ಬೆಳಗಾವಿ :ಬೆಳಗಾವಿ ತಹಸೀಲ್ದಾರ ಕಚೇರಿಯ ಗ್ರೇಡ್-2 ತಹಶೀಲ್ದಾರ ಆಗಿರುವ ಸುಭಾಸ ದುಂಡಪ್ಪ ಅಸೊದೆ ಇವರು ಸಂಧ್ಯಾ ಸುರಕ್ಷಾ ಯೋಜನೆ (ಎಸ್.ಎಸ್.ವೈ.)ಯಲ್ಲಿ ಭಾರೀ ದೊಡ್ಡ ಅಕ್ರಮ ಮಾಡಿದ್ದಾರೆ. ತಮ್ಮ ವ್ಯಾಪ್ತಿ ಮೀರಿ ಬೇರೆ ತಾಲೂಕಿನ ರಹವಾಸಿ ಇರುವ ಜನರಿಗೆ (ಎಸ್.ಎಸ್.ವೈ.) ಮಂಜೂರಾತಿ ಪತ್ರವನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಗಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ಗಂಗನ್ನವರ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಸಚಿವ ಕೃಷ್ಣ ಬೈರೇಗೌಡ. ಹಾಗೂ ಕರ್ನಾಟಕ ಲೋಕಾಯುಕ್ತರಿಗೆ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಆಗಿರುವ ಭ್ರಷ್ಟಾಚಾರದ ಕುರಿತು ಸಮಗ್ರ ದಾಖಲೆಯನ್ನು ಕಳುಹಿಸಿಕೊಟ್ಟಿದ್ದಾರೆ.
ಸುಭಾಸ ಆಶೊಡೆಯವರು
ಸಂಧ್ಯಾ ಸುರಕ್ಷಾ ಯೋಜನೆಯ ಯಲ್ಲಿ ವಯಸ್ಸು ಆಗದೇ ಇರುವವರಿಗೆ ಆದೇಶವನ್ನು ನೀಡಿದ್ದಾರೆ, ಮಾರ್ಚ್ 2023 ದಿನಾಂಕ 16 ಮತ್ತು 17 ನೇ ತಾರೀಖಿನಂದು 200 ಕ್ಕಿಂತ ಹೆಚ್ಚು ಆದೇಶವನ್ನು ಮಾಡಿದ್ದಾರೆ. ಅದು ಅಲ್ಲದೆ ಆರ್.ಡಿ. ನಂಬರಗಳು ಎಲ್ಲವೂ ಕ್ರಮವಾಗಿ ಒಂದರ ಹಿಂದೆ ಒಂದು ಬಂದಿವೆ. ಇದು ಹೇಗೆ ಸಾಧ್ಯ. ಈ ಅಕ್ರಮದಲ್ಲಿ ಗ್ರೇಡ್ 2 ತಹಶೀಲ್ದಾರ ಬೇರೆ ಬೇರೆ ತಾಲೂಕಿನಲ್ಲಿ ಏಜೆಂಟರು ಭಾಗಿಯಾಗಿದ್ದಾರೆ. ಜನರಿಂದ 5 ರಿಂದ 7 ಸಾವಿರದ ವರೆಗೆ ಹಣವನ್ನು ಪಡೆದು ಮಂಜೂರಾತಿ ನೀಡಿದ್ದಾರೆ, ಇದರ ಹಿಂದೆ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವ ಶಂಕೆ ಕಂಡು ಬರುತ್ತಿದೆ. ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿರುವ ಅನುಮಾನ ಇದೆ. ರಾಜ್ಯ ಸರಕಾರಕ್ಕೆ ನೂರಾರು ಕೋಟಿ ರೂಪಾಯಿ ವಂಚಿಸಿದ್ದಾರೆ.
ಅದಕ್ಕಾಗಿ ಗ್ರೇಡ್ 2 ತಹಶೀಲ್ದಾರ ಅವರ ಲಾಗಿನನ್ನು ತನಿಖೆಗೆ ಒಳಪಡಿಸಬೇಕು, ಸತ್ಯವನ್ನು ಹೊರ ತೆಗೆಯಬೇಕು, ಇವರಿಂದ ಸರಕಾರಕ್ಕೆ ಆಗಿರುವ ನಷ್ಟವನ್ನು ಮರಳಿ ಪಡೆಯಬೇಕು ಮತ್ತು ಅಕ್ರಮದಲ್ಲಿ ಭಾಗಿಯಾಗಿರುವ ಗ್ರೇಡ್ 2 ತಹಶೀಲ್ದಾರ ಮತ್ತು ಏಜೆಂಟರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕು. (ಎಸ್.ಎಸ್.ವೈ) ಯೋಜನೆ ಬೇರೆ ತಾಲೂಕಿನವರಿಗೆ ನೀಡಿರುವ ಮಂಜೂರಾತಿ ಪ್ರತಿಗಳು ಆಧಾರಕಾರ್ಡ್ ಚುನಾವಣೆ ಗುರುತಿನ ಚೀಟಿಯನ್ನು ನೀಡಿದ್ದೇವೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
- ಆದಷ್ಟು ಬೇಗ ಸುಭಾಷ್ ಅಸೋಡಿ ಅವರನ್ನು ಸೇವೆಯಿಂದ ವಜಾ ಮಾಡಬೇಕು. ಇವರು ಸರ್ಕಾರಕ್ಕೆ ವಂಚಿಸಿ ನೂರಾರು ಕೋಟಿ ಅಕ್ರಮ ಆಸ್ತಿಯನ್ನು ಮಾಡಿದ್ದಾರೆ. ಸರ್ಕಾರಕ್ಕೆ ನಕಲಿ ದಾಖಲಾತಿಯನ್ನು ಸೃಷ್ಟಿಸಿ ಅಕ್ರಮ ಮಾಡಿದ್ದಾರೆ. ಸುಭಾಷ್ ಅಸೋಡಿ ಅವರ ಲಾಗಿನ್ ಅನ್ನು ತನಿಖೆಗೆ ಒಳಪಡಿಸಿ ಅಕ್ರಮವನ್ನು ಬಯಲಿಗೆ ಎಳೆಯಬೇಕು. ಇದರಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳನ್ನು ಕಾನೂನಿನ ಮುಖಾಂತರ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸುತ್ತೇನೆ. ಜಿಲ್ಲಾಧಿಕಾರಿಗಳು ಇದರ ಬಗ್ಗೆ ತನಿಖೆಯನ್ನ ಕೈಗೊಂಡು ನಮಗೆ ಮಾಹಿತಿಯನ್ನು ಒದಗಿಸಬೇಕು. ಇಲ್ಲದಿದ್ದರೆ ನಾವು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಉಗ್ರ ಹೋರಾಟವನ್ನು ಮಾಡುತ್ತೇವೆ. -ಗುರುನಾಥ ಗಂಗನ್ನವರ