ಬೆಳಗಾವಿ:
ಗಣೇಶಪುರನಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ಸೈನಿಕ್ ಕೋ ಆಪ್ ಕ್ರೆಡಿಟ್ ಸೊಸೈಟಿಯನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಈ ಸೊಸೈಟಿಯನ್ನು ಸೈನಿಕರಿಗೆ ಅನುಕೂಲವಾಗಲೆನ್ನುವ ಉದ್ದೇಶದಿಂದ ಆರಂಭಿಸಲಾಗಿದೆ. ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೇ ದೇಶದ ಸೇವೆಯಲ್ಲಿ ನಿರತರಾಗಿರುವ ನಮ್ಮ ಸೈನಿಕರ ಸೇವೆ ನಿಜಕ್ಕೂ ಪ್ರಶಂಸನೀಯ, ಅವರ ಸೇವೆಯಿಂದಾಗಿ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಸೈನಿಕರು ಈ ದೇಶದ ಆಸ್ತಿ. ಅವರನ್ನು ಸದಾಕಾಲವೂ ಗುರುತಿಸಿ, ಗೌರವಿಸಬೇಕಿದೆ,” ಎಂದರು.
ಕಾರ್ಯಕ್ರಮದಲ್ಲಿ ರಾಜಾರಾಮ ಕೋಲೆ, ಹರಿಚಂದ್ರ ಪಾಟೀಲ, ಯುವರಾಜಣ್ಣ ಕದಂ, ಉತ್ತಮ ಪಾಟೀಲ ಶಾಹು ಪಾಟೀಲ, ಸುಬ್ಬರಾವ್ ಬೋಗಣ್, ರಾಜರಾನ ಪಡಕೆ, ಸದಾನಂದ ಸಾಳುಂಕೆ, ವಿನಾಯಕ ದೇವಕರ್, ತುಕಾರಾಂ ಕಾಂಬಳೆ, ಸಂಜೀವಿನಿ ಪಾಟೀಲ, ಸವಿತಾ ಜಾಧವ್, ಗಣಪತಿ ಅಲ್ಲೋಳಕರ್, ಜಿವಭಾ ಕಿವಡೆ, ರಿಷಿಕಾಂತ ಖುಲೆ, ರಾವಜಿ ಜಾಧವ್, ವಿಶ್ವನಾಥ್ ಪಾಟೀಲ, ರಾಮಚಂದ್ರ ಪಾಟೀಲ, ಮಾರುತಿ ಕಜರಿ, ಸಿಪಿಐ ಪ್ರಭಾಕರ ಧರ್ಮಟ್ಟಿ, ಅರುಣ ಕಟಾಂಬಳೆ, ಮಾರುತಿ ಸನದಿ, ಸಿದ್ಧಿ ಕುಲಕರ್ಣಿ, ವಿಲಾಸ ಘಾಡಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.