jj news ಬೆಳಗಾವಿ : ಮಾಧ್ಯಮಗಳು ಗಮನಸೆಳೆದ ಕೆಲವೇ ಗಂಟೆಗಳಲ್ಲಿ ಅಕ್ರಮ ಸಾರಾಯಿ ಮಾರಾಟಗಾರರು ಮತ್ತು ಸೇವಕರನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ಶಕ್ತಿದೇವತೆ ಸವದತ್ತಿ ಯಲ್ಲಮ್ಮನ ಬೃಹತ್ ಜಾತ್ರಾ ಸನ್ನಿಧಿಯಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆದ ಬಗ್ಗೆ ಚಿತ್ರಸಹಿತ ಮಾಧ್ಯಮಗಳು ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ಎಸ್ಪಿ ಡಾ. ಸಂಜೀವ ಪಾಟೀಲ 5 ಪ್ರಕರಣಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಬಕಾರಿ ಕಾಯ್ದೆ ಸೆಕ್ಷನ್ 32& 34ರ ಅಡಿ 5ಪ್ರಕಣರಣಗಳನ್ನು ದಾಖಲಿಸಿ ಮೂವರು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕೊಡುವಲ್ಲಿ ಆದ ತ್ವರಿತ ಕಾರ್ಯಾಚರಣೆ ಗಮನ ಸೆಳೆದಿದೆ.
ಎಸ್ಪಿ ಡಾ. ಸಂಜೀವ ಪಾಟೀಲ ಅವಧಿಯಲ್ಲಿ ಜನಸಾಮಾನ್ಯರಿಗೆ ಸಮಸ್ಯೆಗಳಿಗೆ ಕಿವಿಕೊಟ್ಟಿದ್ದು ಈಗಾಗಲೇ ಗಮನ ಸೆಳೆದಿದೆ. ಸಾಮಾನ್ಯ ನಾಗರಿಕರಿಗೆ, ಜನಪ್ರತಿನಿಧಿಗಳಿಗೆ, ಮಾಧ್ಯಮಗಳು & ಜಿಲ್ಲಾಡಳಿತದ ಆದೇಶಕ್ಕೆ ಕ್ವಿಕ್ ರಿಸ್ಪಾನ್ಸ್ ಮಾಡುವಲ್ಲಿ ಎಸ್ಪಿ ಅಚ್ಚುಮೆಚ್ಚಾಗಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಕಮಿಷ್ನರೇಟ್ ಸಹ ಬೆಳಗಾವಿ ಜಿಲ್ಲಾ ಎಸ್ಪಿ ಪಾಟೀಲರಂತೆ ತನ್ನನ್ನು ನ್ಯಾಯಪರ ಚಟುವಟಿಕೆಗಳಿಗೆ ಹೆಚ್ಚು ಆಕ್ವೀವ್ ಮಾಡಿಕೊಳ್ಳಬೇಕಿದೆ.
ಬಿತ್ತರ ಮಾಡಿದ್ದ ವರದಿ ವಿವರ:ಜಾತ್ರೆಗೆ ಬರುವ ಭಕ್ತರನ್ನ ಟಾರ್ಗೆಟ್ ಮಾಡಿ ರಾಜಾರೋಷವಾಗಿ ಅಕ್ರಮವಾಗಿ ಮದ್ಯ ಮಾರಾಟ. ಸುಪ್ರಸಿದ್ಧ ದೇವಸ್ಥಾನ ಜಾತ್ರೆಯಲ್ಲಿ ಸಿಗುತ್ತದೆ ಸಾರಾಯಿ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ಅಕ್ರಮ ಸಾರಾಯಿ ಮಾರಾಟ
ಪ್ರತಿಯೊಂದು ಕೂಲ್ ಡ್ರಿಂಕ್ಸ್ ಅಂಗಡಿಗಳಲ್ಲಿ ಸಿಗುತ್ತೆ ಅಕ್ರಮ ಸಾರಾಯಿ. ಯಲ್ಲಮ್ಮನ ಗುಡ್ಡದ ಸುಮಾರು 65 ಕ್ಕೂ ಹೆಚ್ಚು ಕೂಲ್ ಡ್ರಿಂಕ್ಸ್ ಅಂಗಡಿಗಳಲ್ಲಿ ಸಿಗುತ್ತೆ ಮದ್ಯ. ಕೂಲ್ ಡ್ರಿಂಕ್ಸ ಅಂಗಡಿಗಳಲ್ಲಿ ಮದ್ಯ ಕುಡಿಯಲು ಅವಕಾಶ ನೀಡಲಾಗುತ್ತಿದೆ.
ಚಿಕ್ಕಮಕ್ಕಳನ್ನ ಬಳಸಿಕೊಂಡು ಮದ್ಯ ಮಾರಾಟ ಮಾಡುತ್ತಿರುವ ಪೋಷಕರು.ರಾಜಾರೋಷವಾಗಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದರೂ ಕಣ್ಮುಚ್ಚಿ ಕುಳಿತ ಅಬಕಾರಿ ಹಾಗೂ ಪೋಲಿಸ್ ಇಲಾಖೆ.
ಉತ್ತರ ಕರ್ನಾಟಕ ಪ್ರಸಿದ್ದ ದೇವಸ್ಥಾನ ಶ್ರೀ ರೇಣುಕಾದೇವಿ ಯಲ್ಲಮ್ಮ ದೇವಿ ದೇವಸ್ಥಾನ ಹೊರಗಡೆ ಇದೆಂತ ಅಕ್ರಮ. ಲಕ್ಷಾಂತರ ಭಕ್ತರು ಆಗಮಿಸುವ ಸುಪ್ರಸಿದ್ಧ ದೇವಸ್ಥಾನ.
ನಾಳೆಯ ಹುಣ್ಣುಮೆಗೆ ಜಾತ್ರೆಗೆ ಆಗಮಿಸಿದ ಲಕ್ಷಾಂತರ ಭಕ್ತರು. ದೇವಸ್ಥಾನ ಸುತ್ತ 3 ಕಿಮೀ ಯಾವುದೇ ಮದ್ಯ ಮಾರಾಟ ಮಾಡದಂತೆ ಆದೇಶವಿದ್ರೂ ಡೋಂಟ್ ಕೇರ್.
ಕೂಲ್ ಡ್ರಿಂಕ್ಸ್ ಅಂಗಡಿಗಳ ನೆಪದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಕಾರರು.ಇಷ್ಟು ರಾಜಾರೋಷವಾಗಿ ಸಾರಾಯಿ ಮಾರಾಟ ಮಾಡಿದ್ರು ಗೊತ್ತಿದ್ದು,ಗೊತ್ತಿಲ್ಲದಂತೆ ಇರುವ ಅಬಕಾರಿ ,ಪೋಲಿಸ್ ಇಲಾಖೆ.
ಇಂತಹ ಅಕ್ರಮ ತಡೆಗಟ್ಟುವಲ್ಲಿ ವಿಫಲರಾದ ಸವದತ್ತಿಯ ಅಬಕಾರಿ ಇನ್ಸ್ಪೆಕ್ಟರ್ ಶ್ರೀಶೈಲ ಅಕ್ಕಿ ಹಾಗೂ ಪೋಲಿಸ್ ಇನ್ಸ್ಪೆಕ್ಟರ್ ಕರುಣೇಶ್ ಗೌಡ. ಅಕ್ರಮ ಸಾರಾಯಿ ಮಾರಾಟಕ್ಕೆ ಸಾಥ್ ನೀಡಿದ್ರಾ ಅಬಕಾರಿ,ಪೋಲಿಸ್ ಇಲಾಖೆ ಎಂಬ ಅನುಮಾನ ಕಾಡುತ್ತಿದೆ
ಪ್ರತಿ ಕೂಲ್ ಡ್ರಿಂಕ್ಸ್ ಅಂಗಡಿಗಳಲ್ಲಿ ಮಾರಾಟ ಗೊತ್ತಿದ್ದರೂ ತಲೆಕೆಡಿಸಿಕೊಳ್ಳದ ಅಬಕಾರಿ,ಪೋಲಿಸ್ ಅಧಿಕಾರಿಗಳು. ಬೆಳಗಾವಿ ಜಿಲ್ಲಾಧಿಕಾರಿ ನೀತೇಶ್ ಪಾಟೀಲ್ ಹಾಗೇ ಜಿಲ್ಲಾ ಎಸ್ಪಿ ಸಂಜೀವ್ ಪಾಟೀಲ್ ಇತ್ತ ಗಮನ ಹರಿಸಲಿ.