ಬೆಳಗಾವಿ :
ಕಲೆ ಮತ್ತು ಸಂಸ್ಕೃತಿಕ ಬಿಡಾಗಿರುವ ಕರ್ನಾಟಕ ರಾಜ್ಯದಲ್ಲಿ, ನಸೀಶಿ ಹೋಗುತಿರುವ ತಳ ಸಮುದಾಯದ ಸಂಸ್ಕೃತಿಕ ಕಲೆಯನ್ನು ಉಳಿಸಿ ಬೆಳಸಲು ಕರ್ನಾಟಕ ಸರ್ಕಾರ ಬದ್ದವಾಗಿದೆ ಎಂದು “ಮೂಲ ಸಂಸ್ಕೃತಿ, ಕನ್ನಡ ಸಂಸ್ಕೃತಿ” ಜಿಲ್ಲಾ ಸಂಚಾಲಕ ಮಂಜುನಾಥ ಪಮ್ಮಾರ ಅವರು ಹೇಳಿದರು.
ಸವದತ್ತಿ ತಾಲೂಕಿನ ವೆಂಕಟೇಶ ನಗರದಲ್ಲಿ (ಕಾರ್ಲಕಟ್ಟಿ ತಾಂಡೆ )ಬಂಜಾರ ಮಹಿಳಾ ಸಮೂಹ ನೃತ್ಯ ಕಲಾತಂಡದ 20 ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯದಲ್ಲಿ ತಳ ಸಮುದಾಯಗಳ ಸಂಸ್ಕೃತಿಕ ಕಲೆಗಳು ನಶಿಸಿ ಹೋಗುತ್ತಿರುವದನ್ನು ಮನಗಂಡು ಪ್ರತಿ ಜಿಲ್ಲೆಯಲ್ಲಿ ಕಲೆಗಳ ಉತ್ತೇಜನಕ್ಕಾಗಿ ಕ್ರಮ ಕೈಗೊಂಡಿದ್ದು ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ತರಬೇತಿ ಶಿಕ್ಷಕ ವಾಸುದೇವ ರಾಠೋಡ, ಊರಿನ ಹಿರಿಯರಾದ ರಾಮಣ್ಣ ಗೌಡರ,ಶಂಕರ ಕಾರಬಾರಿ,ವಾಲಪ್ಪ ಪಮ್ಮಾರ, ವೆಂಕಟೇಶ ನಾಯ್ಕ,ಶಂಕರ ಪೂಜಾರಿ, ಗೋಪಾಲ ರಾಠೋಡ,ಸುರೇಶ ಲಮಾಣಿ,ಪಾಂಡಪ್ಪ ಲಮಾಣಿ, ಸೋಮಪ್ಪ ಲಮಾಣಿ ಮತ್ತು ಇತರರು ಉಪಸ್ಥಿತರಿದ್ದರು. ಗ್ರಾಮದ 20 ಜನ ಕಲಾ ಆಸಕ್ತ ಮಹಿಳೆಯರು ಭಾಗವಹಿಸಿದ್ದರು.