This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಪುತ್ರನ ಸಾವಿನ ವಿಮೆ ಹಣ ದೋಚಿದ ಮುಸುಕುಧಾರಿಗಳು Masked men who stole insurance money for son's death


 

ರಾಮದುರ್ಗ :
ಪುತ್ರನ ಸಾವಿನ ನಂತರ ಬಂದ ವಿಮೆ ಹಣವನ್ನು ಕಳ್ಳರು ದೋಚಿದ ಘಟನೆ ನಡೆದಿದೆ.
ಬನ್ನೂರ ತಾಂಡಾದ ನಿವಾಸಿ ಹಾಗೂ ಬನ್ನೂರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಚಂದ್ರು ರಜಪೂತ್ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಅಪರಿಚಿತರು ಕಾಲಿಂಗ್ ಬೆಲ್ ಒತ್ತಿದ್ದಾರೆ. ಚಂದ್ರು ಅವರ ಪತ್ನಿ ಬಾಗಿಲು ತೆರೆದಾಗ ಏಳೆಂಟು ಜನರು ಒಳನುಗ್ಗಿ ಅವರ ತಲೆಗೆ ಬಡಿದು ಬಟ್ಟೆಯಿಂದ ಬಾಯಿ ಮುಚ್ಚಿ ನಂತರ ಚಂದ್ರು ರಜಪೂತ್ ಹಾಗೂ ಅವರ ಸೊಸೆಯನ್ನು ಬಟ್ಟೆಯಿಂದ ಬಾಯಿಗೆ ಕಟ್ಟಿ ಹಾಕಿ ಟ್ರೇಜರಿಯಲ್ಲಿದ್ದ 23 ಲಕ್ಷ ರೂ. ಹಾಗೂ 120 ಗ್ರಾಂ.ಬಂಗಾರದ ಆಭರಣ ದೋಚಿಕೊಂಡು ಪರಾರಿಯಾಗಿದ್ದಾರೆ. ಪಂಚಾಯಿತಿ ಅಭಿವದ್ಧಿ ಅಧಿಕಾರಿಯಾಗಿದ್ದ ಪುತ್ರ ಆಕಸ್ಮಿಕವಾಗಿ ನಿಧನರಾಗಿದ್ದರು. ಅದರಿಂದ ಬಂದ ವಿಮೆ ಹಣವನ್ನು ತಂದು ಮನೆಯಲ್ಲಿಟ್ಟಿದ್ದರು. ದರೋಡೆಕೋರರು ಮುಸುಕು ಹಾಕಿಕೊಂಡು ಬಂದಿದ್ದು ಕನ್ನಡ ಮಾತನಾಡುತ್ತಿದ್ದರು ಎಂದು ಚಂದ್ರು ತಿಳಿಸಿದ್ದಾರೆ. ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Jana Jeevala
the authorJana Jeevala

Leave a Reply