ಮಂತ್ರಾಲಯ : ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಮಂಗಳವಾರ ಹುಂಡಿ ತೆರೆದು, ಕಾಣಿಕೆ ಎಣಿಸಲಾಯಿತು. ಒಟ್ಟು ₹5.46 ಕೋಟಿ ನಗದು, ಚಿನ್ನಾಭರಣ ಕಾಣಿಕೆ ಬಂದಿದೆ.
35 ದಿನಗಳಲ್ಲಿ ₹5,30,92,555 ನಗದು, ₹15,14,000 ಮೊತ್ತದ ನಾಣ್ಯಗಳು ಸೇರಿ ₹5,46,06,555 ನಗದು; 127 ಗ್ರಾಂ ಚಿನ್ನ, 1,820 ಗ್ರಾಂ ಬೆಳ್ಳಿ ಕಾಣಿಕೆ ಬಂದಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.