಧಾಜ್ಞೆ ಜಾರಿಯಾಗಿ ಸಂಪೂರ್ಣ ಗ್ರಾಮ ನರಕಮಯವಾಗಿತ್ತು. ಈಗ ಅದೇ ಕುಟುಂಬದ ಒರ್ವ ನೀಚ ವ್ಯಕ್ತಿಯಿಂದಾಗಿ ಗ್ರಾಮದಲ್ಲಿ ಎರಡು ಕೊಮಿನ ಮಧ್ಯೆ ಉದ್ವೀಗ್ನ ಪರಿಸ್ಥಿತಿ ಉಂಟಾಗಿದ್ದು ಪೊಲೀಸರು ಯಾವ ರೀತಿ ನಿರ್ವಹಣೆ ಮಾಡುತ್ತಾರೆ ಎಂದು ಕಾದೂ ನೋಡಬೇಕು.
ಬುದ್ಧಿಮಾಂದ್ಯ ಯುವತಿ ಮೇಲೆ ಮುಸ್ಲಿಂ ಯುವಕನಿಂದ ಅತ್ಯಾಚಾರ ಯತ್ನ
