- ಬೆಳಗಾವಿ ಸಬ್ ರಜಿಸ್ಟ್ರಾರ ಕಛೇರಿಯಲ್ಲಿ ಮುಸ್ಲಿಂ ಏಜೆಂಟನಿಂದ ಭಾರಿ ಗೋಲ್ ಮಾಲ್..?
- ಸರ್ಕಾರಕ್ಕೆ ಲಕ್ಷಾಂತರ ರೂ ತೆರಿಗೆ ಕೊಡದೆ ಆಸ್ತಿ ವಹಿವಾಟು ಮಾಡಿಸಿದ ಶೇಖ್ ..!
- ಸಮಯಕ್ಕೆ ಸರಿಯಾಗಿ ಎಚ್ಚೆತ್ತಕೊಂಡು ಠಾಣೆ ಮೆಟ್ಟಿಲೇರಿದ ಸಬ್ ರಜಿಸ್ಟ್ರಾರ್ ಹಂಚಿನಾಳ..!
ಜನಜೀವಾಳ ವಿಶೇಷ ಪ್ರತಿನಿಧಿ; ಬೆಳಗಾವಿ : ನಗರದ ಡಿಸಿ ಕಛೇರಿಗೆ ಅಂಟಿಕೊಂಡಿರುವ ಉತ್ತರ ಭಾಗದ ಸಬ್ ರಜಿಸ್ಟ್ರಾರ್ ಕಛೇರಿಯಲ್ಲಿ ಮುಸ್ಲಿಂ ಏಜೆಂಟನೊಬ್ಬ ಆಸ್ತಿ ವಹಿವಾಟ ಮಾಡಿ ಅದಕ್ಕೆ ಲಕ್ಷಾಂತರ ರೂ ಕಟ್ಟಬೇಕಾಗಿದ್ದ ತೆರಿಗೆಯನ್ನು ಕಟ್ಟದೆ ಪಂಗನಾಮ ಹಾಕಿ ಉಪ ನೋಂದಣಾಧಿಕಾರಿ ಕೈಗೆ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿರುವ ಘಟನೆ ನಿನ್ನೆ (ಮಂಗಳವಾರ) ನಡೆದಿದೆ.
ಆಗಿದ್ದೇನು ..?: ಬೆಳಗಾವಿ ಉತ್ತರ ಭಾಗದಲ್ಲಿರುವ ಸಬ್ ರಜಿಸ್ಟ್ರಾರ್ ಕಛೇರಿಯಲ್ಲಿ ಕಳೆದ ಅಕ್ಟೋಬರ್ ನಲ್ಲಿ 10 ಹಾಗೂ 13 ನೇ ತಾರೀಖಿನಂದು ನಗರದಲ್ಲಿನ ಕೋಟ್ಯಾಂತರ ರೂ ಮೌಲ್ಯದ ಆಸ್ತಿಯನ್ನು ಇಲ್ಲಿನ ಏಜೆಂಟ್ ಜಮೀರ ಶೇಖ್ ಎಂಬಾತ ವಹಿವಾಟು ಮಾಡಿಸಿದ್ದಾನೆ. ಅದಕ್ಕೆ ಸುಮಾರು ನಗದು ಆರೂವರೇ ಲಕ್ಷದಷ್ಟು ತೆರಿಗೆ ಕಟ್ಟಬೇಕು ಎಂದು ಖರೀದಿದಾರರಿಂದ ಪಡೆದುಕೊಂಡಿದ್ದಾನೆ. ನಂತರ ಅದನ್ನು ತುಂಬದೆ ತನ್ನ ಖಾತೆಗೆ ದುಡ್ಡು ಹಾಕಿಕೊಂಡು ಅವನ ಖಾತೆಯಿಂದ ಬ್ಯಾಂಕಿಗೆ ಚೆಕ್ ಕೊಟ್ಟು ಖಜಾನೆ-2 ನಮೂನೆ ಚಲನ್ ಪಡೆದುಕೊಂಡಿದ್ದಾನೆ.ಹಣ ಖಾತೆಯಿಂದ ಬ್ಯಾಂಕಿಗೆ ಜಮಾ ಆಗಿಲ್ಲ. ಅವರು ಅಂತಿಮ ಚಲನ ನೀಡಿಲ್ಲ. ಆದರೆ ಅದಕ್ಕೆ ಈತ ಅದರ ಮೇಲೆ ಬ್ಯಾಂಕಿನ ನಕಲಿ ಮುದ್ರೆ ಹಾಕಿಸಿ ಆಸ್ತಿ ನೋಂದಣಿ ಮಾಡಿಸಿಕೊಟ್ಟಿದ್ದಾನೆ.
ಪತ್ತೆ ಆಗಿದ್ದು ಹೇಗೆ..?: ಪ್ರತಿ ತಿಂಗಳ ಕೊನೆಯಲ್ಲಿ ಕಛೇರಿಯವರು ಎಲ್ಲ ವಹಿವಾಟುಗಳ ಸಮನ್ವಯತೆ ಮಾಡುತ್ತಾರೆ. ಆ ಸಮಯದಲ್ಲಿ ಈ ಎರಡು ವ್ಯವಹಾರಗಳ ಛಲನಗಳಿಗೆ ಚೆಕ್ ಮುಖಾಂತರ ನೀಡಿದ ಮೊತ್ತ ಜಮೆ ಆಗಿಲ್ಲ. ಹೀಗಾಗಿ ಚಲನಗಳು ಇತ್ಯರ್ಥವಾಗಿಲ್ಲ. ತಕ್ಷಣ ಎಚ್ಚೆತ್ತಕೊಂಡ ಸಬ್ ರಜಿಸ್ಟ್ರಾರ್ ರವಿಂದ್ರನಾಥ ಹಂಚಿನಾಳ ಕುಲಂಕುಶವಾಗಿ ಪರಿಶೀಲನೆ ಮಾಡಿದ್ದಾರೆ. ಇದನ್ನು ಜಮೀರ ಶೇಖ್ ಏಜೆಂಟ್ ನೇ ಉದ್ದೇಶಪೂರ್ವಕವಾಗಿ ಮಾಡಿದ್ದಾಗಿ ತಿಳಿದು ಬಂದಿದೆ. ತಕ್ಷಣ ಚಲನಗಳ ಮೊತ್ತ ಕಟ್ಟುವಂತೆ ಹೇಳಿದ್ದಾರೆ. ಅದಕ್ಕೆ ಸರಿಯಾಗಿ ಸ್ಪಂದಿಸದ ಕಾರಣ ಮಾರ್ಕೆಟ್ ಪೊಲೀಸರಿಗೆ ತಿಳಿಸಿದ್ದಾರೆ. ನಿನ್ನೆ (ಮಂಗಳವಾರ) ಏಜೆಂಟ್ ಜಮೀರ್ ಶೇಖನನ್ನು ಮಾರ್ಕೆಟ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ.
ಏಜೆಂಟ್ ನೊಬ್ಬ ಲಕ್ಷಾಂತರ ರೂ ಸರಕಾರಕ್ಕೆ ಕಟ್ಟಬೇಕಾಗಿದ್ದ ತೆರಿಗೆ ಕಟ್ಟದೆ ಕಛೇರಿ ಸಿಬ್ಬಂದಿಗಳ ವಿಶ್ವಾಸ ದುರುಪಯೋಗ ಮಾಡಿಕೊಂಡು ಕೋಟ್ಯಾಂತರ ರೂ ವ್ಯವಹಾರ ಮಾಡಿ ಪಂಗನಾಮ ಹಾಕಿರುವ ಈ ಘಟನೆ ಎಲ್ಲರನ್ನು ದಿಗ್ಭ್ರಮೆ ಮಾಡಿದೆ. ಪೊಲೀಸ ಠಾಣೆಯಲ್ಲಿ ಈ ಪ್ರಕರಣ ಯಾವ ರೀತಿ ಇತ್ಯರ್ಥ ಆಗುತ್ತದೆ ನೋಡುಬೇಕು.